Thursday, December 26, 2024

Latest Posts

ಇಂಡಿಯಾದಲ್ಲಿ ಡಿಡಿ ಚಾನಲ್ ನಂಬರ್ 1 ..!

- Advertisement -

ಕರ್ನಾಟಕಕ ಟಿವಿ : ಖಾಸಗಿ ಚಾನಲ್ ಗಳು ತಿಂಗಳಿಗೆ ನೂರಾರು ಕೋಟಿ ಖರ್ಚು ಮಾಡಿ ರಿಯಾಲಿಟಿ ಶೋ ಮಾಡಿ, ಕೋಟ್ಯಂತರ ಖರ್ಚು ಮಾಡಿ ಧಾರವಾಹಿ ಹಾಕಿ ಜೊತೆ ವಾರಕ್ಕೊಂದು ಸೂಪರ್ ಡೂಒರ್ ಹಿಟ್ ಸಿನಿಮಾ ಹಾಕಿ ಟಿ.ಆರ್.ಪಿ ಹೆಚ್ಚಿಸಿಕೊಂಡು ತಿಂಗಳಿಗೆ ಕೋಟ್ಯಂತರ ಜಾಹಿರಾತು ದುಡಿಯುತ್ತಿದ್ವು.. ಖಾಸಗಿ ಚಾನಲ್ ಗಳ ಅಬ್ಬರದಲ್ಲಿ ಸರ್ಕಾರಿ ಸಾಮ್ಯದ ಕಳೆಗುಂದಿದ್ವು.. ಇದೀಗ ಲಾಕ್ ಡೌನ್ ಅನೌನ್ಸ್ ಆದಮೇಲೆ ಖಾಸ್ಇ ಚಾನಲ್ ಗಳ ಧಾರವಾಹಿ ಶೂಟಿಂಗ್ ನಿಂತಿದೆ. ಆದ್ರೆ ಹಳೇಯ ಬಿಗ್ ಬಜೆಟ್ ಕಾರ್ಯಕ್ರಮಗಳನ್ನ ಪ್ರಸಾರ ಮಾಡ್ತಿದೆ. ಈ ನಡುವೆ ಡಿಡಿ ತನ್ನ ಬತ್ತಳಿಗೆಯಲ್ಲಿದ್ದ ಹಳೆ ಧಾರವಾಹಿಗಳಾದ ರಾಮಾಯಾಣ ಪ್ರಸಾರ ಮಾಡಲು ಶುರು ಮಾಡಿದ್ದೇ ತಡ.. ಧೂಳಿನಿಂದ ಮೈಕೊಡವಿ ಎದ್ದು ನಿಂತಿದೆ.. ಸುಮ್ಮನೆ ಸಾಮಾನ್ಯ ಚಾನಲ್ ನಂತೆ 10ರಲ್ಲಿ ಒಂದಾಗಿ ನಿಂತಿಲ್ಲ.. ಇಡೀ ಇಂಡಿಯಾದಲ್ಲೇ ಡಿಡಿ ನ್ಯಾಷನಲ್ ಚಾನಲ್ ನಂಬರ್ ಒನ್ ಆಗಿದೆ. ಬಾರ್ಕ್ ( ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಇಂಡಿಯಾ ಪ್ರತೀ ಗುರುವಾರ ಚಾನಲ್ ರೇಟಿಂಗ್ ಕೊಡುತ್ತೆ. ಈ ವಾರ ಬಂದ ರೇಟಿಂಗ್ ನಲ್ಲಿ ಡಿಡಿ ನ್ಯಾಷನಲ್ ಭಾರೀ ಅಂತರದಲ್ಲಿ ನಂಬರ್ ಒನ್ ಸ್ಥಾನದಲ್ಲಿ ಬಂದು ಕೂತಿದೆ. ಇನ್ನು ಎರಡನೇ ಸ್ಥಾನದಲ್ಲಿ ಇದುವರೆಗೆ ಮೊದಲು ಹಾಗೂ ಎರಡನೇ ಸ್ಥಾನದಲ್ಲೇ ಇರುತ್ತಿದ್ದ ಸನ್ ಟಿವಿ ಈ ವಾರ ಎರಡನೇ ಸ್ಥಾನದಲ್ಲಿದೆ. ಕಳೆದ ಎರಡು ತಿಂಗಳಿನಿಂದ ಇಮಡಿಯಾದಲ್ಲೇ ಟಾಪ್ 10 ಸ್ಥಾನದಲ್ಲಿ ಇರುತ್ತಿದ್ದ ಜೀ ಕನ್ನಡ ಈ ವಾರ ಟಾಪ್ 10 ಲಿಸ್ಟ್ ನಿಂದ ಹೊಸ ಬಂದಿದೆ.

ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ

https://www.youtube.com/watch?v=EtH0pGegkXM
- Advertisement -

Latest Posts

Don't Miss