Saturday, July 27, 2024

Latest Posts

ಟಿವಿ ಉದ್ಯಮ ಬಾಗಿಲು ಮುಚ್ಚುತ್ತಿರುವ ವೇಳೆ ಹೊಸದಾಗಿ ಕನ್ನಡ & ಇಂಗ್ಲೀಷ್ ನ್ಯೂಸ್ ಚಾನಲ್ ಘೋಷಣೆ

- Advertisement -

ಬೆಂಗಳೂರು : ಕರ್ನಾಟಕದ ಯುವ ಪತ್ರಕರ್ತೆ, ರಾಜಕೀಯ ವರದಿಗಾರಿಕೆಯಲ್ಲಿ ಹೆಸರು ಮಾಡಿರುವ ಸ್ವಾತಿ ಚಂದ್ರಶೇಖರ್ ಇಂದು ಕನ್ನಡ ಹಾಗೂ ಇಂಗ್ಲೀಷ್ ಸುದ್ದಿ ವಾಹಿನಿಗಳ ಲೋಗೋ ರಿಲೀಸ್ ಮಾಡಿದ್ರು. ಎರಡೂ ಭಾಷೆಯಲ್ಲಿ ಚಾನಲ್ ಲಾಂಚ್ ಆಗಲಿದ್ದು ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಇರಲಿದೆ. ಪ್ರಸ್ತುತ ಸಂದರ್ಭದಲ್ಲಿ ನ್ಯೂಸ್ ಚಾನಲ್ ನಡೆಸೋದು ಸವಾಲಿನ ಕೆಲಸವೇ ಸರಿ. ಈ ನಡುವೆ ಸ್ಯಾಟಲೈಟ್ ಹಾಗೂ ಡಿಜಿಟಲ್ ರೂಪದಲ್ಲಿ “ಸಿಟಿಜನ್ ಇಂಡಿಯಾ” ಹಾಗೂ “ಸಿಟಿಜನ್ ಕನ್ನಡ” ಚಾನಲ್ ಪ್ರಾರಂಭ ಮಾಡುವ ನಿರ್ಧಾರವನ್ನ ಸ್ವಾತಿ ಪ್ರಕಟಿಸಿದ್ದಾರೆ. ಟಿವಿ5 ಕನ್ನಡ ಸುದ್ದಿ ವಾಹಿನಿಯಲ್ಲಿ ದೆಹಲಿ ವರದಿಗಾರ್ತಿಯಾಗಿದ್ದ ಸ್ವಾತಿ ಚಂದ್ರಶೇಖರ್ ನಂತರ ಬೆಂಗಳೂರಿಗೆ ಆಗಮಿಸಿ ಸಿದ್ದರಾಮಯ್ಯ, ಯಡಿಯೂರಪ್ಪ ಸೇರಿದಂತೆ ರಾಜಕೀಯ ಘಟಾನುಘಟಿಗಳ ಸಂದರ್ಶನವನ್ನ ಮಾಡಿದ್ದಾರೆ.. ಜೊತೆಗೆ ಸ್ವಾತಿ ನಿರೂಪಕಿಯಾಗಿದ್ದ ಬಾಹುಬಲಿ ಕಾರ‍್ಯಕ್ರಮ ಹೆಚ್ಚಿನ ಹೆಸರನ್ನ ತಂದುಕೊಟ್ಟಿತ್ತು..

