Friday, April 18, 2025

Latest Posts

Jain muni: ನವಗ್ರಹ ತೀರ್ಥ ಕ್ಷೇತ್ರಕ್ಕೆ ಗೃಹ ಸಚಿವ ಭೇಟಿ:

- Advertisement -

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕು ಹಿರೆಕೋಡಿಯ ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ತಾಲೂಕಿನ ವರೂರಿನ ಜೈನ್ ಆಶ್ರಮಕ್ಕೆ ಕೇಂದ್ರ ಅಲ್ಪ ಸಂಖ್ಯಾತ ಆಯೋಗ ಸಮಿತಿ ಸದಸ್ಯರು ಭೇಟಿ ನೀಡಿದರು.ನವಗ್ರಹ ತೀರ್ಥ ಕ್ಷೇತ್ರಕ್ಕೆ ಗೃಹ ಸಚಿವ ಭೇಟಿ: ಜೈನ್ ಮುನಿಗಳಿಗೆ ಕೇಂದ್ರ ಸರ್ಕಾರ ಅಗತ್ಯ ಭದ್ರತೆ ಒದಗಿಸುವುದಾಗಿ ಗುಂಡೆ ಭರವಸೆ ನೀಡಿದ್ದಾರೆ.

ಹುಬ್ಬಳ್ಳಿಯ ವರೂರಿನ ಜೈನಮುನಿ ಗುಣಧರನಂದಿ ಮಾಹಾರಾಜ್ ಸ್ವಾಮೀಜಿ ಭೇಟಿಗೆ ಆಗಮಿಸಿದ ಕೇಂದ್ರ ಅಲ್ಪ ಸಂಖ್ಯಾತ ಆಯೋಗ ಸಮಿತಿ ಸದಸ್ಯರಾದ ಧನ್ಯಕುನಾರ ಜೀನಪ್ಪ ಗುಂಡೆ ನೇತೃತ್ವದಲ್ಲಿ ಹುಬ್ಬಳ್ಳಿ ತಾಲೂಕಿನ ವರೂರಿನ ನವಗ್ರಹ ತೀರ್ಥಂಕರ ಕ್ಷೇತ್ರಕ್ಕೆ ಭೇಟಿ ನೀಡಿ ಜೈನ್ ಮುನಿಗಳಿಗೆ ಧೈರ್ಯ ತುಂಬಿ ಜೈನ್ ಮುನಿಗಳಿಗೆ ಹಾಗೂ ಜೈನ್ ಮಂದಿರಗಳಿಗೆ ಕೇಂದ್ರ ಸರ್ಕಾರ ಭದ್ರತೆ ಜೊತೆಗೆ ಅಗತ್ಯ ಕ್ರಮಕೈಗೊಳ್ಳಲು ಮುಂದಾಗಿದೆ.

ಈಗಾಗಲೇ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕು ಹಿರೆಕೋಡಿಯ ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿ ಹತ್ಯೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದು ಯಾವುದೇ ರೀತಿಯ ನಿರ್ಲಕ್ಷ್ಯ ಮಾಡುವುದಿಲ್ಲ. ಜೈನ್ ಮಂದಿಗರಗಳಿಗೆ ಐತಿಹಾಸಿಕ ಮಹತ್ವ ಇದೆ‌. ಸಾವಿರಾರು ವರ್ಷಗಳ ಇತಿಹಾಸ ಜೊತೆಗೆ ನಾಡು ನುಡಿ ಸಾಹಿತ್ಯ ಹಾಗೂ ಅನೇಕ ಕ್ಷೇತ್ರಗಳಿಗೆ ಅಮೂಲಾಗ್ರವಾಗವಾದ ಕೊಡುಗೆ ನೀಡಿದೆ.

ರಾಜ್ಯ ಸರ್ಕಾರ ಕೂಡ ಎಲ್ಲಾ ರೀತಿಯ ಭದ್ರತೆ ಕೊಡಬೇಕು ಹಾಗೂ ಕಾಮಕುಮಾರ ಜೈನ್ ಮುನಿಗಳ ಹತ್ಯೆ ಹಿಂದಿನ ನಿಜವಾದ ಕಾರಣ ಹುಡುಕ ಬೇಕು ಎಂದರು ‌ ಜೈನ ಮಂದಿರದಲ್ಲಿ ಸ್ವಾಮೀಜಿಗಳ ಜೊತೆ ಪ್ರಕರಣ ಕುರಿತು ಕೇಂದ್ರ ಅಲ್ಪಸಂಖ್ಯಾತ ಆಯೋಗ ಕೈಗೊಂಡ ಬಗ್ಗೆ ಹೇಳಿದರು.

Rahul Gandhi : ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಆತ್ಮೀಯವಾಗಿ ಸ್ವಾಗತಿಸಿದ ಕಾಂಗ್ರೆಸ್ ನಾಯಕರು

Shakthi yojane: ಶಕ್ತಿ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ನಾರಿಯರು

Mamatha Banerjee : ಬೆಂಗಳೂರಿಗೆ ಆಗಮಿಸಿದ ಮಮತಾ ಬ್ಯಾನರ್ಜಿಯನ್ನು ಬರಮಾಡಿಕೊಂಡ ಡಿಕೆಶಿ

 

- Advertisement -

Latest Posts

Don't Miss