Technology News:
ಇತ್ತೀಚಿಗಷ್ಟೆ ಚೀನಾದಲ್ಲಿ Motorola X30 Pro ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದ್ದ ಅದೇ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ Moto Edge 30 Ultra ಎಂಬ ಹೊಸ ಹೆಸರಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ವೈಶಿಷ್ಟ್ಯಗಳಿಂದ ತಿಳಿದುಬಂದಿದೆ. ಅದರಂತೆ, ನೂತನ Moto Edge 30 Ultra ಸ್ಮಾರ್ಟ್‌ಫೋನ್ ಸ್ಕ್ರೀನ್ ಎಲ್ಲಾ ಕಡೆಗಳಲ್ಲಿ ಕನಿಷ್ಠ ಬೆಜೆಲ್‌ಗಳಿಂದ ಆವೃತವಾಗಿರುವ 6.73 ಇಂಚಿನ ಫುಲ್ HD+ pOLED ಡಿಸ್‌ಪ್ಲೇಯನ್ನು ಹೊಂದಿರಲಿದೆ. 20:9 ರಚನೆಯ ಅನುಪಾತದಲ್ಲಿರುವ ಈ ಡಿಸ್‌ಪ್ಲೇಯು 144Hz ರಿಫ್ರೆಶ್ ರೇಟ್, 1080 x 2400 ಪಿಕ್ಸೆಲ್ಸ್, 1,200 ನಿಟ್ಸ್ ಬ್ರೈಟ್‌ನೆಸ್, HDR10+ ಬೆಂಬಲ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.ಹುಡ್ ಅಡಿಯಲ್ಲಿ ,Snapdragon 8+ Gen 1 SoC ಪ್ರೊಸೆಸರ್ ಅನ್ನು ಹೊಂದಿರಲಿದ್ದು, ಇದನ್ನು 8GB RAM + 128GB, 12GB RAM + 256GB ಹಾಗೂ 12GB RAM ಮತ್ತು 512GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ವೇರಿಯೆಂಟ್ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ.