ಕರ್ನಾಟಕದ ಎಂಟೆಕ್‌ ಪದವೀಧರನಿಗೆ ನೇಪಾಳ ಸಾರಥ್ಯ?

ನೇಪಾಳ ಪ್ರಧಾನಿ ರೇಸ್‌ನಲ್ಲಿ, ಕರ್ನಾಟಕದ ಎಂಟೆಕ್‌ ಪದವೀಧರರೊಬ್ಬರ ಹೆಸರು ಬಲವಾಗಿ ಕೇಳಿಬರ್ತಿದೆ. ಓಲಿ ಸ್ಥಾನಕ್ಕೆ ರ‍್ಯಾಪರ್ ಬಲೇನ್ ಶಾ ಆಯ್ಕೆ ಸಾಧ್ಯತೆ ಹೆಚ್ಚಾಗಿದೆ. ಕಠ್ಮಂಡುವಿನ ಮೇಯರ್ ಮತ್ತು ಮಾಜಿ ರ‍್ಯಾಪರ್ ಬಾಲೆನ್ ಶಾ, ನೇಪಾಳದ ಜನರಲ್ ಝಡ್, ವಿಶ್ವಾಸಾರ್ಹ ನಾಯಕರಾಗಿ ಹೊರಹೊಮ್ಮಿದ್ದಾರೆ.

ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ಧದ ಆಂದೋಲನವನ್ನು ಬೆಂಬಲಿಸಿದ್ದಕ್ಕಾಗಿ ಮೆಚ್ಚುಗೆ ಗಳಿಸಿದ್ದಾರೆ.
ನೇಪಾಳದಲ್ಲಿ GEN-Z ದಂಗೆಯಿಂದಾಗಿ ನೇಪಾಳದ ಪ್ರಧಾನಿ ಸ್ಥಾನಕ್ಕೆ ಸೆಪ್ಟೆಂಬರ್‌ 9ರಂದು ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದರು. ಸದ್ಯ, 35 ವರ್ಷದ ಬಲೇಂದ್ರ ಅವರ ಪರವಾಗಿ, ದೇಶಾದ್ಯಂತ ದೊಡ್ಡಮಟ್ಟದ ಕ್ಯಾಂಪೇನ್ ನಡೆಯುತ್ತಿದೆ.

ಬಲೇನ್ ಶಾ ಅವರಿಗೆ ಯುವಜನರಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಬಲೇನ್ ಅವರೇ ಮುಂದಿನ ಪ್ರಧಾನಿ ಆಗಬೇಕು. ಯುವಜನರ ಆಶೋತ್ತರ ಈಡೇರಿಸಲು, ಅವರೇ ಸೂಕ್ತ ಎಂಬ ಒತ್ತಾಯ ಕೇಳಿಬರುತ್ತಿದೆ. ಜೊತೆಗೆ ಸಂಸದೆ ಸುಮನಾ ಶ್ರೇಷ್ಠ ಅವರ ಹೆಸರೂ ಕೂಡ ಮುನ್ನೆಲೆಗೆ ಬಂದಿದೆ.

1990ರಲ್ಲಿ ಜನಿಸಿರುವ ಬಲೇನ್, ಎಂಜಿನಿಯರಿಂಗ್ ಪದವೀಧರ. ಕಠ್ಮಂಡುವಿನಲ್ಲಿ ಎಂಜಿನಿ ಯರಿಂಗ್ ಮುಗಿಸಿ, ಬಳಿಕ ಕರ್ನಾಟಕದ ಬೆಳಗಾವಿಯಲ್ಲಿ ಕೇಂದ್ರ ಸ್ಥಾನ ಹೊಂದಿರುವ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಪದವಿ ಪಡೆದಿದ್ದಾರೆ.

ರಾಜಕೀಯಕ್ಕೆ ಕಾಲಿಡುವ ಮೊದಲು ನೇಪಾಳದ ಭೂಗತ ಹಿಪ್ ಆಪ್‌ನಲ್ಲಿ ಸದ್ದು ಮಾಡಿದ್ರು. ರ‍್ಯಾಪರ್ ಆಗಿ, ಸಾಹಿತಿಯಾಗಿ ಯುವಜನರ ಗಮನಸೆಳೆದಿದ್ದಾರೆ.2022ರಲ್ಲಿ ಕಠ್ಮಂಡು ಮೇಯರ್ ಚುನಾವಣೆಗೆ ಸ್ಪರ್ಧಿಸಿ ಸಿಪಿಎನ್ ಅಭ್ಯರ್ಥಿ ವಿರುದ್ಧ, 61,000 ಮತಗಳ ಅಂತರದಿಂದ ಗೆದ್ದಿದ್ರು. ನೇಪಾಳಿ ರ‍್ಯಾಪ್ ಬ್ಯಾಟಲ್ ಲೀಗ್‌ನ 2ನೇ ಆವೃತ್ತಿಯ ವಿನ್ನರ್ ಆಗಿದ್ದಾರೆ.

About The Author