Tuesday, January 14, 2025

Latest Posts

ಭಾನುವಾರ ಮಂಡ್ಯದಲ್ಲಿ ಮೋದಿ ಏನೇನ್ ಮಾಡ್ತಾರೆ.? ಮೋದಿ ಮಂಡ್ಯ ಕಾರ್ಯಕ್ರಮದ ವಿವರ

- Advertisement -

political news :

ಇದೇ ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯಗೆ ಆಗಮಿಸ್ತಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್​ ಪ್ರೆಸ್​ ಹೆದ್ದಾರಿಯನ್ನ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ವಿವರವನ್ನ ಸಂಸದ ಪ್ರತಾಪ್ ಸಿಂಹ ನೀಡಿದ್ದು, ಮಾರ್ಚ್ 12 ರ ಬೆಳಿಗ್ಗೆ ಮೈಸೂರು ಏರ್‌ಪೋರ್ಟ್‌ಗೆ ಮೋದಿ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮಂಡ್ಯ ಪಿಇಎಸ್ ಕಾಲೇಜು ಹೆಲಿಪ್ಯಾಡ್‌‌ಗೆ ಬರ್ತಾರೆ. ಬೆಳಗ್ಗೆ 11:35ಕ್ಕೆ ಪಿಇಎಸ್ ಕಾಲೇಜು ಹೆಲಿಪ್ಯಾಡ್‌ಗೆ ಬರಲಿರುವ ಮೋದಿ, ಬಳಿಕ ಐಬಿ ಸರ್ಕಲ್‌ನಿಂದ ರೋಡ್ ಶೋ ಆರಂಭ ಮಾಡ್ತಾರೆ. ಅಲ್ಲಿಂದ ನಂದಾ ಸರ್ಕಲ್ ವರೆಗೂ ಸುಮಾರು 1.8 ಕಿ.ಮೀ ರೋಡ್ ಶೋ ನಡೆಯುತ್ತೆ. ರೋಡ್ ಶೋ ಬಳಿಕ ಅಮರಾವತಿ ಹೋಟೆಲ್ ಸಮೀಪದ ಬೆಂಗಳೂರು-ಮೈಸೂರು ಹೈವೆಗೆ ಎಂಟ್ರಿ ಕೊಡ್ತಾರೆ. ಹೋಟೆಲ್ ಸ್ವಲ್ಪ ದೂರದಲ್ಲೇ ನೂತನ ಹೈವೆಗೆ ಮೋದಿ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಅಲ್ಲೇ ನಿಂತು ಕೆಲಕಾಲ ಹೈವೆ ವೀಕ್ಷಿಸಲಿರುವ ಪ್ರಧಾನಿ ಮೋದಿ, ಹೆದ್ದಾರಿಯಲ್ಲಿ 50 ಮೀಟರ್ ನಡೆದು ನೂತನ ಹೈವೆಗೆ ವಿದ್ಯುಕ್ತ ಚಾಲನೆ ನೀಡ್ತಾರೆ. ಅಲ್ಲಿಂದ ಮೋದಿ ಅವರು ಮಧ್ಯಾಹ್ನ 12:05 ಕ್ಕೆ ಸಾರ್ವಜನಿಕ ಕಾರ್ಯಕ್ರಮ ಆರಂಭ ಆಗಲಿದೆ. ಗೆಜ್ಜಲಗೆರೆ ಕಾಲೋನಿ ಬಳಿ ನಡೆಯಲಿರುವ ಕಾರ್ಯಕ್ರಮದ ಬಳಿಕ ಮೈಸೂರು-ಕುಶಾಲನಗರ ಹೆದ್ದಾರಿ ಭೂಮಿ ಪೂಜೆ 5,700 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಮಂಡ್ಯ ನಗರದ 137ಕೋಟಿ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಮೋದಿ ಮಾತ್ನಾಡಲಿದ್ದು, 2 ಲಕ್ಷ ಜನರ ಭಾಗಿಯಾಗೋ ನಿರೀಕ್ಷೆ ಇದೆ.

ಕರ್ನಾಟಕ ಬಂದ್- ಕಾಂಗ್ರೆಸ್ ಕರೆಗೆ, ಸಿಎಂ ತಿರುಗೇಟು

ಕಾಂಗ್ರೆಸ್ ಸೇರಲಿದ್ದಾರೆ ಬಿಜೆಪಿಯ ಮತ್ತೊಬ್ಬ ನಾಯಕ

ವೈದ್ಯ ಧನಂಜಯ ಸರ್ಜಿ ಗೆ ಬಿಜೆಪಿಯಿಂದ ಚನ್ನಗಿರಿ ಟಿಕೆಟ್

- Advertisement -

Latest Posts

Don't Miss