ಆರ್ಥಿಕ ಸಂಕಷ್ಟದಲ್ಲಿ ಕನ್ನಡ ಪತ್ರಿಕೋದ್ಯಮ

ರಾಜಕೀಯ ನಾಯಕರೇ ನ್ಯೂಸ್ ಚಾನಲ್ ನಡೆಸೋಕೆ ಕಷ್ಟವಾಗಿರುವ ಸಂದರ್ಭದಲ್ಲಿ ಪತ್ರಕರ್ತೆ ಸ್ವಾತಿ ಸವಾಲು ಎದುರಿಸಲು ಸಿದ್ಧರಾಗಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಯವರ ಕಸ್ತೂರಿ ನ್ಯೂಸ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನೌಕರರರನ್ನ  ತೆಗೆದುಹಾಕಲಾಗಿತ್ತು.. ಇಂದು ಮತ್ತೆ ಕುಮಾರಸ್ವಾಮಿಯವರ ಕಸ್ತೂರಿ ನ್ಯೂಸ್ & ಕಸ್ತೂರಿ ಮನೊರಂಜನಾ ವಾಹಿನಿ ಕಡಿಮೆ ನೌಕರರನ್ನ ನೇಮಕಾತಿ ಮಾಡಿಕೊಂಡು ಪುನರಾರಂಭ ಮಾಡಿದೆ . ಹಾಗೆಯೇ ಜನಾರ್ದನರೆಡ್ಡಿಯವರ ಜನಶ್ರೀ, ಸತೀಶ್ ಜಾರಕಿಹೊಳಿ, ನಿರಾಣಿಯವರ ಸಮಯ ಟಿವಿ, ಕಾಂಗ್ರೆಸ್ ನಾಯಕರ ಮಾಲೀಕತ್ವದ ಸುದ್ದಿ ಟಿವಿ ಈಗಾಗಲೇ ಬಾಗಿಲು ಬಂದ್ ಮಾಡಿವೆ. ಕಾಂಗ್ರೆಸ್ ನಾಯಕ ಗಣಿಗ ರವಿಕುಮಾರ್‌ರ ಪ್ರಜಾಟಿವಿ ಆಗಿಂದ್ದಾಗ್ಗೆ ಸಂಬಳ ಸಮಸ್ಯೆ ಆಗ್ತಿರೋದು ಸುಳ್ಳಲ್ಲ.. ಇನ್ನು ಉದ್ಯಮಿ ರಾಕೇಶ್ ಶೆಟ್ಟಿಯವರ ಪವರ್ ಟಿವಿಯಲ್ಲಿ ಕೂಡ ಎರಡ್ಮೂರು ತಿಂಗಳಿAದ ಸಂಬಳ ತಡವಾಗ್ತಿದೆ. ಈ ವೇಳೆ ಪತ್ರಕರ್ತೆ ಸ್ವಾತಿ ಸಾರಥ್ಯದ ಸಿಟಿಜನ್ ಇಂಡಿಯಾ & ಸಿಟಿಜನ್ ಕನ್ನಡ ವಾಹಿನಿಗಳು ಯಾವುದೇ ಆರ್ಥಿಕ ಹಿಂಜರಿತಕ್ಕೆ ಗುರಿಯಾಗದೇ ಚೆನ್ನಾಗಿ ನಡೆಯಲಿ ಅನ್ನೋದು ಎಲ್ಲರ ಆಶಯ.. 11 ವರ್ಷಗಳ ಕಾಲ ನ್ಯೂಸ್ ಚಾನಲ್ ನಲ್ಲಿ ಕಾರ‍್ಯನಿರ್ವಹಿಸಿದ ನನ್ನ ಆಶಯವೂ ಅದೇ ಆಗಿದೆ.. ಆದ್ರೆ, ಯಾವ ರಾಜಕೀಯ ನಾಯಕರಿಗೂ, ಯಾವ ಪಕ್ಷದ ಮುಲಾಜಿಗೆ ಬೀಳದೆ ವಾಸ್ತವವನ್ನ ಎತ್ತಿಹಿಡಿಯುವ ಕೆಲಸವನ್ನ ಸ್ವಾತಿ ಚಂದ್ರಶೇಖರ್ ನಿರ್ವಹಿಸಿದ್ರೆ ಕನ್ನಡ ನಾಡಿಗೆ, ಪತ್ರಿಕೋದ್ಯಮಕ್ಕೆ ಒಳಿತಾಗಲಿದೆ.. ಇದೇ ವೇಳೆ ಕರ್ನಾಟಕಟಿವಿ.ನೆಟ್ ಕಡೆಯಿಂದಲೂ ಸ್ವಾತಿ ಚಂದ್ರಶೇಖರ್ ತಂಡಕ್ಕೆ ಶುಭಕೋರಲಾಗಿದೆ..

ಕೆಎಂ ಶಿವಕುಮಾರ್, ಕರ್ನಾಟಕ ಟಿವಿ, ಬೆಂಗಳೂರು

- Advertisement -

Latest Posts

Don't Miss