Technology News:
ಮನೆಯಲ್ಲಿ ಸ್ವಲ್ಪ ರಿಲ್ಯಾಕ್ಸ್ ಆಗಿ ಕೂರೋನ ಅನ್ನುವ ಸಮಯದಲ್ಲಿ ಕಿವಿಯಲ್ಲಿ ಗುಯಿಂಗುಟ್ಟಿ ಮೈಯಲ್ಲಿರೊ ರಕ್ತವನ್ನು ಹೀರಿ ಇರಿಟೇಟ್ ಮಾಡೋ ಈ ಸೊಳ್ಳೆಯಿಂ ಪೂರ್ಣ ಪ್ರಮಾಣದಲ್ಲಿ ಮುಕ್ತಿ ಪಡೆಯೋದಕ್ಕೆ ಏನೇನೋ ಕ್ರೀಂ ಲೋಷನ್ ಹಚ್ಚಿ ಸುಸ್ತಾಗ್ತೀವಿ. ಮಾತ್ರವಲ್ಲ ಇವುಗಳು ಆರೋಗ್ಯದ ಮೇಕೆ ದುಷ್ಪರಿಣಾಮ ಬೀರುತ್ತದೆ ಎನ್ನುವ ಆತಂಕವೂ ಇರುತ್ತದೆ. ಇನ್ನು ಮಕ್ಕಳಿದ್ದ ಮನೆಯಲ್ಲಿ ಮಕ್ಕಳು ಅಲರ್ಜಿಗೆ ತುತ್ತಾಗುವ ಭಯ ಕೂಡಾ ಪೋಷಕರನ್ನು ಕಾಡುತ್ತದೆ. ಇದೀಗ ಸೊಳ್ಳೆಗಳಿಂದ ಕ್ಷಣ ಮಾತ್ರದಲ್ಲಿ ಮುಕ್ತಿ ನೀಡುವ ಲ್ಯಾಂಪ್ ಮಾರುಕಟ್ಟೆಗೆ ಬಂದಿದೆ. ಇದರ ಬೆಲೆ ಕೂಡಾ ತೀರ ಕಡಿಮೆಯಾಗಿದ್ದು ಗ್ರಾಹಕ ಪ್ರಿಯವಾಗಿದೆ.
ಲ್ಯಾಂಪ್ ನಿಂದ ಹೊರಸೂಸುವ ಬೆಳಕಿನ ಪರಿಣಾಮ ಸೊಳ್ಳೆಗಳು ಇದರತ್ತ ಆಕರ್ಷಿಸಲ್ಪಡುತ್ತವೆ. ಹೀಗೆ ಬೆಳಕಿನತ್ತ ಬರುವ ಸೊಳ್ಳೆಗಳು ಅಲ್ಲೇ ಸತ್ತು ಬೀಳುತ್ತವೆ. ಮನೆಯ ಯಾವ ಕೋಣೆಯಲ್ಲೇ ಇರಬಹುದು ಅಥವಾ ಕಚೇರಿಯಲ್ಲಿಯಲ್ಲಾದರೂ ಈ ಲ್ಯಾಂಪ್ ನ್ನು ಇರಿಸಬಹುದು. ಈ ಲ್ಯಾಂಪ್ ಅತ್ಯಂತ ಸೊಗಸಾದ ವಿನ್ಯಾಸದಲ್ಲಿ ಬರುತ್ತದೆ. ಇವು ಸೊಳ್ಳೆಗಳನ್ನು ಕೊಲ್ಲುವುದರ ಜೊತೆಗೆ ನೈಟ್ ಲ್ಯಾಂಪ್ ಆಗಿ ಕೂಡಾ ಕಾರ್ಯ ನಿರ್ವಹಿಸುತ್ತದೆ. ಇದರಿಂದ ಹೊರ ಸೂಸುವ ನೀಲಿ ಲ್ಯಾಂಪ್ ಸೊಳ್ಳೆಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಇದು 20 ಚದರ ಮೀಟರ್ ದೂರದಲ್ಲಿ ಹಾರುವ ಸೊಳ್ಳೆಗಳನ್ನು ಕೂಡಾ ತನ್ನತ್ತ ಆಕರ್ಷಿಸುತ್ತದೆ ಇದರಿಂದ ಸೊಳ್ಳೆಗಳಿಂದ ಮುಕ್ತಿ ಪಡೆಯಬಹುದು.
ಹೊಸ ರೂಪದ Noise ಬ್ರಾಂಡ್ ಡಿಜಿಟಲ್ ಸ್ಮಾರ್ಟ್‌ವಾಚ್ ಬಿಡುಗಡೆ..! ಇದರಲ್ಲಿದೆ ಸೂಪರ್ ಫೀಚರ್ಸ್..!
ತಿಂಗಳ ಅಂತ್ಯದ ವೇಳೆಗೆ ಬೆಂಗಳೂರಲ್ಲೂ ಸಿಗಲಿದೆಯಾ ಮೊದಲ ಹಂತದ 5ಜಿ ಸೇವೆ..?!