Monday, December 23, 2024

Latest Posts

Kumbamela ; ಶ್ರಾವಣ ಮಾಸದ ಕುಂಭಮೇಳ

- Advertisement -

ನಾಯಕನಹಟ್ಟಿ : ಶ್ರಾವಣ ಮಾಸದ ಕೊನೆಯ ಶುಕ್ರವಾರ ನಾಯಕನ ಹಟ್ಟಿ ಪಟ್ಟಣ ವ್ಯಾಪ್ತಿಯಲ್ಲಿ ಕುಂಭಮೇಳವನ್ನು ಅದ್ದೂರಿಯಾಗಿ ಜರುಗಿಸಲಾಯಿತು. ರಾಜ್ಯದಲ್ಲಿ ಬರಗಾಲ ಆವರಿಸಿದ್ದರೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕುಂಭಮೇಳದಲ್ಲಿ ಭಾಗವಹಿಸಿದ್ದರು.

ಇನ್ನೂ ಈ ಕುಂಭಮೇಳವನ್ನು ತಿಪ್ಪೇರುದ್ರಸ್ವಾಮಿ ಹೊರಮಠದಿಂದ ಒಳಮಠದವರೆಗೆ ಕುಂಭಮೇಳವನ್ನು ಸಾಗಿಸಲಾಯಿತು. ಈ ಕಾರ್ಯಕ್ರಮದ ಉಸ್ತುವಾರಿಯನ್ನು ದೇವಸ್ಥಾನದ ಕಾರ್ಯದರ್ಶಿಯಾದ ಗಂಗಾಧರಪ್ಪ ಅವರ ನೇತೃತ್ವವನ್ನು ವಹಿಸಿದ್ದರು.

ಇನ್ನು ಕುಂಭಮೇಳದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕಾರ್ಯದರ್ಶಿಗಳು  ಈ ವರ್ಷದ  ಶ್ರಾವಣ ಮಾಸದ ಕುಂಭಮೇಳವು ಯಾವುದೇ ತೊಂದರೆಗಳಿಲ್ಲದೆ ಶುಭದಿಂದ ಜರುಗಿದೆ, ನಾಡಿನಲ್ಲಿ ಮಳೆ ಬೆಳೆ ಸಮೃದ್ಧವಾಗಿ ಆಗಲಿ, ಜನರ  ಮನದಲ್ಲಿ ಶಾಂತಿ ನೆಲೆಸಲಿ ಎಂಬ ಭಾವನೆಗಳುಳ್ಳ ಕುಂಭಮೇಳವು ಜರುಗಿಸಲಾಗಿದೆ

ಈ ಭಾಗದಲ್ಲಿ ಬರಗಾಲವಿದ್ದರೂ ಕೂಡ ಭಕ್ತರ  ಸಂಖ್ಯೆಯೇನು ಕಡಿಮೆ ಇಲ್ಲ ಶ್ರಾವಣ ಮಾಸ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ, ದೇವರ ಆಶೀರ್ವಾದ ಎಲ್ಲರ ಮೇಲಿರಲಿ, ಕುಂಭಾಭಿಷೇಕದಿಂದ ತಂದ ನೀರನ್ನು ಸ್ವಾಮಿಗೆ ಅಭಿಷೇಕ ಮಾಡಲಾಗುತ್ತದೆ ಎಂದು ತಿಳಿಸಿದರು.

Athani: ರಮೇಶ್ ಜಾರಕಿಹೊಳಿ ಆರೋಪಕ್ಕೆ ಟಾಂಗ್ ಕೊಟ್ಟ ಶಾಸಕ ಲಕ್ಷ್ಮಣ್ ಸವದಿ..!

 

Cobra : ನಾಗರಹಾವಿಗೆ ಡೀಸೆಲ್ ಎರಚಿದಾತನಿಗೆ ಸಂಕಷ್ಟ..?! ತುಳುನಾಡಿನಲ್ಲಿ ದೈವ ಶಕ್ತಿ ಮತ್ತೆ ಸಾಬೀತು..!

Idga Garden: ಈದ್ಗಾ ಮೈದಾನದ ಗಣಪತಿ ಹೆಸರಲ್ಲಿ ಅವ್ಯವಹಾರದ ಆರೋಪ:

- Advertisement -

Latest Posts

Don't Miss