Monday, December 23, 2024

Latest Posts

ನರೇಶ್ ಪತ್ನಿಗೆ ನಡುಗಿದ್ರಾ ಪವಿತ್ರಾ ಲೋಕೇಶ್..? ನರೇಶ್ ಪವಿತ್ರಾ ಲೋಕೇಶ್ ನಡುವೆ ಬ್ರೇಕಪ್ ಆಯ್ತಾ..?!

- Advertisement -

State News:

ಟಾಲಿವುಡ್ ಹಾಗು ಸ್ಯಾಂಡಲ್ ವುಡ್ ನಲ್ಲಿ ಸಖತ್ತಾಗಿ ಸುದ್ದಿ ಮಾಡಿತ್ತು ನರೇಶ್ ಪವಿತ್ರಾ ಲೋಕೇಶ್ ಪ್ರೇಮ ಪ್ರಸಂಗ ಆದೇ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ ಇವರಿಬ್ಬರು.ಆದ್ರೆ ಇಲ್ಲಿ ಕೇಳಿ ಬರ್ತಿರೋದು ಬ್ರೇಕ್ ಅಪ್ ವಿಚಾರ..ಹಾಗಿದ್ರೆ ಈ ಸಂಬಂದ ಅಂತ್ಯವಾಯಿತಾ..? ನರೇಶ್ ಪತ್ನಿಗೆ ನಡುಗಿದ್ರಾ ಪವಿತ್ರಾ ಲೋಕೇಶ್..? ಇಲ್ಲಿದೆ ಸಂಪೂರ್ಣ ಮಾಹಿತಿ….

ಇಬ್ಬರು ಹಿರಿಯ ಕಲಾವಿದರು ಕೆಲವು ದಿನಗಳ ಹಿಂದಷ್ಟೆ ವಿವಾದಕ್ಕೆ ಸಿಲುಕಿದ್ದರು. ಅವರು ಮತ್ಯಾರೂ ಅಲ್ಲ ನರೇಶ್ ಹಾಗೂ ಪವಿತ್ರಾ ಲೋಕೇಶ್. ಇವರಿಬ್ಬರ ಅಫೇರ್ ಇಡೀ ದೇಶದಲ್ಲಿಯೇ ದೊಡ್ಡ ಸಂಚಲವನ್ನೇ ಸೃಷ್ಟಿಸಿತ್ತು.

ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಫ್‌ನಲ್ಲಿದ್ದಾರೆ ಅನ್ನೋ ಆರೋಪ ಮಾಡಲಾಗಿತ್ತು. ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಮಾಡಿದ ಈ ಆರೋಪ ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
ಅದರಲ್ಲೂ ನರೇಶ್ ಹಾಗೂ ಪ್ರವಿತಾ ಲೋಕೇಶ್ ಇಬ್ಬರು ಮೈಸೂರಿನ ಹೊಟೇಲ್‌ವೊಂದರಲ್ಲಿ ರಮ್ಯಾ ರಘುಪತಿ ಕೈ ಸಿಕ್ಕಿಬಿದ್ದಿದ್ದರು. ಆ ಬಳಿಕ ಇಬ್ಬರ ನಡುವಿನ ಅಫೇರ್ ಕನ್ಫರ್ಮ್ ಆಗಿತ್ತು. ಆಗಲೂ ನರೇಶ್ ಹಾಗೂ ಪವಿತ್ರ ಲೋಕೇಶ್ ಇಬ್ಬರೂ ಪ್ರತಿಕ್ರಿಯೆ ನೀಡಲು ಹೋಗಿರಲಿಲ್ಲ. ಈಗ ಟಾಲಿವುಡ್‌ನಿಂದ ಮತ್ತೊಂದು ಸುದ್ದಿ ಹರಿದು ಬರುತ್ತಿದೆ.

ಪವಿತ್ರಾ ಲೋಕೇಶ್ ಹಾಗೂ ನರೇಶ್ ಇಬ್ಬರೂ ಟಾಲಿವುಡ್‌ನಲ್ಲಿ ಬಹುಬೇಡಿಕೆ ಕಲಾವಿದರು. ಇಬ್ಬರೂ ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಇಬ್ಬರೂ ಜೊತೆಯಾಗಿ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿವೆ. ಆದರೆ, ಇತ್ತೀಚೆಗೆ ಇದೇ ಜೋಡಿ ವಿವಾದವನ್ನು ಮೈಮೇಲೆ ಎಳೆದುಕೊಂಡು ರಾಡಿ ಮಾಡಿಕೊಂಡಿತ್ತು. ಪವಿತ್ರಾ ಲೋಕೇಶ್‌ ಹಾಗೂ ನರೇಶ್ ವಿವಾದದ ಬಳಿಕ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿಲ್ಲ.

