Rahul Gandhi : ನಮೋಗೆ ರಾಗಾ ಟ್ವೀಟ್ ನಲ್ಲೇ  ತಿರುಗೇಟು..?!

National News : ಕಾಂಗ್ರೆಸ್ ಪಕ್ಷದ ಮಹಾ ಮೈತ್ರಿ ಕೂಟ ಬೆಂಗಳೂರಿನಲ್ಲಿ ನಡೆದಿತ್ತು. ಈ ವೇಳೆ ಲೋಕ ಸಭೆ ಚುನಾವಣೆಗೂ ತಯಾರಿ ಕೂಡಾ ನಡೆಸುವ ಬಗ್ಗೆ ಚರ್ಚೆ ಕೂಡಾ ನಡೆದಿತ್ತು. ಹಾಗು ಕಾಂಗ್ರೆಸ್ ಯುಪಿಎ ಹೆಸರನ್ನು ಇಂಡಿಯಾ ಎಂದು ಬದಲಾಯಿಸಿದೆ. ಇಂಡಿಯನ್ ನ್ಯಾಷನಲ್  ಡೆವಲಪ್ ಮೆಂಟ್ ಇನ್ ಕ್ಲೂಸಿವ್ ಅಲೈನ್ಸ್ ಎಂಬುವುದಾಗಿ ವಿಸ್ತರಿಸಲಾಗಿದೆ.

ಆದರೆ ಈ ಹೆಸರು ನಮೂದಿಸಿದ ನಂತರ ಬಿಜೆಪಿಗರು ಇದನ್ನು ಟೀಕಿಸುತ್ತಲೇ ಇದ್ದಾರೆ. ಮೋದಿ ಕೂಡಾ ಈ ಹೆಸರಿಗೆ ಟೀಕಾ ಪ್ರಹಾರವೇ ಮಾಡಿದ್ದಾರೆ. ಈ ವಿಚಾರಕ್ಕೆ ಇದೀಗ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

ಈಸ್ಟ್ ಇಂಡಿಯಾ ಕಂಪನಿ, ಪಿಎಫ್‌ಐ, ಇಂಡಿಯನ್ ಮುಜಾಹಿದೀನ್‌ನಲ್ಲೂ ಭಾರತ ಎನ್ನುವ ಪದವಿದೆ. ಭಾರತ ಎಂದು ಹೆಸರಿದ್ದ ಮಾತ್ರಕ್ಕೆ ಅದು ಭಾರತವಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟಾಂಗ್ ನೀಡಿದ್ದರು.

ಅವರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಿರುಗೇಟು ನೀಡಿದ್ದಾರೆ. ಮಿಸ್ಟರ್‌ ಮೋದಿ ಅವರೇ, ನಿಮಗೆ ಹೇಗೆ ಬೇಕೋ ಹಾಗೆ ನಮ್ಮನ್ನು ಕರೆಯಿರಿ. ನಾವು ಇಂಡಿಯಾ. ಮಣಿಪುರ ಸಂಘರ್ಷ ಸರಿಪಡಿಸಲು ಮತ್ತು ಪ್ರತಿ ಮಹಿಳೆ, ಮಗುವಿನ ಕಣ್ಣೀರು ಒರೆಸಲು ಸಹಾಯ ಮಾಡುತ್ತೇವೆ. ಎಲ್ಲ ಜನರಿಗೆ ಪ್ರೀತಿ ಮತ್ತು ಶಾಂತಿಯನ್ನು ಮರಳಿ ತರುತ್ತೇವೆ. ನಾವು ಮಣಿಪುರದಲ್ಲಿ ಭಾರತದ ಕಲ್ಪನೆಯನ್ನು ಮರುನಿರ್ಮಾಣ ಮಾಡುತ್ತೇವೆ ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮೂಲಕ ತಿರುಗೇಟು ನೀಡಿದ್ಧಾರೆ.

Dollfin : ಡಾಲ್ಫಿನ್ ಹಿಡಿದು ತಿಂದ ಮೀನುಗಾರರ ವಿರುದ್ಧ ಕೇಸ್ ದಾಖಲು..!

Sri Ram : ಮಂತ್ರಾಲಯದಲ್ಲಿ ಶೀರಾಮನ ಮೂರ್ತಿ ನಿರ್ಮಾಣಕ್ಕೆ ಭೂಮಿ ಪೂಜೆ

KT Ramarao: ಹುಟ್ಟು ಹಬ್ಬದ ಅಂಗವಾಗಿ  ಟೊಮಾಟೋ ವಿತರಿಸಿದ ಸಚಿವರು

About The Author