www.karnatakatv.net: ನೀಟ್ ಪರೀಕ್ಷೆಯ ಫಲಿತಾಂಶವನ್ನು ನಿನ್ನೆ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದ್ದು ಇಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ನೋಡಿಕೊಳಬಹುದು, ಮತ್ತು ವಿದ್ಯಾರ್ಥಿಗಳ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗಳ 2021ರ ಫಲಿತಂಶವನ್ನು ಇ-ಮೇಲ್ ಮೂಲಕ ವಿದ್ಯಾರ್ಥಿಗಳಿಗೆ ಕಳುಹಿಸುವದಾಗಿ ತಿಳಿಸಿದ್ದಾರೆ.
ಫಲಿತಾಂಶದ ಜೊತೆಗೆ ಮಕ್ಕಳಿಗೆ ಅಂತಿಮ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿದೆ. ಪದವಿಪೂರ್ವ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶಕ್ಕಾಗಿ ಪರೀಕ್ಷೆಗಳನ್ನು ಸೆ.12 2021 ರವರೆಗೆ ನಡೆದಿದ್ದು, ಈ ವರ್ಷ ಸುಮಾರು 16 ಲಕ್ಷ ಅಭ್ಯರ್ಥಿಗಳು ನೀಟ್ ಯುಜಿ ಪರೀಕ್ಷೆಗೆ ಹಾಜರಾಗಿದ್ದರು. ಅದಾದನಂತರ ಅ.15 2021 ರಂದು ತಾತ್ಕಾಲಿಕ ಕೀ ಉತ್ತರವನ್ನು ಬಿಡುಗಡೆ ಮಾಡಿತ್ತು. ಭಾರತದಲ್ಲಿ 83,075 ವೈದ್ಯಕೀಯ, 26,949 ದಂತ ವೈದ್ಯಕೀಯ, 52,720 ಆಯುಷ್ ಮತ್ತು 603 ಪಶುವೈದ್ಯಕೀಯ ಸೀಟು ಸೇರಿದಂತೆ 3 ವಿಭಾಗಳಿಗೆ ಮೂರು ಗಂಟೆಗಳ ಅವಧಿಯಲ್ಲಿ 720 ಅಂಕಗಳಿಗೆ ನಡೆಸಿದ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು.