ಕೇಂದ್ರ ಸರ್ಕಾರ ದೇಶದ ಮಿಡ್ಲ್ ಕ್ಲಾಸ್ ಜನರಿಗೆ, ನವರಾತ್ರಿಯ ಬಿಗ್ ಗಿಫ್ಟ್ ನೀಡಿದೆ. ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ, ಜಿಎಸ್‌ಟಿ ತೆರಿಗೆ ಸ್ಲ್ಯಾಬ್‌ಗಳನ್ನು 4ರಿಂದ 2ಕ್ಕೆ ಇಳಿಕೆ ಮಾಡಿದೆ. ಸೆಪ್ಟೆಂಬರ್ 22ರಿಂದಲೇ ಈ ಹೊಸ ದರ ಅನ್ವಯವಾಗಲಿದೆ. ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 3ರಂದು, ಸರಕು ಮತ್ತು ಸೇವಾ ಮಂಡಳಿಯ 56ನೇ ಸಭೆ ನಡೆಸಲಾಯ್ತು. 175ಕ್ಕೂ ಹೆಚ್ಚು ಸರಕುಗಳ ಮೇಲಿನ, ತೆರಿಗೆ ಇಳಿಸುವ ನಿರ್ಧಾರವನ್ನು ಪ್ರಕಟಿಸಲಾಗಿದೆ.
ಈವರೆಗೆ ಇದ್ದ ಶೇಕಡ 5, 12, 18, 28 ತೆರಿಗೆಯ 4 ಸ್ಲ್ಯಾಬ್‌ಗಳ ಪೈಕಿ, ಶೇಕಡ 12 ಮತ್ತು 28ರ ಸ್ಲ್ಯಾಬ್‌ಗಳನ್ನು ರದ್ದು ಮಾಡಲಾಗಿದೆ. ರದ್ದಾದ ಶ್ರೇಣಿಯಲ್ಲಿದ್ದ ಬಹುತೇಕ ಉತ್ಪನ್ನಗಳನ್ನು ಶೇಕಡ 5ರ ಶ್ರೇಣಿಗೆ ತರಲಾಗಿದೆ. ಜೊತೆಗೆ ದುಬಾರಿ ವಸ್ತುಗಳಿಗಾಗಿ ಶೇಕಡ 40ರಷ್ಟು ತೆರಿಗೆಯ ಪ್ರತ್ಯೇಕ ಸ್ತರವನ್ನು ಸೃಷ್ಟಿಸಲಾಗಿದೆ.
ಯಾವುದು ಅಗ್ಗ..?
(ಶೇ. 12ರಿಂದ 5ಕ್ಕೆ ಇಳಿಕೆ )
ಐಎಸ್‌ಕ್ರೀಂ, ಬೆಣ್ಣೆ, ತುಪ್ಪ,
ಕಾಫಿ, ಚಾಕೋಲೆಟ್, ಜ್ಯೂಸ್,
ಚೀಸ್ ಮತ್ತು ಡೈರಿ ಉತ್ಪನ್ನಗಳು
2500 ರೂ.ಗಿಂತ ಕಡಿಮೆ ಬೆಲೆಯ ಬಟ್ಟೆಗಳು
1000 ರೂ.ಗಿಂತ ಕಡಿಮೆ ಬೆಲೆಯ ಪಾದರಕ್ಷೆ
ಟಾಯ್ಲೆಟ್ ಸೋಪ್, ಕ್ರೀಮ್
