Saturday, November 23, 2024

Latest Posts

ನಿಮ್ಮ ಮುಖ ನೈಸರ್ಗಿಕವಾಗಿ ಹೊಳೆಯಲು ಈ ಸಲಹೆಗಳನ್ನು ಅನುಸರಿಸಿ…!

- Advertisement -

Beauty tips:

ಮಾಲಿನ್ಯ ಮತ್ತು ಒತ್ತಡದಿಂದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುವುದಲ್ಲದೆ, ಮುಖದ ಹೊಳಪು ಕೂಡ ಕಡಿಮೆಯಾಗುತ್ತದೆ ಹಾಗೂ ಚರ್ಮದ ಸಮಸ್ಯೆಗಳು ಉಂಟಾಗುತ್ತದೆ. ಆದರೆ ಹೊಳೆಯುವ ತ್ವಚೆಗಾಗಿ ಮಾರುಕಟ್ಟೆಯಲ್ಲಿ ಹಲವು ಬ್ಯೂಟಿ ಉತ್ಪನ್ನಗಳು ಲಭ್ಯವಿದೆ. ಆದರೆ ಅವುಗಳ ಪರಿಣಾಮವು ಅತಿ ಕಡಿಮೆ ಸಮಯದವರೆಗೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಗ್ಲೋಯಿಂಗ್ ಸ್ಕಿನ್ ಪಡೆಯಲು ನೀವು ಕೆಲವು ಸಿಂಪಲ್ ಟಿಪ್ಸ್ ಅನ್ನು ಅನುಸರಿಸಬೇಕು ಎಂದು ಬ್ಯೂಟಿಷಿಯನ್ ಗಳು ಸಲಹೆ ನೀಡುತ್ತಾರೆ. ನಿಮ್ಮ ಚರ್ಮ ಹೊಳೆಯುವಂತೆ ಮಾಡಲು ಕೆಲವು ಸರಳ ವಿಧಾನಗಳನ್ನು ತಿಳಿದು ಕೊಳ್ಳೋಣ.

ಸಾಕಷ್ಟು ನೀರು ಕುಡಿಯಿರಿ :
ಆರೋಗ್ಯಕರ ತ್ವಚೆಗೆ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯ ಇದು ನಿಮ್ಮ ದೇಹವನ್ನು ಹೈಡ್ರೀಕರಿಸಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಹೀಗೆ ಮಾಡಿದರೆ ಒಣ ಚರ್ಮ ಹಾಗೂ ತುರಿಕೆಯಿಂದ ಪರಿಹಾರ ಪಡೆಯಬಹುದು. ತ್ವಚೆಯನ್ನು ಮೃದುವಾಗಿ ಮತ್ತು ಕಾಂತಿಯುತವಾಗಿರಿಸಲು ಪ್ರತಿದಿನ ಒಳ್ಳೆಯ ಮಾಯಿಶ್ಚರೈಸರ್ ಬಳಸುವುದು ಉತ್ತಮ.

ಧ್ಯಾನ ಹಾಗೂ ಯೋಗಾಸನಗಳು :
ಒತ್ತಡ, ಮಾನಸಿಕ ಆರೋಗ್ಯ ಸಮಸ್ಯೆಗಳು ದೈಹಿಕ ಆರೋಗ್ಯ ಸಮಸ್ಯೆಗಳು ಸಹ ನಿಮ್ಮ ಸೌಂದರ್ಯವನ್ನು ಹಾಳುಮಾಡಬಹುದು.ಇಂಥಹ ಸಮಯದಲ್ಲಿ ಯೋಗ ಮತ್ತು ಧ್ಯಾನವನ್ನು ನಿಯಮಿತವಾಗಿ ಮಾಡಬೇಕು ಇದರಿಂದ ಒತ್ತಡ ಮತ್ತು ಮಾನಸಿಕ ಸಮಸ್ಯೆಗಳಳು ದೂರವಾಗುತ್ತದೆ ,ಒತ್ತಡವನ್ನು ಕಡಿಮೆ ಮಾಡಲು ಹೆಚ್ಚು ಹೊತ್ತು ನಿದ್ದೆ ಮಾಡುವುದು ಉತ್ತಮ.

