ನಿಜವಾಗಿಯೇ ಬಿಡ್ತು ನಾಗಚೈತನ್ಯ-ಸಮಂತಾ ವಿಚ್ಛೇದನ ಸುದ್ದಿ…!

www.karnatakatv.net : ಟಾಲಿವುಡ್ನ ಸ್ಟಾರ್ ದಂಪತಿಗಳಾಗಿದ್ದ ನಾಗ ಚೈತನ್ಯ ಮತ್ತು ಸಮಂತಾ ಅಕ್ಕಿನೇನಿ ವಿಚ್ಛೇದನ ಪಡೆದುಕೊಳ್ಳೋ ಮೂಲಕ ನಾಲ್ಕು ವರ್ಷದ ತಮ್ಮ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಇವರಿಬ್ಬರ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ ಅನ್ನೋ ಅನುಮಾನ ಹಲವು ದಿನಗಳಿಂದಲೂ ಕೇಳಿಬರುತ್ತಲೇ ಇತ್ತು. ಆದರೆ ಈ ಬಗ್ಗೆ  ಕುಟುಂಬದ ಯಾರೊಬ್ಬರೂ ಅಧಿಕೃತ ಹೇಳಿಕೆ ನೀಡಿರಲಿಲ್ಲ.

ಆದ್ರೆ ಇಂದು ಖುದ್ದು ನಟ ನಾಗಚೈತನ್ಯ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಚ್ಚೇದನದ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರೋ ನಾಗಚೈತನ್ಯ,  ಸುದೀರ್ಘ ಸಮಾಲೋಚನೆ ಬಳಿಕ ನಾನು ಮತ್ತು ಸ್ಯಾಮ್ ಗಂಡ ಹೆಂಡತಿ ಸಂಬಂಧದಿಂದ ಹೊರ ನೆಡಯುತ್ತಿದ್ದೇವೆ. ದಶಕದ ಕಾಲ ನಮ್ಮ ಸ್ನೇಹ ನಮ್ಮಿಬ್ಬರ ಬಾಂಧವ್ಯವನ್ನು ಗಟ್ಟಿಗೊಳಿಸಿತ್ತು. ಮುಂದೆಯೂ ನಾವು ಆ ಸ್ನೇಹ ಬಂಧವನ್ನು  ಮುಂದುವರಿಸಲಿದ್ದೇವೆ,

ಹೀಗಾಗಿ ಇಂಥಹ ಕಠಿಣ ಸನ್ನಿವೇಶದಲ್ಲಿ ನಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಚರ್ಚೆ ಮಾಡಬೇಡಿ, ನಮಗೆ ಈ ಪರಿಸ್ಥಿತಿಯಿಂದ ಮುಂದೆ ಸಾಗಲು ಸಮಯ ಬೇಕಿದೆ ಅಂತ ಅಭಿಮಾನಿಗಳು ಮತ್ತು ಮಾಧ್ಯಮಗಳಿಗೆ ನಾಗಚೈತನ್ಯ ಮನವಿ ಮಾಡಿಕೊಂಡಿದ್ದಾರೆ.  2017ರ ಅಕ್ಟೋಬರ್ 7ರಂದು ನಾಗಚೈತನ್ಯ ಮತ್ತು ಸ್ಯಾಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ 4ನೇ ವೆಡ್ಡಿಂಗ್ ಆನ್ನಿವರ್ಸರಿಗೆ ಇನ್ನು ಕೆಲವೇ ದಿನಗಳು ಬಾಕಿ ಇರೋ ಬೆನ್ನಲ್ಲೇ ಚೈ-ಸ್ಯಾಮ್ ಅಭಿಮಾನಿಗಳಿಗೆ ಈ ಕಹಿ ಸುದ್ದಿ ನೀಡಿದ್ದಾರೆ.

About The Author