ಕರ್ನಾಟಕ ಟಿವಿ : ನವದೆಹಲಿಯ ಪ್ರಧಾನಿ ಕಚೇರಿಯಲ್ಲಿಂದು ಪೇಜಾವರಶ್ರೀಗಳು ನರೇಂದ್ರ ಮೋದಿಯವರನ್ನ ಭೇಟಿಯಾದ್ರು. ಐದು ವರ್ಷಗಳ ಮೋದಿ ಆಡಳಿತವನ್ನ ಪೇಜಾವರ ಶ್ರೀಗಳು ಹೊಗಳಿದ್ರು. ಇದೇ ವೇಳೆ ರಾಮ ಜನ್ಮಭೂಮಿ ವಿವಾದದ ಬಗ್ಗೆ ಪ್ರಸ್ತಾಪ ಮಾಡಿದ ಶ್ರೀಗಳು ಆದಷ್ಟು ಬೇಗ ವಿವಾದ ಪರಿಹರಿಸಿ ರಾಮ ಮಂದಿರ ನಿರ್ಮಾಣ ಮಾಡುವಂತೆ ಒತ್ತಾಯ ಮಾಡಿದ್ರು. ಜೊತೆಗೆ ಗಂಗಾ ಶುದ್ಧೀಕರಣ ಯೋಜನೆ ಒಳ್ಳೆಯ ರೀತಿಯಲ್ಲಿ ಜಾರಿಯಾಗಿದೆ. ಹಾಗೆಯೇ ಇನ್ನೂ ಬೇಗವಾಗಿ ಉಳಿದ ಕೆಲಸ ಮುಕ್ತಾಯ ಮಾಡಿ ಜೊತೆಗೆ ಮತ್ತೆ ಮಲೀನವಾಗದಂತೆ ಕ್ರಮ ಕೈಗೊಳ್ಳುವಂತೆ ಕೋರಿಕೊಂಡ್ರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಶ್ರೀಕೃಷ್ಣನ ಮೂರ್ತಿ ನೀಡಿ ಶ್ರೀಗಳು ಆಶೀರ್ವಾದ ಮಾಡಿದ್ರು.
ಶ್ರೀಗಳ ಭೇಟಿಯಿಂದ ಪ್ರಧಾನಿ ಫುಲ್ ಖುಷ್..!
ಇನ್ನು ಗುರುಪೂರ್ಣಿಮೆ ದಿನವೇ ಶ್ರೀಗಳು ಭೇಟಿ ಮಾಡಿದ್ದು ಮೋದಿ ಸಂತಸವನ್ನ ಹೆಚ್ಚಿಸಿತು. ಸುಮಾರು ಅರ್ಧಗಂಟೆಗಳ ಕಾಲ ಮಾತುಕತೆ ನಡೆಸಿದ ಮೋದಿ ಶ್ರೀಗಳಿಂದ ಹಲವು ಹಲವು ಸಲಹೆಗಳನ್ನ ಸ್ವೀಕರಿಸಿದ್ರು. ಸ್ವತಃ ಪ್ರಧಾನಿ ಈ ವಿಷಯವನ್ನ facebook ನಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಎಲ್.ಕೆ ಅಡ್ವಾಣೀಯವರು ಸೇರಿದಂತೆ ಬಿಜೆಪಿಯ ಹಿರಿಯ ನಾಯಕರಿಗೆ ಶ್ರೀಗಳು ಸಲಹೆ ನೀಡುತ್ತಲೇ ಬಂದಿದ್ದಾರೆ.. ರಾಮಜನ್ಮಭೂಮಿ ವಿಚಾರದಲ್ಲಿ ಆದಷ್ಟು ಬೇಗ ನಿರ್ಧಾರ ಕೈಗೊಂಡು ಮಂದಿರ ನಿರ್ಮಿಸುವಂತೆ ಶ್ರೀಗಳ ಬೇಡಿಕೆಗೆ ಮೋದಿ ಯಾವ ರೀತಿ ಸ್ಪಂದಿಸ್ತಾರೆ ಅಂತ ಕಾದು ನೋಡಬೇಕಿದೆ..