Thursday, November 27, 2025

Latest Posts

ನುಂಗಲಾರದ ಬಿಸಿ ನಂದಿನಿ ತುಪ್ಪ : ಹಾಲು, ಮೊಸರು ಆಯ್ತು… ಈಗ ತುಪ್ಪವೂ ದುಬಾರಿ!

- Advertisement -

ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನತೆ ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚಿಗೆ ಹಾಲು ಮತ್ತು ಮೊಸರಿನ ಬೆಲೆ ಹೆಚ್ಚಳದಿಂದ ಗ್ರಾಹಕರು ಬೆಚ್ಚಿಬಿದ್ದಿದ್ದರು. ಈಗ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದ್ದು ನಂದಿನಿ ತುಪ್ಪದ ಬೆಲೆ ಕೂಡ ಏರಿಕೆಯಾಗಿದೆ.

ಕೆಎಂಎಫ್ ನಿಂದ ಬಿಡುಗಡೆಗೊಂಡ ಮಾಹಿತಿಯ ಪ್ರಕಾರ, ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ. ವಿಶ್ವ ಮಾರುಕಟ್ಟೆಯಲ್ಲಿ ತುಪ್ಪದ ಬೆಲೆ ಏರಿಕೆ ಹಾಗೂ ಹೆಚ್ಚಿದ ಬೇಡಿಕೆಯ ಹಿನ್ನೆಲೆಯಲ್ಲಿ ದರ ಹೆಚ್ಚಿಸುವುದು ಅನಿವಾರ್ಯವಾಯಿತು ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಒಂದು ಲೀಟರ್ ತುಪ್ಪದ ದರ ₹610 ಇತ್ತು. ಈಗ ಒಂದು ಲೀಟರ್ ತುಪ್ಪದ ಬೆಲೆ ₹700ಕ್ಕೆ ಏರಿಕೆಯಾಗಿದೆ, ಅಂದರೆ ಬರೋಬ್ಬರಿ ₹90 ಹೆಚ್ಚಳ. ಜಿಎಸ್‌ಟಿ ಸ್ಲ್ಯಾಬ್ ಸುಧಾರಣೆ ಮುನ್ನ ದರ ₹650 ಇತ್ತು, ನಂತರ 40 ರೂಪಾಯಿ ಇಳಿಕೆ ಮಾಡಲಾಗಿದ್ದರೂ ಇದೀಗ ಮತ್ತೆ ದರ ಏರಿಕೆ ಅನಿವಾರ್ಯವಾಗಿದೆ ಎಂದು ಕೆಎಂಎಫ್ ಹೇಳಿದೆ. ಕೆಎಂಎಫ್ ತುಪ್ಪಕ್ಕೆ ಕರ್ನಾಟಕದ ಜೊತೆಗೆ ಹೊರ ರಾಜ್ಯಗಳಿಂದಲೂ ಭಾರೀ ಬೇಡಿಕೆ ಇರುವುದರಿಂದ ಮಾರುಕಟ್ಟೆಯಲ್ಲಿ ದರ ಏರಿಕೆ ಕಂಡುಬಂದಿದೆ.

ಇದೀಗ ಹೊಸ ನಂದಿನಿ ತುಪ್ಪದ ದರ ಹೀಗಿದೆ — 50 ಮಿಲಿ ಬಾಟಲ್ ₹47, 100 ಮಿಲಿ ₹75, 200 ಮಿಲಿ ₹155 ರಿಂದ ₹165, 500 ಮಿಲಿ ₹350 ರಿಂದ ₹360, ಒಂದು ಲೀಟರ್ ₹700 ರಿಂದ ₹720, 5 ಲೀಟರ್ ಪ್ಯಾಕ್ ₹3,525 ಹಾಗೂ 15 ಲೀಟರ್ ಬೃಹತ್ ಪ್ಯಾಕ್ ₹11,470 ನಿಗದಿಯಾಗಿದೆ. ಒಟ್ಟಿನಲ್ಲಿ, ನಂದಿನಿ ತುಪ್ಪದ ದಿಢೀರ್ ದರ ಏರಿಕೆ ಗ್ರಾಹಕರಿಗೆ ನುಂಗಲಾರದ ಬಿಸಿ ತುಪ್ಪ ಆಗಿದ್ದು, ಜನರ ಖರ್ಚು ಮತ್ತೆ ಹೆಚ್ಚಳವಾಗಲಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss