- Advertisement -
Dharwad News: ತವರೂರು ಹಿರಿಮೆಯನ್ನು ಹೆಚ್ಚಿಸುವ ಹಬ್ಬ ನಾಗರ ಪಂಚಮಿ. ಬೆಲೆ ಏರಿಕೆ ಬಿಸಿ ಮಧ್ಯೆ ಹಬ್ಬದ ಖರೀದಿ ಭರಾಟೆ ಧಾರವಾಡ ಮಾರುಕಟ್ಟೆಯಲ್ಲಿ ಜೋರಾಗಿಯೇ ಇದೆ.
ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ಆಚರಣೆಗೆ ಧಾರವಾಡ ಜನರು ಸಿದ್ಧತೆ ಜೋರಾಗಿದ್ದು, ಬೆಲೆ ಏರಿಕೆಯನ್ನು ಲೆಕ್ಕಿಸದೆ ನಗರದ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದರು.
ಮನೆ ಮನೆಗಳಲ್ಲಿ ನಾಗರ ಮೂರ್ತಿಗೆ ಹಾಲೆರೆಯುವ ಹಬ್ಬ ನಡೆಯಲಿದ್ದು, ಧಾರವಾಡದ ಸುಪರ್ ಮಾರುಕಟ್ಟೆ, ಗಾಂಧಿ ಚೌಕ್, ಟಿಕಾರೆ ರಸ್ತೆ, ಅಕ್ಕಿ ಪೇಟೆ ಹಾಗೂ ನೆಹರು ಮಾರುಕಟ್ಟೆಯಲ್ಲಿ ಜನರು ಬಣ್ಣ ಬಣ್ಣದ ನಾಗಪ್ಪನ ಮೂರ್ತಿ, ಪೂಜಾ ಸಾಮಗ್ರಿ, ಹೂವು, ಹಣ್ಣು, ಹಾಗೂ ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡುತ್ತಿರುವ ದೃಶ್ಯಗಳು ಕಂಡುಬಂದವು.
- Advertisement -