Wednesday, December 11, 2024

Latest Posts

ಮಹಾರಾಜ ಟ್ರೋಫಿ ಟಿ20: ಇಂದು ಮೈಸೂರು-ಗುಲ್ಬರ್ಗಾ ಕ್ವಾಲಿಫೈಯರ್ ಕದನ 

- Advertisement -

ಬೆಂಗಳೂರು: ಕರುಣ್ ನಾಯರ್ ನೇತೃತ್ವದ ಮೈಸೂರು ವಾರಿಯರ್ಸ್ ಇಂದು ಗುಲ್ಬರ್ಗಾ ಮಿಸ್ಟಿಕ್ಸ್ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಕ್ವಾಲಿಫೈಯರ್ 2ರಲ್ಲಿ ಎದುರಿಸಲಿದೆ.

ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಮಾಡು ಇಲ್ಲವೇ ಮಡಿ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ. ಗೆದ್ದ ತಂಡ ಫೈನಲ್‍ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಎದುರಿಸಲಿದೆ.

ಈಗಾಗಲೇ ಗುಲ್ಬರ್ಗಾ ತಂಡ ಲೀಗ್ ಹಂತವನ್ನು ಎರಡನೆ ಸ್ಥಾನದಲ್ಲಿ ಪೂರ್ಣಗೊಳಿಸಿತ್ತು. 10 ಪಂದ್ಯಗಳಲ್ಲಿ 6 ಪಂದ್ಯವನ್ನು ಜಯಿಸಿತ್ತು. ಇನ್ನು ಮೈಸೂರು ವಾರಿಯರ್ಸ್ ಅಂಕಪಟ್ಟಿಯಲ್ಲಿ ನಾಲ್ಕನ ಸ್ಥಾನವನ್ನು ಪೂರೈಸಿತು. 5 ಪಂದ್ಯ ಸೋತು 5 ಪಂದ್ಯಗಳನ್ನು ಗೆದ್ದುಕೊಂಡಿತು.

ನಾಕೌಟ್ ಹಂತದಲ್ಲಿ ಮೈಸರು ವಾರಿಯರ್ಸ್ ತಂಡದ ನಾಯಕ ಕರುಣ್ ನಾಯರ್ ಫಾರ್ಮ್ ಕಳೆದುಕೊಂಡರು. ಆದರೆ ನಿಹಾಲ್ ಉಳ್ಳಾಲ್ ಮತ್ತು ಅನುಭವಿ ಶ್ರೇಯಸ್ ಗೋಪಾಲ್ ಜವಾಬ್ದಾರಿ ಹೊತ್ತು ತಂಡವನ್ನು ಎಲಿಮಿನೇಟರ್ ವರೆಗೂ ತೆಗೆದುಕೊಂಡು ಬಂದಿದ್ದಾರೆ.

ವಾರಿಯರ್ಸ್ ತಂಡದ ಪವನ್ ದೇಶಪಾಂಡೆ ಹೇಳಿಕೊಳ್ಳುವ ರೀತಿಯಲ್ಲಿ ಬ್ಯಾಟಿಂಗ್ ಮಾಡದಿದ್ದರೂ ಆರೆಂಜ್ ಕ್ಯಾಪ್‍ಗಾಗಿ ಮಾಯಂಕ್ ಅಗರ್‍ವಾಲ್‍ಗೆ  ಪೈಪೋಟಿ ನೀಡುತ್ತಿದ್ದಾರೆ.ಆಲ್ರೌಂಡರ್ ಶ್ರೇಯಸ್ ಒಳ್ಳೆಯ ಫಾರ್ಮ್‍ನಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವಿದ್ಯಾಧರ್ ಪಾಟೀಲ್ ಮತ್ತು ಶುಭಾಂಗ್ ಹೆಗಡೆ ಒಳ್ಳೆಯ ಸಾಥ್ ಕೊಟ್ಟಿದ್ದಾರೆ.  ಶ್ರೇಯಸ್ ಮ್ತತು ಪಾಟೀಲ್ ತಲಾ 16 ವಿಕೆಟ್ ಪಡೆದು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಶುಭಾಂಗ್ ಹೆಗಡೆ 14 ವಿಕೆಟ್ ಪಡೆದಿದ್ದಾರೆ.

ಲೀಗ್‍ನಲ್ಲಿ  ಗುಲ್ಬರ್ಗಾ ಅತ್ಯುತ್ತಮ ಪ್ರದರ್ಶನ 

ಇನ್ನು ಗುಲ್ಬರ್ಗಾ ಮಿಸ್ಟಿಕ್ಸ್ ಕ್ವಾಲಿಫೈಯರ್ 1ರಲ್ಲಿ ಬೆಂಗಳೂರು ವಿರುದ್ಧ ಸೋಲುವ ಮುನ್ನ ಲೀಗ್‍ನ ಕೊನೆಯಲ್ಲಿ 4ರಲ್ಲಿ 3 ಪಂದ್ಯವನ್ನು ಗೆದ್ದು  ಬಲಿಷ್ಠ ತಂಡವೆಂಬುದನ್ನೂ ಸಾಬೀತು ಮಾಡಿದೆ. ಮಧ್ಯಮ ಕ್ರಮಾಂಕದಲ್ಲ ರೋಹನ್ ಪಾಟೀಲ್, ನಾಯಕ ಮನೀಶ್ ಪಾಂಡೆ, ದೇವದತ್ ಪಡಿಕಲ್‍ರಂತಹ ತಾರಾ ಬ್ಯಾಟರ್‍ಗಳ್ಳಿದ್ದಾರೆ.

ರೋಹನ್, ಮನೀಶ್ ಮತ್ತು ಜೆಸ್ವಂತ್ ಮೇಲೆ ತಂಡ ಅವಲಂಭಿಸಿದೆ.  ಬೌಲಿಂಗ್ ವಿಭಾಗದಲ್ಲಿ ವಿಶ್ವತ್ ಕಾವೇರಪ್ಪ 15 ವಿಕೆಟ್ ಮತ್ತು ಅಜಿತ್ ಕಾರ್ತಿಕ್ 13 ವಿಕೆಟ್ ಪಡೆದರು.ಟೂರ್ನಿಯಲ್ಲಿ ಉಭಯ ತಂಡಗಳು ಒಳ್ಳೆಯ ಪ್ರದರ್ಶನ ನೀಡಿದ್ದು ಇಂದು ಯಾರು ಗೆಲ್ಲುತ್ತಾರೆ ಅನ್ನೊ ಕುತೂಹಲ ಮೂಡಿಸಿದೆ.

 

 

 

 

- Advertisement -

Latest Posts

Don't Miss