ಪ್ರೀ ಪ್ಯಾಕ್ ನ್ಯಾಪ್‌ಕೀನ್ಸ್,
ಗೃಹೋಪಯೋಗಿ ವಸ್ತುಗಳು
ಬಹುತೇಕ ಔಷಧಗಳು, ಹಣ್ಣು,
ಮೆಡಿಕಲ್ ಗ್ರೇಡ್ ಆಕ್ಸಿಜನ್,
ಪ್ರಯೋಗಾಲಯ ಕಿಟ್‌ಗಳು
ಡಯಾಗ್ನಾಸ್ಟಿಕ್ ಕಿಟ್‌ಗಳು
ಗ್ಲುಕೋಮೀಟರ್ ಮತ್ತು ಟೆಸ್ಟ್ ಸ್ಟ್ರಿಪ್ಸ್
ರಸಗೊಬ್ಬರ,
ಕೃಷಿ ಸಂಬಂಧಿತ ಉತ್ಪನ್ನಗಳು
ಕರಕುಶಲ ಉತ್ಪನ್ನಗಳು
ಕನ್ನಡಕಗಳು
ಟ್ರ್ಯಾಕ್ಟರ್, ಜೈವಿಕ ಕೀಟನಾಶಕ,
ಸೂಕ್ಷ್ಮ ಪೋಷಕಾಂಶಗಳು
ಹನಿ, ತುಂತುರು ನೀರಾವರಿ ಉಪಕರಣಗಳು,
ಕೃಷಿ, ತೋಟಗಾರಿಕೆ, ಅರಣ್ಯ ಉಪಕರಣಗಳು
ಸೇವ್ ಮಿಕ್ಸರ್,
ಹೊಲಿಗೆ ಯಂತ್ರಗಳು ಮತ್ತು ಬಿಡಿಭಾಗಗಳು
ಯಾವುದು ಅಗ್ಗ..?
(ಶೇ. 18ರಿಂದ 5ಕ್ಕೆ ಇಳಿಕೆ )
ಥರ್ಮೋಮೀಟರ್
ಟೈರ್ ಮತ್ತು ಪಾರ್ಟ್‌ಗಳು
ಹೇರ್ ಆಯಿಲ್, ಶ್ಯಾಂಪೂ,
ಟೂತ್ ಪೇಸ್ಟ್, ಸಾಬೂನು,
ಟೂತ್ ಬ್ರಶ್, ಶೇವಿಂಗ್ ಕ್ರೀಮ್
ಯಾವುದು ದುಬಾರಿ..?
(ಶೇ. 40ರಷ್ಟು ತೆರಿಗೆ )
ತಂಬಾಕು, ಪಾನ್ ಮಸಾಲಾ,
ಬೀಡಿ, ಸಿಗರೇಟ್,
ಸಿಹಿ ತಿನಿಸುಗಳು,
ಐಷಾರಾಮಿ ಕಾರುಗಳು,
ಜಂಕ್ ಫುಡ್
ಏರೇಟೆಡ್ ಪಾನಿಯಗಳು
ರಿವಾಲ್ವರ್, ಪಿಸ್ತೂಲ್,
ಬೆಟ್ಟಿಂಗ್, ಕ್ಯಾಸಿನೋ,
ಗ್ಯಾಂಬ್ಲಿಂಗ್, ಕುದುರೆ ರೇಸ್,
ಲಾಟರಿ, ಆನ್‌ಲೈನ್ ಗೇಮ್,
ಯಾವುದು ದುಬಾರಿ..?
(ಶೇ. 12ರಿಂದ 18ಕ್ಕೆ ಏರಿಕೆ)
2500 ರೂ. ಮೀರಿದ ಸಿದ್ಧ ಉಡುಪು
1000 ರೂ.ಗಿಂತ ಕಡಿಮೆ ಬೆಲೆಯ ಪಾದರಕ್ಷೆ
ಯಾವೆಲ್ಲಾ ವಸ್ತುಗಳ ಮೇಲೆ ತೆರಿಗೆ ಇಳಿಕೆ?
