Friday, April 4, 2025

Latest Posts

ತನಗೆ ತಿಳಿಸದೇ, ಹೂವಿನ ರಂಗೋಲಿ ಬಿಡಿಸಿದ್ದಕ್ಕೆ ಹೊಟ್ಟೆಕಿಚ್ಚಿನ ಬುದ್ಧಿ ತೋರಿಸಿದ ಮಹಿಳೆ

- Advertisement -

Bengaluru News: ಎರಡು ದೇಹ ಒಂದೇ ಪ್ರಾಣವೆಂಬಂತೆ, ಹಲವು ರಾಜ್ಯ, ತರಹೇವಾರಿ ಸಂಸ್ಕೃತಿ ಪದ್ಧತಿಗಳನ್ನು ಒಳಗೊಂಡ ಭಾರತ, ಐಕ್ಯತೆಗೆ ಹೆಸರುವಾಸಿ. ಆದರೆ ಕೆಲವು ಕೋಮುವಾದಿಗಳು, ಹೊಟ್ಟೆಕಿಚ್ಚಿನ ಜನರ ಗುಣಗಳಿಂದ, ಈ ಐಕ್ಯತೆಗೆ ಧಕ್ಕೆಯಾಗುತ್ತಿದೆ.

ಕೆಲ ದಿನಗಳ ಹಿಂದಷ್ಟೇ ಗಣೇಶ ವಿಸರ್ಜನೆ ವೇಳೆ ಗಲಭೆ ಉಂಟಾಗಿದ್ದು, ದೊಡ್ಡ ಗಲಾಟೆಯೇ ನಡೆದು ಹೋಯಿತು. ಇದೀಗ, ಓನಮ್‌ಗಾಗಿ ಹಾಕಿದ ಹೂವಿನ ರಂಗೋಲಿ ನೋಡಿ, ಸಿಟ್ಟಾಗಿ, ಹೊಟ್ಟೆಕಿಚ್ಚಿನಿಂದ ಆ ರಂಗೋಲಿಯನ್ನೇ ಹಾಳು ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಥಣಿಸಂದ್ರದ ಮೊನಾರ್ಕ್ ಸೆರೆನಿಟಿ ಎನ್ನುವ ಅಪಾರ್ಟ್‌ಮೆಂಟ್‌ನಲ್ಲಿ ಕೆಲವು ಕೇರಳಿಗರು ಓಣಮ್ ಹಬ್ಬಕ್ಕಾಗಿ, ಹೂವಿನಿಂದ ರಂಗೋಲಿ ಬಿಡಿಸಿದ್ದರು. ಏಕೆಂದರೆ, ಓಣಮ್ ಹಬ್ಬದ ವಿಶೇಷವೇ, ಪೂಕುಳಂ. ಹಾಗಾಗಿ ಅಪಾರ್ಟ್‌ಮೆಂಟ್‌ನಲ್ಲಿ ಕೆಲವು ಮಕ್ಕಳು, ಮಹಿಳೆಯರು ಸೇರಿ, ಹೂವಿನ ರಂಗೋಲಿ ಬಿಡಿಸಿದ್ದರು.

ಆದರೆ ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಸಿಮಿ ನಾಯರ್, ಈ ರಂಗೋಲಿ ನೋಡಿ ಕೋಪಗೊಂಡಿದ್ದಾಳೆ. ನನ್ನ ಪರ್ಮಿಷನ್ ಇಲ್ಲದೇ, ನನ್ನ ಮನೆ ಎದುರಿಗೆ ನೀವು ರಂಗೋಲಿ ಹೇಗೆ ಹಾಕಿದ್ದೀರಿ..? ಎಂದು ಪ್ರಶ್ನಿಸಿದ್ದಾಳೆ. ಅಲ್ಲಿನ ಸ್ಥಳೀಯರೆಲ್ಲ ಸೇರಿ, ಹಬ್ಬವೆಂದು ಮಕ್ಕಳೆಲ್ಲ ಸೇರಿ, ರಂಗೋಲಿ ಹಾಕಿದ್ದಾರೆ. ಕೋಪ ಮಾಡಿಕೊಳ್ಳಬೇಡಿ ಎಂದು ಸಮಜಾಯಿಷಿ ಹೇಳಿದ್ದಾರೆ.

ಆದರೂ ಕೇಳದೆ ಧಿಮಾಕು ತೋರಿಸಿದ ಹೆಂಗಸು, ಜಗಳ ಶುರು ಮಾಡಿದ್ದಾಳೆ. ಬಳಿಕ ರಂಗೋಲಿ ಮೇಲೆ ನಿಂತು, ಒಂದಿಷ್ಟು ಮಾತನಾಡಿದ್ದಾಳೆ. ಬಳಿಕ, ಆ ರಂಗೋಲಿಯನ್ನು ಕಾಲಿನಿಂದ ತುಳಿದು ಹಾಳು ಮಾಡಿದ್ದಾಳೆ. ಈಕೆಯ ಹೊಟ್ಟೆಕಿಚ್ಚಿನ ಬುದ್ಧಿಗೆ ಜನ ಛಿಮಾರಿ ಹಾಕಿದ್ದಾರೆ.

- Advertisement -

Latest Posts

Don't Miss