Saturday, December 14, 2024

Latest Posts

Gruhalaxmi-ಗೃಹಲಕ್ಷ್ಮಿ ಯೋಜನೆಗೆ ನಾಯಕನಹಟ್ಟಿಯಲ್ಲಿ ಚಾಲನೆ..!

- Advertisement -

ನಾಯಕನಹಟ್ಟಿ :   ರಾಜ್ಯದ ಕಟ್ಟ ಕಡೆಯ ಕುಟುಂಬದ ಮನೆಯ ಯಜಮಾನಿಗೆ ರಾಜ್ಯ ಸರ್ಕಾರದ ಪ್ರತಿ ತಿಂಗಳು 2000 ರೂಪಾಯಿಗಳನ್ನು ಅವರ ಖಾತೆಗೆ ಜಮಾ ಮಾಡುವಂತಹ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯನ್ನು ಇಂದು ಅನುಷ್ಠಾನಗೊಳಿಸಿದ್ದಾರೆ. ಯೋಜನೆಯನ್ನು ಎಲ್ಲಾ ಕುಟುಂಬ ಯಜಮಾನರು ಸದ್ಬಳಕೆ ಮಾಡಿಕೊಳ್ಳಬೇಕು. ಎಂದು ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಎಂ ಶಿವಕುಮಾರ್ ತಿಳಿಸಿದರು.

ನಾಯಕನಹಟ್ಟಿಯ ವಾಲ್ಮೀಕಿ ವೃತ್ತದಲ್ಲಿ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಅಧಿಕಾರಿ ಎಂ ಶಿವಕುಮಾರ್ ಅವರು, ಈ ಯೋಜನೆಯ ಫಲಾನುಭವಿಗಳು  ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ  2000 ರೂಪಾಯಿ ಹಣವನ್ನು ಕುಟುಂಬದ ಯಜಮಾನರು ಸದುಪಯೋಗ ಮಾಡಿಕೊಳ್ಳಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ 3700 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು ಇನ್ನು ಉಳಿದ ಫಲಾನುಭವಿಗಳು ಕೂಡಲೇ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಅನುಕೂಲವನ್ನು ಪಡೆದುಕೊಳ್ಳಬೇಕು. ಯಾವೊಬ್ಬ ಕುಟುಂಬದ ಯಜಮಾನಯು ಸಹ ಈ ಯೋಜನೆಯಿಂದ ವಂಚಿತರಾಗಬಾರದು ಎಂದು ತಿಳಿಸಿದರು.

ರಾಜ್ಯ ಸರ್ಕಾರದ  ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯು ವಿವಾಹಿತೆಯಾರು, ಪಡಿತರ ಚೀಟಿಯಲ್ಲಿರುವ ಕುಟುಂಬದ ಯಜಮಾನಿಯರು, ಲೈಂಗಿಕ ಅಲ್ಪಸಂಖ್ಯಾತೆಯರು, ಡಿ ದರ್ಜೆ ನೌಕರರು, ಗುತ್ತಿಗೆ ನೌಕರರು ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ಜಿಎಸ್ಟಿ, ಆದಾಯ ತೆರಿಗೆ ಕಟ್ಟುವಂತ ಕುಟುಂಬದವರು ಅರ್ಹರಾಗಿರುವುದಿಲ್ಲ. ಕುಟುಂಬದಲ್ಲಿನ ಅತ್ತೆ-ಸೊಸೆಯರು ಒಪ್ಪಂದದ ಮೇರೆಗೆ ಯಾರಿಗಾದರೂ ಒಬ್ಬರಿಗೆ ಯೋಜನೆಯ ಲಾಭ ಪಡೆಯಬಹುದಾಗಿದೆ ಎಂದು ಚಳ್ಳಕೆರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯ ಅಧಿಕಾರಿ  ವಿಜಯಲಕ್ಷ್ಮಿ ರವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಸೈಯದ್ ಅನ್ವರ್ ಪಾಷ. ಕೆ ಪಿ ತಿಪ್ಪೇಸ್ವಾಮಿ. ಬೋರಮ್ಮ. ಮಂಜುಳಾ. ಸುನಿತಾ. ಪೆದ್ದನೋ ಭಯ್ಯ. ದುರುಗಪ್ಪ.   ಆರೋಗ್ಯ ನಿರೀಕ್ಷಕರಾದ ಟಿ ರುದ್ರಮನಿ. ದ್ವಿತೀಯ ದರ್ಜೆ ಸಹಾಯಕರಾದ  ಎಸ್ ಸುರೇಶ್, ಟಿ ತಿಪ್ಪೇಸ್ವಾಮಿ. ದಯಾನಂದ. ಕರವ ಸುಲಿಗಾರ ಸಂದೀಪ್. ಗುಡದಯ್ಯ. ಪಟ್ಟಣ ಪಂಚಾಯತ್ ನೌಕರರು ಮತ್ತು ಸಿಬ್ಬಂದಿಗಳು. ಆರೋಗ್ಯ ಇಲಾಖೆಯ ನೌಕರರು ಮತ್ತು ಆಶಾ ಕಾರ್ಯಕರ್ತೆಯರು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು. ವ್ಯಾಪ್ತಿಯ ಎಲ್ಲಾ ಗೃಹಿಣಿಯರು ಭಾಗವಹಿಸಿದ್ದರು.

ಇನ್ನು ಈ ವೇಳೆ ಎಸ್ ಪ್ರಭುಸ್ವಾಮಿ ಕಾಂಗ್ರೆಸ್ ಮುಖಂಡರು,ಸೈಯದ್ ಅನ್ವರ್ ಭಾಷಾ ಪಟ್ಟಣ ಪಂಚಾಯತ್ ಸದಸ್ಯ ರು.ಮಂಜುಳಾ(ಪಟ್ಟಣ ಪಂಚಾಯತ್ ಸದಸ್ಯೆ),ದೇವಿರಮ್ಮ(ಫಲಾನುಭವಿ)ಉಪಸ್ಥಿತರಿದ್ದರು.

Saleem ahamed; ಬಿಜೆಪಿಯವರು ರಸ್ತೆಯಲ್ಲಿ ನಿಂತರೂ ಮೋದಿ ಅವರನ್ನು ನೋಡಲೇ ಇಲ್ಲ..!

Saleem ahamed; ಐದನೇ ಗ್ಯಾರಂಟಿಗೆ ಡಿಸೆಂಬರ್ ನಲ್ಲಿ ಚಾಲನೆ ಸಿಗಲಿದೆ,.!

MLC Saleem Ahamed: ವಿರೋಧ ಪಕ್ಷದ ನಾಯಕರಿಲ್ಲದೇ ಇರೋದು ಇತಿಹಾಸದಲ್ಲಿ ಮೊದಲು

 

 

- Advertisement -

Latest Posts

Don't Miss