- Advertisement -
ಕರ್ನಾಟಕ ಟಿವಿ : ಕೊರೊನಾಗೆ ಭಾರತದಲ್ಲೂ ಲಸಿಕೆ ಕಂಡು ಹಿಡಿಯುವ ಕೆಲಸ ಭರದಿಂದ ಸಾಗಿದೆ. 30 ಕಂಪನಿಗಳು ಈಗಾಗಲೇ ಸಂಶೋಧನೆ ಮಾಡುತ್ತಿದ್ದು ಕೆಲವು ಲಸಿಕೆಗಳ ಪ್ರಾಯೋಗಿಕ ಪರೀಕ್ಷೆ ಮಾಡಲಾಗ್ತಿದೆ.. ಈ ಸಂಬಂಧ ಪಟ್ಟಂತೆ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ತಂಡದ ಸಭೆ ನಡೀತು. ಈ ಸಂದರ್ಭದಲ್ಲಿ ಲಸಿಕೆ ಸಂಬಂಧ ಚರ್ಚೆ ಮಾಡಲಾಯ್ತು.. ಕೊರೊನಾ ಟೆಸ್ಟ್ ಕಿಟ್ ಸೇರಿದಂತೆ ಚಿಕಿತ್ಸೆ ಸಂಬಂಧ ಪಟ್ಟಂತೆ ಭಾರತ ಇದುವರೆಗೂ ಏನೆಲ್ಲಾ ಅನ್ವೇಷಣೆ ಮಾಡುತ್ತಿದೆ ಅನ್ನುವ ವಿಷಯವನ್ನ ಟಾಸ್ಕ್ ಪೋರ್ಸ್ ಪ್ರಧಾನಿ ಮೋದಿಗೆ ಮಾಹಿತಿ ನೀಡಿತು..

- Advertisement -