- Advertisement -
ಸ್ವೀಡನ್: ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಸ್ಟೊಕ್ ಹೋಮ್ ಡೈಮಂಡ್ ಲೀಗ್ ನಲ್ಲಿ ಮತ್ತೊಮ್ಮೆ ರಾಷ್ಟ್ರೀಯ ದಾಖಲೆ ಮುರಿದಿದ್ದಾರೆ.
ಡೈಮಂಡ್ ಲೀಗ್ ನ ಜಾವೆಲಿನ್ ವಿಭಾಗದಲ್ಲಿ 89.94 ಮೀ. ದೂರ ಎಸೆಯುವ ಮೂಲಕ ನೀರಜ್ ಚೋಪ್ರಾ ಎರಡನೆ ಸ್ಥಾನ ಪಡೆದರು. ಜೊತೆಗೆ ರಾಷ್ಟ್ರೀಯ ದಾಖಲೆಯನ್ನು ಮುರಿದರು.
ಡೈಮಂಡ್ ಲೀಗ್ನಲ್ಲಿ ಇದೇ ಮೊದಲ ಬಾರಿಗೆ ಟಾಪ್ 3ರಲ್ಲಿ ಸ್ಥಾನ ಪಡೆದಿದ್ದಾರೆ. 90ಮೀ.ಗೆ ಇನ್ನು ಕೇವಲ 6 ಸೆ.ಮೀ. ಬಾಕಿ ಇತ್ತು. 89.30 ಮೀ. ನೀರ್ ಜ್ ಅವರ ಇದುವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ.
ತಮ್ಮ ಪ್ರದರ್ಶನ ಕುರಿತು ನೀರಜ್ ಚೋಪ್ರಾ, ತುಂಬ ಖುಷಿಯಾಗುತ್ತಿದೆ. ನನ್ನ ಗಮನ ವಿಶ್ವ ಚಾಂಪಿಯನ್ ಶಿಪ್ ಮೇಲೆ ಎಂದು ಹೇಳಿದ್ದಾರೆ.
- Advertisement -