ಫೇಶಿಯಲ್ :
ಚರ್ಮವನ್ನು ಹೊಳೆಯುವಂತೆ ಮಾಡಲು ರೆಗ್ಯುಲರ್ ಸ್ಕಿನ್ ಕೇರ್ ಬಹಳ ಮುಖ್ಯ. ನಿಮ್ಮ ಚರ್ಮವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು ನಿಯಮಿತವಾಗಿ ಫೇಶಿಯಲ್ ಮತ್ತು ಕ್ಲೆನ್ಸ್ ಮಾಡಬೇಕು. ಕಡಲೇ ಹಿಟ್ಟು, ಅರಿಶಿನ, ಮೊಸರು ಮತ್ತು ಜೇನುತುಪ್ಪ ದಂತಹ ಸರಳ ಮನೆಮದ್ದುಗಳು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

ಆರೋಗ್ಯಕರ ಆಹಾರವನ್ನು ಸೇವಿಸಿ :
ಆರೋಗ್ಯಕರವಾದ ಚರ್ಮಕ್ಕಾಗಿ, ನಿಮ್ಮ ಆಹಾರದಲ್ಲಿ ಅಧಿಕ ಪೋಷಕಾಂಶ ಗಳಿರುವ ಆಹಾರಗಳನ್ನು ಸೇವಿಸಿ. ನಿಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಮತ್ತು ಜೀವಸತ್ವಗಳನ್ನು ಸಾಕಷ್ಟು ಒದಗಿಸಲು ನೀವು ವಿಶೇಷ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ನಿಮ್ಮ ಆಹಾರದಲ್ಲಿ ಹೆಚ್ಚು ತರಕಾರಿ ಮತ್ತು ಹಣ್ಣುಗಳನ್ನು ಸೇರಿಸಿದರೆ ನಿಮ್ಮ ಚರ್ಮವು ಕಾಂತಿಯುತವಾಗುತ್ತದೆ.

ಟೋನಿಂಗ್ :
ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಿದ ನಂತರ, ನಿಮ್ಮ ಮುಖದ ಮೇಲೆ ಹೈಡ್ರೇಶನ್ ಪ್ಯಾಕ್ ಅನ್ನು ಅನ್ವಯಿಸುವುದು ಉತ್ತಮ. ಇದಕ್ಕಾಗಿ ಕೆಲವು ಟೋನಿಂಗ್ ವಿಧಾನಗಳನ್ನು ಅನುಸರಿಸಬೇಕು. ಟೋನಿಂಗ್‌ಗಾಗಿ ರೋಸ್ ವಾಟರ್ ಬಳಸುವುದರಿಂದ ನಿಮ್ಮ ತ್ವಚೆಯ ತೇವಾಂಶವನ್ನು ಕಾಪಾಡಿಕೊಳ್ಳಬಹುದು .ಅಲ್ಲದೆ ಇದು Anti-Aging ಗುಣಗಳನ್ನು ಹೊಂದಿದೆ ಹಾಗೂ ಅನೇಕ ಪ್ರಯೋಜನಗಳನ್ನು ಹೊಂದಿದೆ. ಚರ್ಮ ಮತ್ತು ಕೂದಲಿನ ಆರೋಗ್ಯಕ್ಕಾಗಿ ಬಳಸಲಾಗುತ್ತದೆ. ರೋಸ್ ವಾಟರ್ ಅನ್ನು ಟೋನರ್ ಆಗಿ ನಿಮ್ಮ ಮುಖದ ಮೇಲೆ ಹೈಡ್ರೀಕರಿಸಿದಂತೆ ಇರಿಸಬಹುದು ಇಂದರಿಂದ ಪ್ರಶಾಂತತೆ ದೊರೆಯುತ್ತದೆ.

ಸಿಹಿ ಪ್ರಿಯರೇ ಎಚ್ಚರ ಎಚ್ಚರ…!

ದೀಪಾವಳಿಯ ನಂತರ ಹೀಗೆ ಮಾಡಿದರೆ ಶ್ವಾಸಕೋಶ ಸ್ವಚ್ಛವಾಗುತ್ತದೆ..!

ಕಪ್ಪು ಮೆಣಸಿನಲ್ಲಿ ಬಂಗಾರದಂತ ಆರೋಗ್ಯದ ಲಾಭಗಳು …!

 

- Advertisement -

Latest Posts

Don't Miss