ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಗ್ಗಟ್ಟಿನ ಕೊರತೆ ಇದೆಯಾ? ಅವರವರ ಕಾಲು ಅವರೇ ಎಳೆದು ಕೊಳ್ಳುತ್ತಿದ್ದಾರ? ಪದೇ ಪದೇ ಈ ವಿಚಾರ ಚರ್ಚೆಗೆ ಕಾರಣ ಆಗುತ್ತಲೆ ಬರುತ್ತಿದೆ. ಇತ್ತಿಚೀಗಷ್ಟೆ ನಟಿ ರಮ್ಯಾ ಕೂಡ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲ ಅಂತ ಇತ್ತೀಚೆಗೆ ಹೇಳಿದ್ದರು. ಹೊಸಬರ ಸಿನಿಮಾಗಳಿಗೆ ಯಾರೂ ಸಪೋರ್ಟ್ ಮಾಡಲ್ಲ ಎಂದಿದ್ದರು ರಮ್ಯಾ. ಇದಕ್ಕೆ ಪುಷ್ಟಿ ಕೊಡುವಂತೆ ಇತ್ತೀಚೆಗೆ ನಡೆದ ಕೆಡಿ: ದಿ ಡೆವಿಲ್ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಕೂಡ ನಮ್ಮಲ್ಲಿ ಒಗ್ಗಟ್ಟಿಲ್ಲ ಅಂತ ಆಕ್ರೋಶ ಹೊರ ಹಾಕಿದ್ದಾರೆ.
ಸ್ಯಾಂಡಲ್ವುಡ್ ಪರಿಸ್ಥಿತಿ ಬಗ್ಗೆ ಮಾತನಾಡಿರುವ ಜೋಗಿ ಪ್ರೇಮ್ ಬೇರೆಕಡೆವರು ನಮಗೆ ತುಂಬಾ ಸಪೋರ್ಟ್ ಮಾಡ್ತಾರೆ. ಆದ್ರೆ ಇಲ್ಲಿ ನಮ್ಮವ್ರೇ ನಮ್ಮ ಕಾಲು ಎಳೀತಾರೆ. ಅದು ನಿಲ್ಲಬೇಕು. ನಮ್ಮವರಿಗೆ ನಾವು ಸಪೋರ್ಟ್ ಮಾಡಬೇಕು. ಇಲ್ಲಿ ಅಣ್ಣ ಇದ್ರೆ ತಮ್ಮ ಕಾಯ್ತಿರ್ತಾನೆ ಕಲ್ಲು ಎತ್ತಿ ಹಾಕೋಕೆ ಎಂದು ಹೇಳಿದ್ದಾರೆ. ಇದೀಗ ಇದು ಬಾರಿ ಚರ್ಚೆಗೆ ಕಾರಣವಾಗಿದೆ.
ನಮ್ಮ ಮನೆಯಲ್ಲಿ ನಾವು ನಾವೇ ಹೊಡೆದಾಡಿಕೊಂಡು ಸಾಯೋದಕ್ಕಿಂತ ಎಲ್ಲರೂ ಚೆನ್ನಾಗಿರೋಣ ಅನ್ನೋದು ಒಂದು ಆಸೆ. ಇದು ಬಿಟ್ಟು ಬೇರೆ ಏನೂ ಉದ್ದೇಶ ಇಲ್ಲ. ಸಿನಿಮಾಗಿಂತ ದೊಡ್ಡವರು ಇಲ್ಲಿ ಯಾರೂ ಇಲ್ಲ. ನಾವು ಇರುವುದೇ ಜನರಿಗೆ ಮನರಂಜನೆ ನೀಡೋಕೆ. ಡಾ. ರಾಜ್ಕುಮಾರ್ ಸಮಯದಲ್ಲಿ ಒಗ್ಗಟ್ಟು ಇತ್ತು. ಅಂಬರೀಷ್ ಕರೆದಾಗ ಎಲ್ಲರೂ ಬರುತ್ತಿದ್ದರು. ಈಗ ಯಾರೂ ಬರುತ್ತಿಲ್ಲ. ನಮಗೆ ಎನೋ ಸಮಸ್ಯೆ ಆಯಿತು ಎಂದಾಗ ನಾವು ಹೇಳಿಕೊಳ್ಳಬೇಕು. ಆಗ ಕರೆಯರೆ ಯಾರು ಬರುತ್ತಾರೆ? ಇದು ಸಮುದ್ರ ಇದ್ದಂಗೆ. ಅವರವರ ಸಾಮರ್ಥ್ಯ ಇದ್ದಷ್ಟು ಈಜುತ್ತಾರೆ ಅಷ್ಟೇ’ ಎಂದು ಪ್ರೇಮ್ ಹೇಳಿದ್ದಾರೆ.
ಇನ್ನು ಹೆಣ್ಮಕ್ಕಳಿಗೆ ಚಿತ್ರರಂಗದಲ್ಲಿ ಹೆಚ್ಚು ಮನ್ನಣೆ ಸಿಗುತ್ತಿಲ್ಲ. ಈಗ ಒಗ್ಗಟ್ಟು ಇಲ್ಲದಂತೆ ಆಗಿದೆ. ಒಂದು ಸಿನಿಮಾ ರಿಲೀಸ್ ಆದರೆ ಯಾರೂ ಅದರ ಪ್ರಚಾರ ಮಾಡೋಕೆ ಹೋಗುತ್ತಿಲ್ಲ. ಬೇರೆಯವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ರಮ್ಯಾ ಅವರು ಹೇಳಿದ್ದರು. ಈ ಹಿಂದೆ ಕೂಡ ಕೆಲವು ನಟರು ನಿರ್ದೇಶಕರು, ಸ್ಟಾರ್ಗಳು ಹೊಸಬರಿಗೆ ಸಪೋರ್ಟ್ ಮಾಡಲ್ಲ ಅಂತ ಹೇಳಿದ್ದರು. ಕರವೇ ಅಧ್ಯಕ್ಷ ನಾರಾಯಣ ಗೌಡ ಕೂಡ ಕನ್ನಡ ಚಿತ್ರರಂಗವನ್ನು ರಿಪೇರಿ ಮಾಡಬೇಕಿದೆ, ಹೊಸಬರ ಟೀಸರ್ ರಿಲೀಸ್ಗೆ ಸ್ಟಾರ್ ನಟರಿಗೆ ಆಹ್ವಾನ ನೀಡೋಕೆ ಹೋದ್ರೂ ಯಾರೂ ಸ್ಪಂದಿಸಿಲ್ಲ ಅಂತ ಆಕ್ರೋಶ ಹೊರ ಹಾಕಿದ್ದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