ಮೈಸೂರಿನಲ್ಲಿ “ಜಸ್ಟ್ ಪಾಸ್” ಚಿತ್ರಕ್ಕೆ ಬಿರುಸಿನ ಚಿತ್ರೀಕರಣ.

ರಾಯ್ಸ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ “ಜಸ್ಟ್ ಪಾಸ್” ಚಿತ್ರಕ್ಕೆ ಅರಮನೆ ನಗರಿ ಮೈಸೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

ಮೈಸೂರಿನ ಹಾರ್ಡ್ವಿಕ್ ಪಬ್ಲಿಕ್ ಕಾಲೇಜ್, ನಂಜರಾಜ ಹಾಲ್, ಆಲಮ ಚೌಟ್ರಿ, ಗೌರ್ನಮೆಂಟ್ ಗೆಸ್ಟ್ ಹೌಸ್, ಲೇಡಿಸ್ ಕ್ಲಬ್ ಮುಂತಾದ ಕಡೆ 25 ದಿನಗಳ ಚಿತ್ರೀಕರಣ ನಡೆದಿದೆ. ನಾಯಕ ಶ್ರೀ, ನಾಯಕಿ ಪ್ರಣತಿ, ಸಾಧುಕೋಕಿಲ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ದೀಪಕ್ ರೈ(ಕಾಂತಾರ), ಪ್ರಕಾಶ್ ತುಂಬಿನಾಡು, ಗೋವಿಂದೇಗೌಡ, ದಾನಪ್ಪ ಮುಂತಾದ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

“ತರ್ಲೆ ವಿಲೇಜ್”, ” ಪರಸಂಗ “, “ದೊಡ್ಡಹಟ್ಟಿ ಬೋರೇಗೌಡ” ಚಿತ್ರಗಳನ್ನು ನಿರ್ದೇಶಿಸಿರುವ ಕೆ.ಎಂ.ರಘು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹರ್ಷವರ್ಧನ್ ರಾಜ್ “ಜಸ್ಟ್ ಪಾಸ್” ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಸುಜಯ್ ಕುಮಾರ್ ಛಾಯಾಗ್ರಹಣ ಮಾಡುತ್ತಿದ್ದಾರೆ.

About The Author