www.karnatakatv.net: ಗುಂಡ್ಲುಪೇಟೆ: ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಮಾತನಾಡಲು ಅರ್ಹತೆ ಮತ್ತು ಬದ್ಧತೆ ಇರಬೇಕು. ಗೆದ್ದವರೆಲ್ಲ ಸಾಧಕರಾಗುವುದಿಲ್ಲ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಸಿ.ಎಸ್.ನಿರಂಜನ್ ಕುಮಾರ್ 200 ಕೋಟಿಗೂ ಹೆಚ್ಚು ಅನುದಾನವನ್ನು ತಂದಿದ್ದೇನೆ ಎಂದು ಹೇಳಿಕೆ ನೀಡುವ ಬದಲು ಧಾಖಲೆ ತೋರಿಸಲಿ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಕಳೆದ 25 ವರ್ಷಗಳ ಅವಧಿಯಲ್ಲಿ ಎಚ್.ಎಸ್.ಎಂ. ಕೊಡುಗೆ ಏನು ಎಂಬುದು ಮತದಾರ ಬಂದುಗಳಿಗೆ ಗೊತ್ತು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಧೀಮಂತ ವ್ಯಕ್ತಿಯ ಶ್ರಮಕ್ಕೆ ತಕ್ಕ ಪ್ರತಿಪಲವೆ ಇಂದಿನ ಗುಂಡ್ಲುಪೇಟೆಯ ಉನ್ನತಿ. ಹಿಂದೆ ಮಾಡಿದ ಕೆಲಸಗಳ ಅರಿವಿಲ್ಲದೆ ಬಿಜೆಪಿಯ ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್ ಮಾತನಾಡಿರುವುದು ಬೇಜವಬ್ದಾರಿಯುತವಾಗಿದೆ ಇದು ಸರಿಯಲ್ಲ, ಎಚ್ ಎಸ್ ಎಂ ಕೊಡುಗೆ ಏನೆಂಬುದು ಜನತೆಗೆ ಗೊತ್ತಿಗೆ ಸುಮ್ಮನೆ ಅರಿವಿಲ್ಲದ ಹಾದಿಯಲ್ಲಿ ಬಂದದ್ದನ್ನು ಹೇಳುವುದಲ್ಲ ಎಂದರು.
ತಾಲೂಕಿಗೆ ಶೈಕ್ಷಣಿಕ ಉನ್ನತಿ ಹಿತದೃಷ್ಟಿಯಿಂದ ಐಟಿಐ ಕಾಲೇಜು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಇನ್ನಿತರ ಅಭಿವೃದ್ಧಿ ಪಥದ ದಿಕ್ಕನ್ನೇ ಬದಲಿಸಿದವರು ನಮ್ಮ ಎಚ್.ಎಸ್.ಎಂ. ಇಂತಹ ಮೇರು ವ್ಯಕ್ತಿಯ ಕುರಿತಂತೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ ಎಂದು ಗೋವಿಂದು ಪರೋಕ್ಷವಾಗಿ ಟಾಂಗ್ ಕೊಟ್ಟರು.
ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