Thursday, October 16, 2025

Latest Posts

ಸಮೀಕ್ಷೆಗೆ ‘No’ ಎಂದ ನಾರಾಯಣ ಮೂರ್ತಿ & ಸುಧಾ ಮೂರ್ತಿ ದಂಪತಿ – ಸಮೀಕ್ಷೆಯಲ್ಲಿ ಭಾಗವಹಿಸಲು ಹಿಂದೇಟು ಹಾಕಿದ್ಯಾಕೆ?

- Advertisement -

ರಾಜ್ಯ ಸರ್ಕಾರದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಂತಿಮ ಹಂತವನ್ನು ತಲುಪಿದೆ. ಹೀಗಿರೋವಾಗ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಇತ್ತೀಚೆಗೆ ನಡೆಸಿದ ಜಾತಿ ಆಧಾರಿತ ಸಮೀಕ್ಷೆಯಲ್ಲಿ ಭಾಗವಹಿಸಲು ಸುಧಾ ಮೂರ್ತಿ ಮತ್ತು ಅವರ ಪತಿ ಎನ್.ಆರ್. ನಾರಾಯಣ ಮೂರ್ತಿ ನಿರಾಕರಿಸಿದರು. ಮೂರ್ತಿ ದಂಪತಿಗಳು ಎರಡು ಪ್ರಮುಖ ಕಾರಣಗಳಿಗಾಗಿ ಸ್ವಯಂ ಘೋಷಣೆ ಪತ್ರದಲ್ಲಿ ಆಯೋಗಕ್ಕೆ ತಮ್ಮ ನಿರ್ಧಾರವನ್ನು ತಿಳಿಸಿದರು.

ನಾವು ಹಿಂದುಳಿದ ಯಾವ ಜಾತಿಗೂ ಸೇರಿದವರು ಅಲ್ಲ. ಆದ್ದರಿಂದ ಕುಟುಂಬದ ಮಾಹಿತಿಯು ಸಮೀಕ್ಷೆಯ ಉದ್ದೇಶಕ್ಕೆ ಉಪಯುಕ್ತವಾಗುವುದಿಲ್ಲ ನಮ್ಮ ಮಾಹಿತಿಯಿಂದ ಈ ಸಮೀಕ್ಷೆಗೆ ಯಾವುದೇ ಪ್ರಯೋಜನವಿಲ್ಲ. ಇವು ವೈಯಕ್ತಿಕ ಕಾರಣಗಳಾಗಿವೆ. ವೈಯಕ್ತಿಕ ಕಾರಣಗಳಿಂದಾಗಿ ತಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಲು ನಿರಾಕರಿಸುತ್ತಿರುವುದಾಗಿ ದಂಪತಿಗಳು ತಿಳಿಸಿದ್ದಾರೆ

ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಯುತ್ತಿರುವ ಈ ಜಾತಿಗಣತಿ ಬಗ್ಗೆ ಜನರಲ್ಲಿ ಕೌತುಕ ಮತ್ತು ಆತಂಕ ಎರಡೂ ಇದೆ. ಆದರೆ, ಸಮೀಕ್ಷೆಯಲ್ಲಿ ಭಾಗವಹಿಸುವುದು ಸಂಪೂರ್ಣವಾಗಿ ಸ್ವಯಂಪ್ರೇರಿತ ಎಂದು ಆಯೋಗ ಈಗಾಗಲೇ ಸ್ಪಷ್ಟಪಡಿಸಿದ್ದು, ಯಾವುದೇ ಬಲವಂತವಿಲ್ಲ ಎಂದು ತಿಳಿಸಿದೆ.

ಇನ್ನು ಇತ್ತೀಚೆಗಷ್ಟೇ ಸದಾಶಿವನಗರದಲ್ಲಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿವಾಸಕ್ಕೆ ಸಮೀಕ್ಷಾಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ನಡೆಸಿದ್ದರು. ಈ ಸಂದರ್ಭದಲ್ಲಿ ಡಿಕೆಶಿ ಹಾಗೂ ಅವರ ಕುಟುಂಬದವರಿಗೆ ಸಮೀಕ್ಷಾಧಿಕಾರಿಗಳ ಅನೇಕ ಪ್ರಶ್ನೆಗಳನ್ನ ಕೇಳಿದ್ರು. ಈ ಬಗ್ಗೆ ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದ್ದರು. ಟೂ ಮಚ್ ಕ್ವಶ್ಚನ್ ಎಂದು ಗರಂ ಆಗಿದ್ದರು. ​

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss