Saturday, May 17, 2025

Latest Posts

ಜೂನ್ 11ರಿಂದ ನೀನಾಸಮ್ ನಾಟಕೋತ್ಸವ.!

- Advertisement -

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಜೂನ್ 11ರಿಂದ ಜೂನ್15 ರ ವರೆಗೆ ನೀನಾಸಮ್ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಪ್ರತಿದಿನ ಸಂಜೆ 7ರಿಂದ ಪ್ರದರ್ಶನ ನಡೆಯಲಿದ್ದು, ಉಚಿತ ಪ್ರವೇಶ ಜೂನ್ 11ರಂದು ಕೆ‌.ವಿ ಅಕ್ಷರ ನಿರ್ದೇಶನದಲ್ಲಿ ಕಡುಗಲಿಯ ನಿಡುಗಾಥೆ, 12ರಂದು ಸಂಸ ರಚನೆಯ ಬಿರುದಂತೆಂಬರ ಗಂಡ ಮಂಜು ಕೊಗಡು ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.

ಜೂನ್ 13 ರಂದು ಕೆ.ವಿ.ಸುಬ್ಬಣ್ಮ ಮತ್ತು ಕೆ.ವಿ ಅಕ್ಷರ ಅವರ ಅಳವಡಿಕೆಯ ‘ಸಾಹೇಬರು ಬರುತ್ತಾರೆ’ ನಾಟಕವು ಡಾ.ಎಂ ಗಣೇಶ್ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. 14 ರಂದು ಬಿಜಾಪೂರದ ಸ್ಪಿನ್ನಿಂಗ್ ಟ್ರೀ ಥಿಯೇಟರ್ ಕಂಪನಿಯವರಿಂದ ಶಕೀಲ್ ಅಹಮದ್ ನಿರ್ದೇಶನ, 15 ರಂದು ಆರ್ಥರ್‌ ಮಿಲ್ಲರ್ ನಾಟಕದ ಕೆ.ಎಸ್.ಪೂರ್ಣಿಮಾ ಅನುವಾದದ ‘ಡೆಥ್ ಆಪ್ ಎ ಸೇಲ್ಸ್ ಮ್ಯಾನ್’ ಪ್ರವೀಣ್ ಕುಮಾರ್ ಎಡಮಂಗಲ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.

- Advertisement -

Latest Posts

Don't Miss