Tecknology News:
ನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದ ಬೈಕ್ ಸವಾರರಿಗೆ ರಕ್ಷಣೆ ನೀಡಲು ಎಲೆಕ್ಟ್ರಿಕಲ್ ಇಂಜಿನಿಯರ್ ಒಬ್ಬರು ವಿಶೇಷ ಹೆಲ್ಮೆಟ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.
ಅಪಘಾತಗಳಲ್ಲಿ ಹಾನಿಯಾಗುವುದನ್ನು ತಡೆಯಲು ಸರ್ಕಾರ ಜಾರಿಗೆ ತಂದಿರುವ ಕಡ್ಡಾಯ ಹೆಲ್ಮೆಟ್ ಪರಿಣಾಮ ಇದೀಗ ಬೈಕ್ ಸವಾರರಲ್ಲಿ ಸಾಕಷ್ಟು ಸುರಕ್ಷತಾ ಜಾಗೃತಿ ಮೂಡುತ್ತಿದ್ದು, ಮಾರುಕಟ್ಟೆಯಲ್ಲಿ ಬೈಕ್ ಸವಾರರ ಬೇಡಿಕೆಗೆ ಅನುಗುಣವಾಗಿ ಬಜೆಟ್ ಬೆಲೆಯಿಂದ ದುಬಾರಿಯ ಬೆಲೆಯ ಹೆಲ್ಮೆಟ್‌ಗಳು ಖರೀದಿಗೆ ಲಭ್ಯವಿವೆ. ಏರ್ ಪ್ಯೂರಿಫೈಯರ್ ಸೌಲಭ್ಯ ಹೊಂದಿರುವ ವಿಶೇಷ ಹೆಲ್ಮೆಟ್ ಸಹ ಖರೀದಿಗೆ ಲಭ್ಯವಾಗಿದೆ.
ಶೆಲ್ಲಿಯೋಸ್ ಟೆಕ್ನೋಲ್ಯಾಬ್ಸ್ ಎನ್ನುವ ಕಂಪನಿಯೊಂದು ಈ ವಿಶೇಷ ಹೆಲ್ಮೆಟ್ ಅನ್ನು ಅಭಿವೃದ್ದಿಪಡಿಸಿ ಬಿಡುಗಡೆ ಮಾಡಿದ್ದು, ಈ ಹೆಲ್ಮೆಟ್ ಅನ್ನು ವಿಶೇಷವಾಗಿ ಮಾಲಿನ್ಯದಿಂದ ಬೈಕ್ ಸವಾರರನ್ನು ರಕ್ಷಣೆ ಮಾಡುವ ಉದ್ದೇಶ ಹೊಂದಿದೆ.
ಹೆಚ್ಚುತ್ತಿರುವ ವಾಹನಗಳ ಪರಿಣಾಮ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಮಾಲಿನ್ಯ ಪ್ರಮಾಣವು ವಿಪರಿತವಾಗಿ ಹೆಚ್ಚಳವಾಗುತ್ತಿದ್ದು, ಬೈಕಿನಲ್ಲಿ ಪ್ರಯಾಣಿಸುವ ರೈಡರ್‌ಗಳು ಮಾಲಿನ್ಯದಿಂದ ಹೆಚ್ಚಿನ ತೊಂದರೆಯನ್ನು ಅನುಭವಿಸುವುದನ್ನು ತಪ್ಪಿಸಲು ಶೆಲ್ಲಿಯೋಸ್ ಟೆಕ್ನೋಲ್ಯಾಬ್ಸ್ ಈ ವಿಶೇಷ ಹೆಲ್ಮೆಟ್ ಸಿದ್ದಪಡಿಸಿದೆ.
ಶೆಲ್ಲಿಯೋಸ್ ಟೆಕ್ನೋಲ್ಯಾಬ್ಸ್ ಕಂಪನಿಯನ್ನು ಎಲೆಕ್ಟ್ರಿಕಲ್ ಇಂಜಿನಿಯರ್ ಅಮಿತ್ ಪಾಠಕ್ ಎನ್ನುವರು ಆರಂಭಿಸಿದ್ದು, ಬೈಕ್ ಸವಾರಿಗೆ ಉತ್ತಮವಾದ ಗಾಳಿ ಸೇವನೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಏರ್‌ಫಿಲ್ಟರ್ ಹೊಂದಿರುವ ಹೆಲ್ಮೆಟ್ ನಿರ್ಮಾಣ ಮಾಡಲಾಗಿದೆ.
ಹೆಲ್ಮೆಟ್ ಒಳಭಾಗದಲ್ಲಿ ಏರ್‌ಫಿಲ್ಟರ್ ಅಳವಡಿಸಲಾಗಿದ್ದು, ಬೈಕ್ ಸವಾರರು ಹೆಲ್ಮೆಟ್ ಹಾಕಿದ ನಂತರ ಹೊರಗಿನ ಧೂಳು, ವಾಹನಗಳ ಮಾಲಿನ್ಯದಿಂದ ಗರಿಷ್ಠ ರಕ್ಷಣೆ ಒದಗಿಸುತ್ತದೆ.ಹೆಲ್ಮೆಟ್‌ನಲ್ಲಿರುವ ಏರ್‌ಫಿಲ್ಟರ್‌ಗಳು ಹೊರಗಿನ ಬರುವ ಧೂಳಿನ ಕಣಗಳನ್ನು ತಡೆದು ಶುದ್ದ ಗಾಳಿಯ ಸೇವನೆಗೆ ಅನುವು ಮಾಡಿಕೊಡಲಿದ್ದು, ಏರ್‌ಫಿಲ್ಟರ್ ಚಾರ್ಜ್ ಮಾಡಲು ಹೆಲ್ಮೆಟ್‌ನಲ್ಲಿ ಯುಎಸ್‌ಬಿ ಸ್ಲಾಟ್ ಕೂಡಾ ನೀಡಲಾಗಿದೆ.
ವಿಶೇಷ ಸೌಲಭ್ಯಗಳನ್ನು ಹೊಂದಿರುವ ಶೆಲ್ಲಿಯೋಸ್ ಟೆಕ್ನೋಲ್ಯಾಬ್ಸ್‌ನ ಹೆಲ್ಮೆಟ್ ಬೆಲೆಯು ರೂ. 4,500 ವರೆಗೆ ಮಾರಾಟಕ್ಕೆ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಪ್ರಯತ್ನದಲ್ಲಿರುವುದಾಗಿ ಕಂಪನಿಯು ಹೇಳಿಕೊಂಡಿದೆ.
30 ನಿಮಿಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಮುಂಗಡ-ಬುಕ್ಕಿಂಗ್ ಪಡೆದ ಮಹೀಂದ್ರಾ ಸ್ಕಾರ್ಪಿಯೋ ಎನ್ …!