Saturday, July 5, 2025

Latest Posts

ವಿಪತ್ತು ನಿರ್ವಹಣೆ ಹಾಗೂ ಪ್ರಥಮ ಚಿಕಿತ್ಸೆ ಕುರಿತು ಪ್ರಾತ್ಯಕ್ಷಿಕೆ

- Advertisement -

State News:

ಜಿಲ್ಲಾಡಳಿತ ಹಾಗೂ ಎನ್.ಡಿ.ಆರ್.ಎಫ್ ತಂಡದ ವತಿಯಿಂದ ವಿಪತ್ತು ನಿರ್ವಹಣೆ ಹಾಗೂ ಪ್ರಥಮ ಚಿಕಿತ್ಸೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಪ್ರಾತ್ಯಕ್ಷಿಕೆಯನ್ನು ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಣ್ಣದಾಗಿ ಕೈಗೆ ಏಟು ಬಿದ್ದು ರಕ್ತ ಸ್ರಾವವಾದಗ ಸಮಯ ಪ್ರಜ್ಞೆಯಿಂದ ಪ್ರಥಮ ಚಿಕಿತ್ಸೆ ಮಾಡಬೇಕು. ಮೊದಲು ಕೈಗೆ ಬಟ್ಟೆ ಕಟ್ಟಿ, ಕೈಯನ್ನು ಮೇಲಕ್ಕೆ ಎತ್ತಿದರೆ ರಕ್ತ ಸೋರಿಕೆ ಸ್ವಲ್ಪ ನಿಲ್ಲುತ್ತದೆ. ಮುಂದುವರಿದು ಕಟ್ಟಿದ ಬಟ್ಟೆಯನ್ನು‌ ರಕ್ತದ ಚಲನೆಗಾಗಿ ಅದನ್ನು ಸ್ವಲ್ಪ ಸಡಿಲಿಕೆ ಮಾಡಬೇಕು. ಅನಂತರ ಮುಂದಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಬೇಕು ಎಂದು ಪ್ರದರ್ಶನದ ಮೂಲಕ ತಿಳಿಸಲಾಯಿತು.

ತಲೆಗೆ ಪೆಟ್ಟು ಬಿದ್ದಾಗ ಸೂಕ್ಷ್ಮವಾಗಿ ಪ್ರಥಮ ಚಿಕಿತ್ಸೆ ಮಾಡಬೇಕು. ಪೆಟ್ಟಾದ ತಲೆ ಭಾಗಕ್ಕೆ ನಮ್ಮ ಹತ್ತಿರವಿರುವ ಸ್ವಚ್ಛ ಬಟ್ಟೆಯಿಂದ ಕಟ್ಟಬೇಕು. ಅವರಿಗೆ ಗಾಬರಿ ಆಗದಂತೆ ನೋಡಿಕೊಳ್ಳುವುದು ಉತ್ತಮ. ಯಾಕೆಂದರೆ ಗಾಬರಿ ಆದರೆ ಎದೆ ಬಡಿತ ಹೆಚ್ಚಾಗಿ ರಕ್ತ ಸ್ರಾವ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಕಣ್ಣಿಗೆ ಪೆಟ್ಟು ಬಿದ್ದಾಗ ಪೆಟ್ಟು‌ ಬಿದ್ದ ಕಣ್ಣಿಗೆ ದೂಳು ಬೀಳದಂತೆ ಪೇಪರ್ ಲೋಟದ ಸಹಾಯದಿಂದ ಬೆಂಡೇಜ್ ಮಾಡುವ ಬಗ್ಗೆ , ಚಾಕು ಅಥವಾ ಚೂಪಾದ ವಸ್ತುವು‌ ದೇಹದ ಒಳಗೆ ಚುಚ್ಚಿಕೊಂಡ ಸನ್ನಿವೇಶವದಲ್ಲಿ‌ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ಪ್ರತ್ಯಕಿಕೆಗಳ ಮೂಲಕ‌ ಪ್ರದರ್ಶನವನ್ನು ಎನ್.ಡಿ.ಆರ್.ಎಫ್ ತಂಡದ ಅಕಾಶ್, ಎಂ.ಎಸ್ .ಮಠಪತಿ ನೀಡಲಾಯಿತು

ಕಾರ್ಯಕ್ರಮದಲ್ಲಿ ಎನ್.ಡಿ.ಆರ್.ಎಫ್ ಇನ್ಸ್ಪೆಕ್ಟರ್ ಶಿವಕುಮಾರ್, ಕಾಲೇಜಿನ ಪ್ರಾಂಶುಪಾಲ ಹೆಚ್.ಪಿ ತಮ್ಮೆಗೌಡ, ಉಪನ್ಯಾಸಕ ಚಂದ್ರಲಿಂಗು, , ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯ ನಿರ್ದೇಶಕಿ ಎಸ್.ಹೆಚ್ ನಿರ್ಮಲ, ಜಿಲ್ಲಾಧಿಕಾರಿ ಕಛೇರಿಯ ಪುನೀತ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಹಿರಿಯ  ಸಾಹಿತಿ ಲೇಖಕಿ ಸಾರಾ ಅಬೂಬಕ್ಕರ್ ಇನ್ನಿಲ್ಲ..!

ಬೆಂಗಳೂರು ಮೆಟ್ರೋ ಕಾಮಗಾರಿಗೆ ಇನ್ನೆಷ್ಟು ಬಲಿ ಬೇಕು..?!

ಗುಂಡಿನ ದಾಳಿಗೆ ಯುವಕ ಬಲಿ..?!

- Advertisement -

Latest Posts

Don't Miss