Sunday, October 5, 2025

Latest Posts

ಪರೀಕ್ಷಾರ್ಥಿಗಳ ಕಣ್ಣೀರು…?! ಗೊಂದಲದ ಗೂಡಾಯಿತು ಅರ್ಹತಾ ಪರೀಕ್ಷೆ ಎನ್.ಇ.ಟಿ…!

- Advertisement -

State News:

ವರ್ಷದಲ್ಲಿ 4 ಬಾರಿ ಮುಂದೂಡಿಕೆಯಾಗಿದ್ದ ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಆದರೆ ತಕ್ಷಣಕ್ಕೆ ಪರೀಕ್ಷೆ ನಿಗದಿ ಮಾಡಿರುವುದು ಅಭ್ಯರ್ಥಿಗಳನ್ನು ಗೊಂದಲಕ್ಕೆ ತಳ್ಳಿದ್ದು, ಪರೀಕ್ಷೆ ಬಗ್ಗೆ ಸೂಕ್ತ ಮಾಹಿತಿ ಸಿಗದೆ ಕಣ್ಣೀರು ಸುರಿಸುತ್ತಿದ್ದಾರೆ. ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ಅ.14ರಂದು ನಿಗದಿ ಮಾಡಲಾಗಿದ್ದು, ಪರೀಕ್ಷಾ ಕೇಂದ್ರಗಳನ್ನು ಬದಲಾವಣೆ ಮಾಡಲಾಗಿದೆ. ಈ ಅವ್ಯವಸ್ಥೆ ಕುರಿತು ಹಾಸನದ ಪರೀಕ್ಷರ‍್ಥಿ ನಾಗಶ್ರೀ ಅಳಲು ತೋಡಿಕೊಂಡಿದ್ದಾರೆ. ನಾವು ಆಯ್ಕೆ ಮಾಡಿದ್ದ ಪರೀಕ್ಷಾ ಕೇಂದ್ರ ಬದಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು, ಮೈಸೂರು, ಮಂಗಳೂರು ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡಿದ್ದ ನಾಗಶ್ರೀ, ತಮ್ಮ ಕೇಂದ್ರ ಬದಲಾವಣೆ ಬಗ್ಗೆ ಅಳಲುತೋಡಿಕೊಂಡಿದ್ದಾರೆ. ನಾವು ಆಯ್ಕೆ ಮಾಡಿದ್ದ ಪರೀಕ್ಷಾ ಕೇಂದ್ರ ಬದಲಿಸಿ ಬೆಳಗಾವಿಗೆ ನಿಗದಿ ಮಾಡಿದ್ದಾರೆ. ಪರೀಕ್ಷೆ ಮೂರು ದಿನ ಬಾಕಿ ಇರುವಾಗ ಪರೀಕ್ಷಾ ಕೇಂದ್ರ ಬದಲಿಸಿದ್ದಾರೆ. ಬೆಳಗಾವಿಯಲ್ಲಿ ಯಾವ ಶಾಲೆ ಅಥವಾ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ಎಂಬ ಮಾಹಿತಿಯೂ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆಗಿರುವ ಅವ್ಯವಸ್ಥೆ ಸರಿಮಾಡಿ ಮುಕ್ತವಾಗಿ ಪರೀಕ್ಷೆ ಎದುರಿಸಲು ಅವಕಾಶ ನೀಡಿ ಎಂದು ಅಭ್ಯರ್ಥಿಗಳು ಒತ್ತಾಯಿಸುತ್ತಿದ್ದಾರೆ.

ಬೆಂಗಳೂರು: ಕಟ್ಟಡ ಕುಸಿದು ಇಬ್ಬರು ದುರ್ಮರಣ…!

ಮಂಡ್ಯ ಜಿಲ್ಲೆಯಲ್ಲಿ ಭಾರತ್ ಜೂಡೋ ಯಶಸ್ವಿ ಕುರಿತು ಸುದ್ದಿ ಗೋಷ್ಠಿ

ಪುನೀತ ಪರ್ವಕ್ಕೆ ಸಿಎಂ ಬಸವರಾಜ ಬೊಮ್ಮಾಯಿಗೆ ಆಹ್ವಾನ ನೀಡಿದ ಅಶ್ವಿನಿ

- Advertisement -

Latest Posts

Don't Miss