Saturday, February 8, 2025

Latest Posts

ಉರ್ದು ಶಾಲೆಯಲ್ಲಿ ರಾಷ್ಟ್ರಗೀತೆ ಹಾಡಲಾಗುತ್ತಿದೆ, ಅದನ್ನು ‘ಪ್ರಮೋದ್ ಮುತಾಲಿಕ್’ನಿಂದ ಕಲಿಬೇಕಿಲ್ಲ – ಶಾಸಕ ಜಮೀರ್ ಅಹ್ಮದ್

- Advertisement -

ಬೆಂಗಳೂರು: ಉರ್ದು ಶಾಲೆಯಲ್ಲಿ ಈ ಹಿಂದಿನಿಂದಲೂ ರಾಷ್ಟ್ರಗೀತೆ ಹಾಡುತ್ತಾ ಬರಲಾಗುತ್ತಿದೆ. ರಾಷ್ಟ್ರಗೀತೆ ಹಾಡುತ್ತಿಲ್ಲಾ ಎಂಬುದು ಸುಳ್ಳು ಆರೋಪ. ಬರೀ ರಾಜಕೀಯ ಗಿಮಿಕ್. ಮುತಾಲಿಕ್ ನಿಂದ ನಾವೇನ್ ರಾಷ್ಟ್ರಗೀತೆ ಹಾಡೋದನ್ನು ಕಲಿಯಬೇಕಿಲ್ಲ ಎಂಬುದಾಗಿ ಶಾಸಕ ಬಿ.ಜೆಡ್ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ.

ಇಂದು ಪೆನ್ಷನ್ ಮೊಹಲ್ಲಾದಲ್ಲಿನ ಸರ್ಕಾರಿ ಉರ್ದು ಶಾಲೆಯ ನೂತನ ಕಟ್ಟಡ ಉದ್ಘಾಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪೆನ್ಷನ್ ಮೊಹಲ್ಲಾದಲ್ಲಿನ ಸರ್ಕಾರಿ ಉರ್ದು ಶಾಲೆಗೆ ಮಕ್ಕಳು ಬರೋದೆ ಕಷ್ಟವಾಗಿತ್ತು. ಯಾಕೆಂದ್ರೇ ಆ ಶಾಲೆ ಬಹಳ ಹಾಳಾಗಿತ್ತು, ಸ್ವಚ್ಛತೆ ಸೇರಿದಂತೆ ವಿವಿಧ ಸೌಕರ್ಯಗಳ ಕೊರತೆ ಕೂಡ ಇತ್ತು. ಐದಾರು ತಿಂಗಳ ಹಿಂದೆ ನಾನು ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. 50 ಲಕ್ಷ ಶಾಸಕರ ಅನುದಾನದಲ್ಲಿ ಹೊಸ ಕಟ್ಟಡ ರೆಡಿ ಮಾಡಿ, ಇಂದು ಉದ್ಘಾಟನೆ ಮಾಡಲಾಗಿದೆ ಎಂದರು.

ಇಂದಿನ ಉದ್ಘಾಟನೆ ಸಂದರ್ಭದಲ್ಲಿ ಮಕ್ಕಳ ಪೋಷಕರು, ಬಿಇಒ ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಾಗಿದ್ದರು. ಎಲ್ಲರೂ ಖುಷಿಯನ್ನು ವ್ಯಕ್ತ ಪಡಿಸಿದ್ರು. ಅಲ್ಲಿನ ಶಿಕ್ಷಕರು ಕೂಡ ಶಾಲಾ ಕಟ್ಟಡ ಸರಿಯಾಗಿ ಇಲ್ಲದ ಕಾರಣ, ಮಕ್ಕಳ ದಾಖಲಾತಿ ಆಗ್ತಾ ಇರಲಿಲ್ಲ. ನೀವೆಲ್ಲಾ ಇಷ್ಟು ಹೊಸ ಕಟ್ಟಡ ನಿರ್ಮಿಸಿಕೊಟ್ಟಿದ್ದೀರಿ. ನಮ್ಮ ಶೈಕ್ಷಣಿಕ ದಾಖಲಾತಿ 1 ರಿಂದ 7ನೇ ತರಗತಿವರೆಗೆ 95 ಅಷ್ಟೇ ಇದ್ದಿದ್ದು. ಈಗ ಶಾಲಾ ಕಟ್ಟಡ ನೋಡಿ ಅಕ್ಕ-ಪಕ್ಕದವರು ನೋಡಿ ಇನ್ನೂ ಶಾಲೆಯೇ ಆರಂಭಗೊಂಡಿಲ್ಲ 155 ಮಕ್ಕಳು ದಾಖಲಾಗಿದ್ದಾರೆ. ಮುಂದಿನ ವರ್ಷದ ವೇಳೆ ಮತ್ತಷ್ಟು ದಾಖಲಾತಿ ಹೆಚ್ಚಳವನ್ನು ನಾವು ನಿಮಗೆ ಭರವಸೆ ನೀಡೋದಾಗಿ ತಿಳಿಸಿದ್ದಾರೆ. ಅದು ಖುಷಿ ತಂದಿದೆ ಎಂದು ಹೇಳಿದರು.

ಉರ್ದು ಶಾಲೆಯಲ್ಲಿ ರಾಷ್ಟ್ರಗೀತೆ ಹಾಡೋದಿಲ್ಲ ಎನ್ನುವಂತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದಂತ ಅವರು, ರಾಷ್ಟ್ರಗೀತೆಯನ್ನು ಉರ್ದು ಶಾಲೆಯಲ್ಲಿ ಹಾಡಲಾಗುತ್ತಿದೆ. ನಾವು ಈ ಹಿಂದಿನಿಂದಲೂ ಹಾಡಿಕೊಂಡು ಬರ್ತಾ ಇದ್ದೇವೆ. ಆದ್ರೇ ಬೇಕೆಂದೇ ಉರ್ದು ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುತ್ತಿಲ್ಲ ಎನ್ನೋ ವಿವಾದ ಸೃಷ್ಠಿಸಲಾಗುತ್ತಿದೆ. ಏನ್ ನಮಗೆ ಮುತಾಲಿಕ್ ರಾಷ್ಟ್ರಗೀತೆ ಹಾಡಬೇಕು ಎಂದು ಹೇಳಿಕೊಡಬೇಕಾ.? ಇದೆಲ್ಲಾ ಮುಂಬರುವ ವಿಧಾನಸಭಾ ಚುನಾವಣೆಯ ಗಿಮಿಕ್ ಅಷ್ಟೇ. ಈಗ ಅದನ್ನೆಲ್ಲಾ ನಾ ಮಾತನಾಡೋದಿಲ್ಲ. ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ಮಾತನಾಡುವೆ ಎಂದರು.

- Advertisement -

Latest Posts

Don't Miss