ಬೆಂಗಳೂರು: ಪ್ರೀತಿಸಲು ನಿರಾಕರಿಸಿ, ಮದುವೆಯಾಗಲು ಒಪ್ಪದಿದ್ದಕ್ಕೆ ಯುವತಿಯ ಮೇಲೆ ನಾಗೇಶ್ ಎಂಬಾತ ಆ್ಯಸಿಡ್ ದಾಳಿ ನಡೆಸಿದ್ದನು. ಆ್ಯಸಿಡ್ ದಾಳಿಗೊಳಗಾದಂತ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ್ಯಸಿಡ್ ಎರಚಿದ ಬಳಿಕ ನಾಪತ್ತೆಯಾಗಿದ್ದಂತ ದಾಳಿಕೋರ ನಾಗೇಶ್ ನನ್ನು ಕೊನೆಗೂ ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆ್ಯಸಿಡ್ ಎರಚಿದ ಬಳಿಕ ತಮಿಳುನಾಡಿಗೆ ತೆರಳಿದ್ದಂತ ಆರೋಪಿ ನಾಗೇಶ್, ಅಣ್ಣಾಮಲೈನಲ್ಲಿನ ದೇವಸ್ಥಾನವೊಂದರಲ್ಲಿ ಸ್ವಾಮೀಜಿಯಾಗಿ ತಲೆಮರೆಸಿಕೊಂಡಿದ್ದನು ಎನ್ನಲಾಗಿದೆ. ಈ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಇಂದು ಆ್ಯಸಿಡ್ ಆರೋಪಿ ನಾಗೇಶ್ ನನ್ನು ಬಂಧಿಸಿದೆ.
ಅಂದಹಾಗೇ ಏಪ್ರಿಲ್ 28ರಂದು ಯುವತಿಯನ್ನು ಫಾಲೋ ಮಾಡಿಕೊಂಡು ತೆರಳಿದ್ದಂತ ಆರೋಪಿ ನಾಗೇಶ್, ಮದುವೆಯಾಗಲು ನಿರಾಕರಿಸಿದ್ದರಿಂದ ಆ್ಯಸಿಡ್ ದಾಳಿ ನಡೆಸಿದ್ದನು. ಸುಂಕದಕಟ್ಟೆಯಲ್ಲಿ ಈ ಘಟನೆ ನಡೆದಿತ್ತು. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ನಾಗೇಶ್ ಪತ್ತೆಗಾಗಿ ಪೊಲೀಸರ 10 ತಂಡ ಕೂಡ ರಚಿಸಲಾಗಿತ್ತು. ಅಲ್ಲದೇ ಲುಕ್ ಔಟ್ ನೋಟಿಸ್ ಕೂಡ ಜಾರಿಗೊಳಿಸಲಾಗಿತ್ತು.




