Beauty tips:
ಅನೇಕ ಹುಡುಗಿಯರು ತಮ್ಮ ಉಗುರುಗಳು ಉದ್ದ ಮತ್ತು ಸುಂದರವಾಗಿರಬೇಕು ಎಂದು ಬಯಸುತ್ತಾರೆ. ಆದರೆ ಉಗುರುಗಳು ಬೇಗನೆ ಬೆಳೆಯುವುದಿಲ್ಲ ಮತ್ತು ಬೆಳೆದ ಉಗುರುಗಳು ಮುರಿದು ಹೋಗುತ್ತದೆ ಹಾಗಾದರೆ ಕೈ ಉಗುರುಗಳು ಮುರಿಯದೆ ವೇಗವಾಗಿ ಬೆಳೆಯಲು ಏನು ಮಾಡಬೇಕೆಂದು ಈಗ ತಿಳಿಯೋಣ .
ಸ್ವಲ್ಪ ಟೂತ್ ಪೇಸ್ಟ್ ಅನ್ನು ಉಗುರುಗಳ ಮೇಲೆ ಹಚ್ಚಿ ಮತ್ತು ಮೃದುವಾದ ಟೂತ್ ಬ್ರಶ್ ಸಹಾಯದಿಂದ ನಿಧಾನವಾಗಿ ಉಜ್ಜಿಕೊಳ್ಳಿ. ಆ ನಂತರ ಉಗುರುಗಳನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಈ ರೀತಿ ಸ್ಕ್ರಬ್ ಮಾಡುವುದರಿಂದ ಉಗುರುಗಳ ಮೇಲಿರುವ ಕೊಳೆ ಮತ್ತು ಫಂಗಸ್ ನಿವಾರಣೆಯಾಗಿ ಉಗುರುಗಳು ಕಾಂತಿಯುತವಾಗುತ್ತವೆ.
ನಂತರ ಒಂದು ಪಾತ್ರೆಯಲ್ಲಿ ಎರಡು ಚಮಚ ವ್ಯಾಸಲೀನ್ ಸೇರಿಸಿ ಮತ್ತು ಎರಡು ವಿಟಮಿನ್ ಇ ಕ್ಯಾಪ್ಸಿಲ್ಸ್ ನ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಸಂಗ್ರಹಿಸಿಡಿ .ಹೀಗೆ ತಯಾರಿಸಿದ ವ್ಯಾಸಲೀನ್ ಮಿಶ್ರಣವನ್ನು ಮಲಗುವ ಮುನ್ನ ಉಗುರುಗಳಿಗೆ ಹಚ್ಚಿ ಮೃದುವಾಗಿ ಮಸಾಜ್ ಮಾಡಬೇಕು. ಇದನ್ನು ನಿಯಮಿತವಾಗಿ ಒಂದು ವಾರ ಮಾಡಿದರೆ ಉಗುರುಗಳು ಒಡೆಯದೆ ವೇಗವಾಗಿ ಬೆಳೆಯುತ್ತವೆ.
ಇದು ಉಗುರುಗಳಿಗೆ ತೇವಾಂಶವನ್ನು ಒದಗಿಸುತ್ತದೆ ಮತ್ತು ಉಗುರುಗಳನ್ನು ಸುಂದರವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಉಗುರುಗಳು ಮುರಿಯದೆ ಬಲವಾಗಿರುವುದಕ್ಕೆ ಇದು ಸಹಾಯ ಮಾಡುತ್ತದೆ .ನೀವು ಕ್ರಮೇಣ ನೈಲ್ ಪೋಲಿಷ್ ಹಚ್ಚುವುದರಿದ ನಿಮ್ಮ ಉಗುರಿನ ಸಮಸ್ಯೆ ಕಡಿಮೆಯಾಗುತ್ತದೆ .ನೇಲ್ ಪಾಲಿಶ್ ಉಗುರುಗಳನ್ನು ಮುರಿಯದೆ ಬಲವಾಗಿ ಇಡುತ್ತದೆ. ನಿಮ್ಮ ಉಗುರುಗಳು ಮುರಿಯದೆ ಸುಂದರವಾಗಿ ಬೆಳೆಯಬೇಕೆಂದರೆ ಈ ಸಲಹೆಯನ್ನು ಅನುಸರಿಸಿ. ತ್ವರಿತ ಫಲಿತಾಂಶಕ್ಕಾಗಿ, ನೀವು ದಿನಕ್ಕೆ ಎರಡು ಬಾರಿ ಉಗುರುಗಳ ಮೇಲೆ ವ್ಯಾಸಲೀನ್ ಮಿಶ್ರಣವನ್ನು ಅನ್ವಯಿಸಬಹುದು.