ಮಾಧ್ಯಮಗಳಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮ್ಯಾಟರ್ ಹಲ್‌ಚಲ್ ಎಬ್ಬಿಸಿದ ಬಳಿಕ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಇವರಿಬ್ಬರ ನಡುವಿನ ಸಂಬಂಧ ಸರಿಯಾಗಿಲ್ಲ. ಇಬ್ಬರೂ ಕಿತ್ತಾಡಿಕೊಂಡಿದ್ದು, ಬೇರೆಯಾಗಿದ್ದಾರೆ ಅಂತ ಟಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ. ಆದರೆ, ತೆಲುಗು ವೆಬ್‌ ಪೋರ್ಟಲ್‌ಗಳು ಈ ಸುದ್ದಿಯನ್ನು ಪ್ರಕಟಿಸಿದ ಬಳಿಕ ಇಬ್ಬರೂ ಆರ್ಟಿಸ್ಟ್‌ಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ನರೇಶ್ ಅಥವಾ ಪವಿತ್ರಾ ಲೋಕೇಶ್ ಪ್ರತಿಕ್ರಿಯೆ ನೀಡಿದ ಬಳಿಕವೇ ಎಲ್ಲದಕ್ಕೂ ಸ್ಪಷ್ಟತೆ ಸಿಗಲಿದೆ.

ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿವಾದದ ಬಳಿಕ ಟಾಲಿವುಡ್‌ ಫಿಲ್ಮ್‌ಮೇಕರ್ಸ್ ಸಿನಿಮಾ ಕೊಡುತ್ತಿಲ್ಲ ಅನ್ನೋ ಮಾತಿದೆ. ಬಹುಬೇಡಿಕೆಯ ನಟಿಯಾಗಿದ್ದ ಪವಿತ್ರಾ ಲೋಕೇಶ್‌ಗೆ ಈ ಪ್ರಕರಣದ ಬಳಿಕ ಭಾರೀ ಹಿನ್ನೆಡೆಯಾಗಿದೆ ಎನ್ನಲಾಗಿದೆ. ಅಲ್ಲದೆ ಟಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ ಎರಡರಲ್ಲೂ ಪವಿತ್ರಾ ಲೋಕೇಶ್ ವಿರುದ್ಧವೇ ಹಲವು ಆರೋಪ ಮಾಡಿದ್ದರು. ಹೀಗಾಗಿ ಹೊಸ ಸಿನಿಮಾಗಳಿಲ್ಲದೆ ಕಂಗಾಲಾಗಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ.

ರಮ್ಯಾ ರಘುಪತಿ ಮಾಧ್ಯಮಗಳ ಮುಂದೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿರುದ್ಧ ತಿರುಗಿಬಿದ್ದಿದ್ದರು. ನನಗೆ ವಿಚ್ಛೇದನ ಬೇಡ ಎಂದು ಸಾರಿ ಹೇಳಿದ್ದರು. ಅಲ್ಲದೆ ನರೇಶ್ ಬಗ್ಗೆ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು. ಈ ಕಾರಣಕ್ಕೆ ವಿವಾದಕ್ಕೆ ಸಿಲುಕಿರುವ ನರೇಶ್ ಹಾಗೂ ಪವಿತ್ರಾ ಲೋಕೇಶ್ ಬಗ್ಗೆ ತೆಲುಗು ಮಂದಿ ಆಸಕ್ತಿ ತೋರುತ್ತಿಲ್ಲ ಅನ್ನೋ ಮಾತು ಕೇಳಿ ಬಂದಿದೆ. ಆದ್ರೀಗ ಇಬ್ಬರ ಬ್ರೇಕಪ್ ಸುದ್ದಿ ಸದ್ದು ಮಾಡುತ್ತಿದ್ದು, ಈ ಬಗ್ಗೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸ್ಪಷ್ಟನೆ ಮಾಡಬೇಕಿದೆ ಎನ್ನಲಾಗುತ್ತಿದೆ.

ಮುಕ್ತಾಯ ಹಂತದಲ್ಲಿ “ಅಬ ಜಬ ದಬ” ಚಿತ್ರದ ಚಿತ್ರೀಕರಣ…!

ಹರಕೆ ತೀರಿಸಿದ ಡಿ ಬಾಸ್ ಅಭಿಮಾನಿ…!

ನಟಿ ಮೇಘನಾರಾಜ್ ಅವರಿಂದ ಜ್ಯುವೆಲ್ಸ್ ಆಫ್ ಇಂಡಿಯಾ ಉದ್ಘಾಟನೆ..

- Advertisement -

Latest Posts

Don't Miss