ಕರ್ನಾಟಕ ಜೈಲುಗಳಲ್ಲಿ ವಿಚಾರಣಾಧೀನ ಹಾಗೂ ಇತರೆ ಕೈದಿಗಳಿಗೆ ಆಹಾರ, ಹಾಸಿಗೆ ಮತ್ತು ಬಟ್ಟೆ ಒದಗಿಸುವ ಹೊಸ ನಿಯಮಗಳನ್ನು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಯ ಡಿಜಿಪಿ ಅಲೋಕ್ ಕುಮಾರ್ ಜಾರಿಗೆ ತಂದಿದ್ದಾರೆ. ಈ ಆದೇಶದೊಂದಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯಗಳ ಮೇಲೆ ಕಠಿಣ ನಿಯಂತ್ರಣ ಹೇರಲಾಗಿದೆ.
ಅದೃಷ್ಟವಶಾತ್, ಕೊಲೆ ಪ್ರಕರಣದಲ್ಲಿ ವಿಚಾರಣಾಧೀನದಲ್ಲಿರುವ ನಟ ದರ್ಶನ್ ಸೇರಿದಂತೆ ಕೆಲ ಕೈದಿಗಳಿಗೆ ಹೆಚ್ಚುವರಿ ಬ್ಲ್ಯಾಂಕೇಟು ನೀಡುವ ಅವಕಾಶ ಇದ್ದರೂ, ಹೊಸ ಆದೇಶದಲ್ಲಿ ಇದು ನಿಯಂತ್ರಿತವಾಗಿದೆ. ಡಿಜಿಪಿ ಅಲೋಕ್ ಕುಮಾರ್ ಅವರು ರಾಜ್ಯದ ಎಲ್ಲಾ ಜೈಲಾಧಿಕಾರಿಗಳಿಗೆ ಆಹಾರ, ಹಾಸಿಗೆ, ಬಟ್ಟೆ ಪೂರೈಕೆಯನ್ನು ನಿಗದಿತ ಪ್ರಮಾಣದಲ್ಲಿ ನೀಡುವಂತೆ ಸೂಚನೆ ನೀಡಿದ್ದಾರೆ.
ಹೈಕೋರ್ಟ್ ಹಾದಿ ಸೂಚನೆ ನೀಡಿದ ಹಿನ್ನೆಲೆ, ಕೈದಿಗಳಿಗೆ ಮನೆಯ ಊಟ ಅಥವಾ ಹೆಚ್ಚಿನ ವಿಶೇಷ ಸೌಲಭ್ಯ ನೀಡುವ ಅನುಮತಿಯನ್ನು ತಾತ್ಕಾಲಿಕವಾಗಿ ನಿಗ್ರಹಿಸಲಾಗಿದೆ. ಬೆಂಗಳೂರು ಜೈಲಿನ ಆಹಾರವನ್ನು FSSAI ಪ್ರಮಾಣೀಕರಿಸಿದೆ ಮತ್ತು ಉತ್ತಮ ಗುಣಮಟ್ಟದಷ್ಟಾಗಿದೆ ಎಂದು ಡಿಜಿಪಿ ಹೇಳಿದ್ದಾರೆ.
ವಿಚಾರಣಾಧೀನ ಆರೋಪಿಗೆ ಜೈಲಿನಲ್ಲಿ ಕೊಡುವ ಬ್ಲಾಂಕೆಟ್ ಬಳಸಬೇಕು. ಹೆಚ್ಚುವರಿಯಾಗಿ ಒಂದು ಬ್ಲಾಂಕೆಟ್ ನೀಡಲಾಗುತ್ತೆ. ಯಾವುದೇ ಹಾಸಿಗೆಯ ಸೌಲಭ್ಯ ಇರುವುದಿಲ್ಲ. ಇನ್ನು ಕೈದಿಗಳಿಗೆ ಆಹಾರ, ಬಟ್ಟೆ, ಹಾಸಿಗೆ ಸರಬರಾಜು ನಿಯಂತ್ರಣಕ್ಕೆ ಸೂಚಿಸಲಾಗಿದ್ದು, ಜೈಲಿನ ನಿಯಾಮವಳಿ ಪ್ರಕಾರ ಆಹಾರ, ಬಟ್ಟೆ, ಹಾಸಿಗೆ ನೀಡಲಾಗುತ್ತದೆ. ಇನ್ನು ಸಂದರ್ಶನ ವೇಳೆ ಕೈದಿಗಳಿಗೆ ಖಾಸಗಿ ವ್ಯಕ್ತಿಗಳಿಂದ ನಿರ್ದಿಷ್ಟ ಪ್ರಮಾಣದಲ್ಲಿ ಆಹಾರ ಪೂರೈಕೆಗೆ ಸೂಚಿಸಲಾಗಿದೆ.
ಇನ್ನು ನಿರ್ದಿಷ್ಟ ಪ್ರಮಾಣದಲ್ಲಿ ಪ್ಯಾಕ್ ಮಾಡಿರುವ ಆಹಾರ ನೀಡಲು ಅವಕಾಶವಿದ್ದು, ಬಾಳೆಹಣ್ಣು, ಸೇಬು, ಸೀಬೆಹಣ್ಣು, ಸಪೋಟ ಸೇರಿ 2 ಕೆಜಿಯಷ್ಟಿರಬೇಕು. ಡ್ರೈಫ್ರೂಟ್ಸ್, ಬೇಕರಿ ತಿನಿಸು ಸೇರಿದಂತೆ 500 ಗ್ರಾಮ್ ಮೀರುವಂತಿಲ್ಲ. ವಿಚಾರಣಾಧೀನ ಕೈದಿಗಳಿಗೆ 2 ಜೊತೆ ಬಟ್ಟೆ, 2 ಒಳಉಡುಪು ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




