Friday, April 25, 2025

Latest Posts

ಸಭ್ಯರ ವೇಷದಲ್ಲಿದ್ದ ಭಯೋತ್ಪಾದಕರ ಬಂಧನ…!

- Advertisement -

National News:

ಇಬ್ಬರು  ಭಯೋತ್ಪಾದಕರು  ಬಂಧನವಾದ ಪ್ರಕರಣ ಬೆಳಕಿಗೆ  ಬಂದಿದೆ.ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಸಭ್ಯರ ವೇಷದಲ್ಲಿದ್ದ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಬಂಧಿಸಿರುವ ಘಟನೆ ನಡೆದಿದೆ. ಬಂಧಿತರನ್ನು ಜಾಫರ್‌ ಇಕ್ಬಾಲ್ ಮತ್ತು ಬಲ್‌ ಅಂಗ್ರಲಾ ಎಂದು ಗುರುತಿಸಲಾಗಿದೆ. ಭಯೋತ್ಪಾದಕ ಜಾಫರ್ ಎಂಬಾತ ಈ ಹಿಂದೆ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದ ಲಷ್ಕರ್ ಎ ತೊಯಬಾ ಸಂಘಟನೆಯ ಉಗ್ರ ಮೊಹಮ್ಮದ್‌ ಇಶಾಕ್‌ನ ಸಹೋದರ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಬಂಧಿತರಿಂದ ಅಡಗುತಾಣದಲ್ಲಿ ಇರಿಸಿದ್ದ ವಿವಿಧ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಹಾಗೂ 1.81 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

- Advertisement -

Latest Posts

Don't Miss