150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ, ನೋಡುವವರ ಕಣ್ಣಲ್ಲಿ ನೀರು ತರ್ತಾ ಸಾಗುತ್ತಿರುವ ಭಾವುಕ ಸಿನಿಮಾ ‘ಸೈಯಾರ’ ಸಿನೆಮಾ ಸಖತ್ ಸದ್ದು ಮಾಡ್ತಿದೆ. ಹೊಸ ಮುಖಗಳಾದ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅಭಿನಯದಲ್ಲಿ ಬಿಡುಗಡೆಯಾದ ಈ ಚಿತ್ರ, ಬಾಕ್ಸ್ ಆಫೀಸ್ ಕೊಳ್ಳೆ ಹೊಡಿತಿದೆ.
ಸೈಯಾರ ಹಿಂದಿ ಚಲನಚಿತ್ರ, ಯಾವುದೇ ದೊಡ್ಡ ಸ್ಟಾರ್ ನಟ ನಟಿಯರಿಲ್ಲದೆ, ಕೇವಲ ಭಾವುಕ ಕಥೆ ಮೂಲಕ ತನ್ನ ಶಕ್ತಿಯಿಂದ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡ್ತಿದೆ. ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಎಂಬ ಹೊಸ ಮುಖಗಳನ್ನು ಹೀರೋ ಮತ್ತು ಹೀರೋಯಿನ್ ಆಗಿ ನಮ್ಮ ಮುಂದೆ ತಂದಿದೆ. ಇವರಿಬ್ಬರ ಗೆಳೆತನ, ಪ್ರೇಮ, ಪರಸ್ಪರವಾದ ತ್ಯಾಗ, ಮತ್ತು ಜೀವನದ ಸವಾಲುಗಳನ್ನು ತುಂಬಾ ನೈಸರ್ಗಿಕವಾಗಿ ಚಿತ್ರಿಸಲಾಗಿದೆ.
ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸುತ್ತಿರುವ ಜನರು ಭಾವುಕರಾಗುತ್ತಿದ್ದಾರೆ. ಕೆಲವರು ಆ ಪ್ರೇಮ, ನಿಷ್ಠೆ ಮತ್ತು ತ್ಯಾಗದ ದೃಶ್ಯಗಳನ್ನ ನೋಡಿ ಕಣ್ಣೀರು ಹಾಕುತ್ತಿದ್ದಾರೆ.
ಹೃದಯ ಮುಟ್ಟುವ ಕಥೆ, ಪ್ರೇಮ, ತ್ಯಾಗ, ಜೀವನದ ಕರಾಳ ಸತ್ಯಗಳ ಮಿಶ್ರಣ, ಸಾಧಾರಣ ಕುಟುಂಬದ ಕಥೆ, ಯಾವುದೇ ಗ್ಲಾಮರ್ ಇಲ್ಲದ ನೈಸರ್ಗಿಕ ಅಭಿನಯ, ಆಹ್ಲಾದಕರ ಸಂಗೀತ, ಹಿನ್ನೆಲೆ ಸಂಗೀತ ಭಾವನೆಗಳಿಗೆ ತಕ್ಕಂತೆ ಸಂಗೀತ ಕೂಡ ಮನಸ್ಸಿಗೆ ತುಂಬಾ ಇಷ್ಟವಾಗುವಂತಿದೆ. ಚಿತ್ರದ ನಿರೂಪಣೆ ಭಾವುಕತೆ ಮತ್ತು ನಿಜವಾದ ಸಂಬಂಧಗಳ ಕುರಿತು ಇದ್ದರಿಂದ, ಎಲ್ಲಾ ವಯೋಮಾನದ ಜನರಿಗೆ ಇದು ಮನ ಮುಟ್ಟುತ್ತಿದೆ. ಈ ಕಾರಣಕ್ಕೇ ಥಿಯೇಟರ್‌ಗಳಲ್ಲಿ ‘ಕಣ್ಣೀರ ಹೊಳೆ’ ಹರಿಯುತ್ತಿದೆ ಅನ್ನೋದನ್ನು ಕೇಳಬಹುದು, ನೋಡಬಹುದಾಗಿದೆ.
ಚಿತ್ರ ಬಿಡುಗಡೆಯಾಗಿ ಕೇವಲ 6 ದಿನಗಳಲ್ಲಿ 150 ಕೋಟಿ ರೂಪಾಯಿ ಗಳಿಸಿದೆ. ಇದರಲ್ಲಿ, ಭಾನುವಾರ ಮಾತ್ರವೇ 35 ಕೋಟಿ ರೂ. ಗಳಿಕೆಯಾಗಿದೆ.
ಸೋಮವಾರ 24 ಕೋಟಿ, ಮಂಗಳವಾರ 25 ಕೋಟಿ, ಬುಧವಾರ 21 ಕೋಟಿ. ಇದರ ಮೂಲಕ ಒಟ್ಟು ₹153.25 ಕೋಟಿ ದಾಟಿದೆ. ವಿಶ್ವಮಟ್ಟದಲ್ಲಿ ಈಗಾಗಲೇ ಚಿತ್ರ ₹200 ಕೋಟಿ ದಾಟಿದ್ದು, 300 ಕೋಟಿ ಗುರಿ ನಿಶ್ಚಿತವಾಗಿ ಸಾಧಿಸಬಹುದು ಎಂಬ ನಿರೀಕ್ಷೆ ಇದೆ.
ವರದಿ : ಲಾವಣ್ಯ ಅನಿಗೋಳ

