Sunday, September 8, 2024

Latest Posts

ಮೈಸೂರು ಪಾಕ್ ಇನ್ಮುಂದೆ ತಮಿಳು ಪಾಕ್..! ಏನಿದು ರಿಯಾಲಿಟಿ..?

- Advertisement -

ಕರ್ನಾಟಕ ಟಿವಿ : ಕನ್ನಡಿಗರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಕೊಡಲು ಕೇಂದ್ರ ಸರ್ಕಾರ ಸಜ್ಜಾದಂತಿದೆ. ರಾಜ್ಯದ ಹೆಮ್ಮೆ ಮೈಸೂರು ಪಾಕ್ ಭೌಗೋಳಿಕೆ ಗುರುತಿಸುವಿಕೆಯಲ್ಲಿ ತಮಿಳುನಾಡಿಗೆ ಸೇರಿದ್ದು ಎನ್ನುವ ಟ್ಯಾಗ್ ಸಿಗಲಿದೆ. ಮೈಸೂರು ಪಾಕ್ ಇನ್ಮುಂದೆ ತಮಿಳುನಾಡಿನವರ ಪಾಕ್ ಆಗಲಿದೆ ಹೀಗಂತ ಕಾಂಗ್ರೆಸ್ ನಾಯಕರು ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.. ತಕ್ಷಣ ಈ ಸುದ್ದಿ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹರಡಿ ಎಲ್ಲರೂ ಬಿಜೆಪಿ ವಿರುದ್ಧ ಮುಗಿಬಿದ್ರು. ನಂತರ ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಆನಂದ್ ರಂಗನಾಥನ್ ನಾನು ನಿರ್ಮಲ ಸೀತಾರಾಮನ್ ಗೆ ಮೈಸೂರು ಪಾಕ್ ಕೊಟ್ಟು ವಿಶ್ ಮಾಡಿದ್ದೆ, ಈಗ ತಮಿಳುನಾಡು ಮೈಸೂರು ಪಾಕ್ ಇದ್ದಂತೆ ಅಂತ ಟ್ವೀಟ್ ಮಾಡಿದ್ರು. ಆದ್ರೆ ಅದು ಮೈಸೂರು ಪಾಕ್ ನಮ್ದು ಇನ್ಮುಂದೆ ಮೈಸೂರು ಪಾಕ್ ತಮಿಳುನಾಡಿಗೆ ಸೇರುತ್ತೆ ಅಂತ ಸುದ್ದಿ ಹರಿದಾಡ್ತು.

ಮೈಸೂರು ಪಾಕ್ ತಮಿಳುನಾಡು ನಮಗೆ ಸೇರಬೇಕು ಅಂತ ವಾದ ಮಾಡ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರದ ಏಕ ಸದಸ್ಯ ಸಮಿತಿ ಈ ತೀರ್ಮಾನ ಕೈಗೊಂಡಿದ್ದು ಭೌಗೋಳಿಕ ಐಡೆಂಟಿಫಿಕೇಷನ್ ನೀಡಲು ಮುಂದಾಗಿದೆ ಅಂತ ಕಾಂಗ್ರೆಸ್ ನಾಯಕರು ಆರೋಪಿಸಿದ್ರು. ಇದೀಗ ಮೈಸೂರು ಪಾಕ್ ವಿಚಾರದಲ್ಲಿ ತಮಿಳುನಾಡಿಗೆ ಕೇಂದ್ರ ಸರ್ಕಾರ ಲಾಭ ಮಾಡಿಲ್ಲ. ಇದು ಕಾಂಗ್ರೆಸ್ ನಾಯಕರ ಎಡವಟ್ಟು ಅನ್ನೋದು ಬಹಿರಂಗವಾಗಿದೆ.

ಯಸ್ ವೀಕ್ಷಕರೇ ಕೇಂದ್ರ ಬಿಜೆಪಿ ಸರ್ಕಾರ ಕನ್ನಡಿಗರ ಹಿತ ಕಾಯುವಲ್ಲಿ ವಿಫಲವಾಗಿದೆಯಾ..? ಹೌದು ಅಥವಾ ಇಲ್ಲ ಎಂದು ಕಾಮೆಂಟ್ ಮಾಡಿ

- Advertisement -

Latest Posts

Don't Miss