( ಶೇ. 28ರಿಂದ 18 )
ಪೆಟ್ರೋಲ್ ಮತ್ತು ಪೆಟ್ರೋಲ್ ಹೈಬ್ರಿಡ್,
ಸಣ್ಣ ಕಾರುಗಳು
(1200 ಸಿಸಿ ಮತ್ತು 4000 ಎಂಎಂಗಿಂತ ಕಡಿಮೆ)
ಡೀಸೆಲ್ ಮತ್ತು ಡೀಸೆಲ್ ಹೈಬ್ರಿಡ್ ಕಾರು
(1500 ಸಿಸಿಯಿಂದ 4000 ಎಂಎಂಗಿಂತ ಕಡಿಮೆ)
ತ್ರಿಚಕ್ರ ವಾಹನಗಳು,
ಬೈಕ್, ಸ್ಕೂಟರ್ (350 ಸಿಸಿವರೆಗೆ)
ಸರಕು ಸಾಗಾಣೆ ವಾಹನಗಳು
ಟಿವಿ (32 ಇಂಚಿಗಿಂತಲೂ ಮೇಲ್ಪಟ್ಟು)
ಎಲ್‌ಇಡಿ ಮತ್ತು ಎಲ್‌ಸಿಡಿ
ಎಸಿ, ವಾಷಿಂಗ್ ಮಷಿನ್,
ಫ್ರಿಜ್, ಸಿಮೆಂಟ್,
ಮಾನಿಟರ್ ಮತ್ತು ಪ್ರೊಜೆಕ್ಟರ್
ಇನ್ನು, ಆರೋಗ್ಯ ವಲಯಕ್ಕೂ ಕೇಂದ್ರ ಸರ್ಕಾರ ಬಿಗ್ ಗಿಫ್ಟ್ ನೀಡಿದೆ. ಕ್ಯಾನ್ಸರ್ ಸೇರಿದಂತೆ ಜೀವರಕ್ಷಕ ಔಷಧಗಳ ಮೇಲಿನ ತೆರಿಗೆಯನ್ನು, ಶೂನ್ಯಕ್ಕೆ ಇಳಿಸಲಾಗಿದೆ. ಆರೋಗ್ಯ ತಪಾಸಣೆಗೆ ಬಸಳುವ ಉಪಕರಣಗಳ ಮೇಲಿನ ತೆರಿಗೆಯನ್ನೂ ಕಡಿಮೆ ಮಾಡಿದೆ. ವೈಯಕ್ತಿಯ ಆರೋಗ್ಯ ಮತ್ತು ಜೀವ ವಿಮೆ ಮೇಲಿದ್ದ ಶೇಕಡ 18ರ ತೆರಿಗೆಯನ್ನು ತೆಗೆದುಹಾಕಿದೆ.
ಪ್ರಮುಖವಾಗಿ ಶೈಕ್ಷಣಿಕ ಸಾಮಗ್ರಿಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ನಕ್ಷೆ, ಕೋಷ್ಠಕ, ಗ್ಲೋಬ್, ಪೆನ್ಸಿಲ್, ಶಾರ್ಪ್‌ನರ್, ಕ್ರಯಾನ್ಸ್, ನೋಟ್ ಬುಕ್‌ಗಳು, ರಬ್ಬರ್ ಮೇಲಿನ ತೆರಿಗೆಗಳನ್ನು ತೆಗೆದುಹಾಕಿದೆ. ತೆರಿಗೆ ಕಡಿತದಿಂದ ಕೇಂದ್ರ ಸರ್ಕಾರಕ್ಕೆ ಅಂದಾಜು 48 ಸಾವಿರ ಕೋಟಿ ರೂಪಾಯಿಗಳಷ್ಟು ಆದಾಯ ಇಳಿಕೆಯಾಗಲಿದೆ. ಒಟ್ನಲ್ಲಿ ದೇಶವಾಸಿಗಳಿಗೆ ಕೇಂದ್ರ ಬಿಜೆಪಿ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಈ ಮೂಲಕ ಬಡವರು, ಮಧ್ಯಮ ವರ್ಗದವರ ಹಿತ ಕಾದಿದೆ.