Sunday, September 8, 2024

Latest Posts

ಪ್ರಾರ್ಥನೆ ವೇಳೆ ಬಾಂಬ್​ ದಾಳಿ, ಚರ್ಚ್​ನಲ್ಲಿ ಪ್ರಾಣಬಿಟ್ಟ 50ಕ್ಕೂ ಹೆಚ್ಚು ಭಕ್ತಾದಿಗಳು..!

- Advertisement -

ಚರ್ಚ್​ನಲ್ಲಿ ಭಕ್ತಾದಿಗಳು ಪ್ರಾರ್ಥನೆ ಮಾಡುತ್ತಿದ್ದ ಸಂದರ್ಭದಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ಮತ್ತು ಬಾಂಬ್​ ಎಸೆದು ಅಟ್ಟಹಾಸ ಮೆರೆದಿರುವ ದುರ್ಘಟನೆ ನೈಜೀರಿಯಾದಲ್ಲಿ ನಡೆದಿದೆ. ಭಾನುವಾರ ಬಂದೂಕುಧಾರಿಗಳು ಭಕ್ತರ ಮೇಲೆ ಗುಂಡು ಹಾರಿಸಿ ಬಾಂಬ್​ ದಾಳಿ ನಡೆಸಿರುವ ಘಟನೆ ನೈರುತ್ಯ ನೈಜೀರಿಯಾದ ಕ್ಯಾಥೋಲಿಕ್ ಚರ್ಚ್‌ನಲ್ಲಿ ನಡೆದಿದೆ.

ಈ ವೇಳೆ, ಸುಮಾರು 50ಕ್ಕೂ ಹೆಚ್ಚು ಭಕ್ತಾದಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಒಂಡೋ ರಾಜ್ಯದ ಸೇಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್​ನಲ್ಲಿ ಕ್ರಿಶ್ಚಿಯನ್ನರಿಗೆ ವಿಶೇಷ ದಿನವಾದ ಪೆಂಟೆಕೋಸ್ಟ್ ಸಂಡೇ ದಿನದಂದ, ಯೇಸುವಿನ ಭಕ್ತರು ಪ್ರಾರ್ಥನೆ ಕೈಗೊಂಡಿದ್ದರು. ಭಕ್ತರು ಚರ್ಚ್​ನಲ್ಲಿ ಜಮಾಯಿಸಿದಂತೆಯೇ ದಾಳಿಕೋರರು ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಬಾಂಬ್​ ಎಸೆದು ಅಟ್ಟಹಾಸ ಮೆರೆದಿದ್ದಾರೆ. ಈ ದಾಳಿಯಲ್ಲಿ ಮಕ್ಕಳು ಸೇರಿದಂತೆ 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ಶಾಸಕ ಒಗುನ್ಮೊಲಸುಯಿ ಒಲುವೊಲೆ ತಿಳಿಸಿದ್ದಾರೆ.

ಘಟನೆಯಲ್ಲಿ ಚರ್ಚ್​ನ ಪಾದ್ರಿಯನ್ನು ಅಪಹರಿಸಲಾಗಿದೆ ಎಂದು ಓವೊ ಪ್ರದೇಶವನ್ನು ಪ್ರತಿನಿಧಿಸುವ ಅಧ್ಯಕ್ಷ ಅಡೆಲೆಗ್ಬೆ ಟಿಮಿಲೆಯಿನ್ ಹೇಳಿದರು. ‘ನಮ್ಮ ಹೃದಯಗಳು ಭಾರವಾಗಿವೆ’ ಎಂದು ಒಂಡೋ ಗವರ್ನರ್ ರೊಟಿಮಿ ಅಕೆರೆಡೋಲು ಭಾನುವಾರ ಟ್ವೀಟ್ ಮಾಡಿದ್ದಾರೆ.

ಅಧಿಕಾರಿಗಳು ತಕ್ಷಣ ಅಧಿಕೃತ ಸಾವಿನ ಸಂಖ್ಯೆಯನ್ನು ಬಿಡುಗಡೆ ಮಾಡಿಲ್ಲ. ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಎಂದು ಟಿಮಿಲೆಯಿನ್ ಹೇಳಿದರು. ಆದರೆ, ಇತರರು ಈ ಅಂಕಿ – ಅಂಶವನ್ನು ಹೆಚ್ಚಿಸಿದ್ದಾರೆ. ದಾಳಿಯ ಸ್ಥಳದಿಂದ ಕಂಡು ಬರುವ ವಿಡಿಯೋಗಳಲ್ಲಿ ತಮ್ಮವರನ್ನು ಕಳೆದುಕೊಂಡ ಸಂಬಂಧಿಕರ ರೋದನೆ ಮುಗಿಲು ಮುಟ್ಟಿದೆ.

ಚರ್ಚ್ ದಾಳಿಯ ಘಟನೆ ಹಿಂದೆ ಯಾರ ಕೈವಾಡವಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಒಂಡೋ ರಾಜ್ಯವೂ ನೈಜೀರಿಯಾದ ಅತ್ಯಂತ ಶಾಂತಿಯುತ ರಾಜ್ಯಗಳಲ್ಲಿ ಒಂದಾಗಿದೆ. ಆದರೂ ರಾಜ್ಯ ಸರ್ಕಾರ ರೈತರು ಮತ್ತು ಕುರಿಗಾರರ ನಡುವೆ ಹೆಚ್ಚುತ್ತಿರುವ ಹಿಂಸಾತ್ಮಕ ಸಂಘರ್ಷದಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಅಭಿಜಿತ್ ಕರ್ನಾಟಕ ಟಿವಿ ಬೆಂಗಳೂರು.

- Advertisement -

Latest Posts

Don't Miss