ಕರ್ನಾಟಕ ಟಿವಿ : ಭಾರತಕ್ಕೆ ಇದೀಗ ಮತ್ತೊಂದು ದೊಡ್ಡ ಅಪಾಯ ಎದುರಾಗಿದೆ. ಕೊರೊನಾ ನಡುವೆ ಅಂಫಾನ್ ಪ ಬಂಗಾಳ ಹಾಗೂ ಒಡಿಶಾದಲ್ಲಿ ಲಕ್ಷಾಂತರ ಜನರಿಗೆ ಸಮಸ್ಯೆ ಕೊಟ್ಟು ನೂರಾರು ಜನರಲ್ಲಿ ಬಲಿ ಪಡೆದು ಹೋಯ್ತು. ಇದೀಗ ಭಾರತಕ್ಕೆ ಕೋಟ್ಯಂತರ ಮಿಡತೆಗಳು ದಾಳಿ ಇಟ್ಟಿವೆ.. ಪಾಕಿಸ್ತಾನ ಗಡಿ ಮೂಲಕ ಎಂಟ್ರಿಕೊಟ್ಟ ಮಿಡತೆಗಳು ರಾಜಸ್ಥಾನ ಇದೀಗ ಮಧ್ಯಪ್ರದೇಶ, ಉತ್ತರಪ್ರದೇಶಕ್ಕೂ ಕಾಲಿಟ್ಟಿದ್ದು ಸಾವಿರಾರು ಕೋಟಿ ಮೌಲ್ಯದ ಬೆಳೆಯನ್ನ ನಾಶ ಮಾಡಿವೆ. ಇದೀಗ ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ ಸರ್ಕಾರಗಳು ಅಗ್ನಿಶಾಮಕ ವಾಹನಗಳ ಮೂಲಕ ಔಷಧಿ ಸಿಂಪಡಿಸುವ ಮೂಲಕ ಮಿಡತೆಗಳ ನಾಶಕ್ಕೆ ಮುಂದಾಗಿವೆ. ಈ ಮಿಡತೆಗಳು ಲಕ್ಷಗಟ್ಟಲೆ ಹಿಂಡಿನಲ್ಲಿ ದಾಳಿ ಮಾಡಿ ಕೆಲವೇ ಗಂಟೆಗಳಲ್ಲಿ ಹತ್ತಾಋಉ ಹೆಕ್ಟೇರ್ ಪ್ರದೇಶದ ಬೆಳೆಯನ್ನ ನಾಶ ಮಾಡ್ತಿವೆ. ಈ ರೀತಿಯ ಸಾವಿರಾರು ಹಿಂಡುಗಳು ದಾಳಿ ಇಟ್ಟಿದೆ. ರಾಜಸ್ಥಾನದ 33 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಮಿಡತೆಗಳು ಭಾರೀ ಪ್ರಮಾಣದಲ್ಲಿ ಬೆಳೆಯನ್ನ ತಿಂದು ಮುಗಿಸಿವೆ. ಈ ಮಿಡತೆಗಳ ಮೂಲ ಪೂರ್ವ ಆಫ್ರಿಕಾ.. ಅಲ್ಲಿಂದ ಸೌದಿಗೆ ಮೂಲಕ, ಇರಾನ್, ಪಾಕಿಸ್ತಾನಕ್ಕೆ ಆಗಮಿಸಿ ನಂತರ ಭಾರತಕ್ಕೆ ಬಂದಿದೆ. ಹಾಗೆ ನೋಡಿದ್ರೆ ಸೌದಿ, ಇರಾನ್, ಪಾಕಿಸ್ತಾನಕ್ಕಿಂದ ಸಮೃದ್ಧವಾಗಿ ಮಿಡತೆಗಳು ಮೇಯಲು ಅವಕಾಶ ಸಿಕ್ತಿರೋದು ಭಾರತದಲ್ಲೇ ಅಂತ ಹೇಳಬಹುದು. ಮಿಡತೆಗಳು 2 ತಿಂಗಳು ಬಿಟ್ಟರೂ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿತ್ವೆ ಭಾರತದಲ್ಲಿ ಆಹಾರ ಸಮಸ್ಯೆಗೆ ಕಾರಣವಾಗುತ್ತೆ ಅಂತ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.