Friday, July 4, 2025

Latest Posts

ನವೆಂಬರ್ ನಲ್ಲೇ ಮಹಿಳೆಯರಿಗೆ ಎನ್ ಡಿಎ ಪರೀಕ್ಷೆ..!

- Advertisement -

www.karnatakatv.net :ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಮಹಿಳೆಯರ ಪ್ರವೇಶವನ್ನು ಒಂದು ವರ್ಷ ಮುಂದೂಡೋದಕ್ಕೆ ಸಾಧ್ಯ ಇಲ್ಲ ಅಂತ ಸುಪ್ರೀಂ ಕೋರ್ಟ್ ಹೇಳಿದೆ.

ನವೆಂಬರ್ ನಲ್ಲಿ ನಡೆಯಲಿರುವ ಪ್ರವೇಶ ಪರೀಕ್ಷೆಯನ್ನು ಬರೆಯಲು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದೆ. ಇನ್ನು ಎನ್ ಡಿಎಗೆ ಮಹಿಳೆಯರ ಪ್ರವೇಶಾತಿ ಅಧಿಸೂಚನೆಯನ್ನು 2022ರ ಮೇ ತಿಂಗಳಿನಲ್ಲಿ ಹೊರಡಿಸಲಾಗುತ್ತೆ ಅಂತ ಕೇಂದ್ರ ಸರ್ಕಾರ ತಿಳಿಸಿತ್ತು. ಆದ್ರೆ ಇದಕ್ಕೊಪ್ಪದ ಸುಪ್ರೀಂ ಕೋರ್ಟ್ ನವೆಂಬರ್ ನಲ್ಲೇ ಪ್ರವೇಶ ಪರೀಕ್ಷೆ ನಡೆಸಬೇಕು ಅಂತ ತಿಳಿಸಿದೆ.

ನ್ಯಾಯಮೂರ್ತಿ ಎಸ್ ಕೆ ಕೌಲ್ ಅರ್ಜಿಯನ್ನು ಪರಿಶೀಲಿಸಿ, ಮೇ 2022 ರಲ್ಲಿ ಪರೀಕ್ಷೆಗೆ ಹಾಜರಾದರೆ ಜೂನ್ 2023 ರಲ್ಲಿ ಪ್ರವೇಶಾತಿ ನಡೆಯುತ್ತದೆ. ನಾವು ಒಂದು ವರ್ಷದವರೆಗೆ ವಿಳಂಬಮಾಡಲು ಸಾಧ್ಯವಿಲ್ಲ. ನಾವು ಹುಡುಗಿಯರಿಗೆ ಭರವಸೆಯನ್ನು ಕೋಟ್ಟಿದ್ದೆವೆ ಹಾಗಾಗಿ  ಪರೀಕ್ಷೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

- Advertisement -

Latest Posts

Don't Miss