ಇನ್ಮುಂದೆ ಆಧಾರ್ ಪಡೆಯಲು ಸರ್ಕಾರ ಹೊಸ ನಿಯಮ ತಂದಿದೆ. ಭಾರತದ 140 ಕೋಟಿ ಜನರ ಪೈಕಿ ಬಹುಪಾಲು ಮಂದಿ ಈಗಾಗಲೇ ಆಧಾರ್ ಹೊಂದಿದ್ದಾರೆ. ಆದರೆ, ಈಗ UIDAI — ಅಂದರೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ, ಹೊಸದಾಗಿ ಆಧಾರ್ ನೋಂದಾಯಿಸಿಕೊಳ್ಳುವ ಹಾಗೂ ಹಳೆಯ ಆಧಾರ್ ನವೀಕರಣ ಮಾಡುವ ಪ್ರಕ್ರಿಯೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ.
ಬದಲಾವಣೆ ಏಕೆ ಮಾಡಲಾಗಿದೆ ಅಂತಾ ನೋಡೋದಾದ್ರೆ..
ಇತ್ತೀಚೆಗೆ, ನಕಲಿ ಆಧಾರ್, ಕಾನೂನುಬಾಹಿರ ಬಳಕೆ ಹಾಗೂ ನಕಲು ದಾಖಲೆಗಳಿಂದ ಆಧಾರ್ ಪಡೆದುಕೊಳ್ಳುವ ಘಟನೆಗಳು ಬೆಳಕಿಗೆ ಬಂದಿವೆ. ಇದರಿಂದಾಗಿ, ಪ್ರಾಮಾಣಿಕತೆಯನ್ನು ಹೆಚ್ಚಿಸಿ, ದೇಶದ ಒಳ ಭದ್ರತೆಗೆ ಧಕ್ಕೆಯಾಗದಂತೆ UIDAI ಇದೀಗ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದಿದೆ. ಆಧಾರ್ ಕಾರ್ಡ್ ಡಿಜಿಟಲ್ ಭದ್ರತೆ ಅಂದ್ರೆ ಬ್ಯಾಂಕ್, ಮೊಬೈಲ್ ಸಿಂಕ್, ಪಡಿತರ ಚೀಟಿ, ಪ್ಯಾನ್ಕಾರ್ಡ್, ತರಗತಿ ಪ್ರಮಾಣಪತ್ರ, ಎಲ್ಲದಕ್ಕು ಆಧಾರ್ ಕಾರ್ಡ್ ಅವಶ್ಯಕತೆ ಇದೆ.
ಹೆಚ್ಚುವರಿ ಪರಿಶೀಲನೆ ಏಕೆ ಅನ್ನೋದನ್ನ ನೋಡೋದಾದ್ರೆ UIDAI ಈಗ ಮುಂದಿನ ಹಂತದ ತಂತ್ರಜ್ಞಾನ ಬಳಸಲು ತಯಾರಾಗಿದೆ. ಭವಿಷ್ಯದಲ್ಲಿ ಪಾಸ್‌ಪೋರ್ಟ್‌ಗಳ ಡೇಟಾಬೇಸ, ಪಡಿತರ ಚೀಟಿ, ಜನನ ಪ್ರಮಾಣಪತ್ರ, 10ನೇ ತರಗತಿ ಪ್ರಮಾಣಪತ್ರ ಇವುಗಳ ಸಮನ್ವಯದ ಮೂಲಕ, ಅರ್ಜಿದಾರನ ವಿವರಗಳು ನಿಖರವಾಗಿದ್ಯಾ, ಇಲ್ವಾ ಅಂತ ಖಚಿತಪಡಿಸಿಕೊಳ್ಳಲಾಗುತ್ತದೆ. ಇದರಿಂದ ನಕಲಿ ದಾಖಲೆಗಳ ಬಳಕೆ ಸಂಪೂರ್ಣ ನಿಲ್ಲುವ ಸಾಧ್ಯತೆ ಇದೆ.
ಹೊಸ ಬದಲಾವಣೆಗಳ ಮುಖ್ಯ ಅಂಶಗಳನ್ನ ಗಮನಿಸೋದಾದ್ರೆ ಈಗ, ಹೊಸ ಆಧಾರ್‌ಗೆ ನೋಂದಾಯಿಸಲು ಬಯಸುವ ವಯಸ್ಕರಿಗೆ ಕಠಿಣ ಪರಿಶೀಲನೆ ಪ್ರಕ್ರಿಯೆಯನ್ನು ಜಾರಿಗೊಳಿಸಲಾಗಿದೆ. ಆನ್‌ಲೈನ್ ದತ್ತಾಂಶ ಬಳಕೆ ಮತ್ತು ನವೀಕರಣಗಳನ್ನು ಪರಿಶೀಲಿಸುತ್ತದೆ. ಪೌರತ್ವವನ್ನು ಖಚಿತಪಡಿಸಿಕೊಳ್ಳಲು ಒತ್ತು ನೀಡೋ ಗುರಿಯನ್ನು ಹೊಂದಿವೆ.
ಹೊಸ ನೋಂದಣಿಗಳಿಗೆ ಎರಡು ಹಂತದ ಪರಿಶೀಲನೆ ನಡೆಸಲಾಗುತ್ತೆ..
UIDAI ನೋಂದಣಿಗಳು ಮತ್ತು ನವೀಕರಣಗಳ ಸಮಯದಲ್ಲಿ ಭದ್ರತೆಯ ಹೆಚ್ಚುವರಿ ಹಂತಗಳನ್ನು ಸೇರಿಸುವ ಹೊಸ ಸಾಧನವನ್ನು ಅಭಿವೃದ್ಧಿಪಡಿಸಿದೆ. ಇದು ಡ್ರೈವಿಂಗ್ ಲೈಸೆನ್ಸ್, PAN ಕಾರ್ಡ್, ಮತ್ತು ವಿದ್ಯುತ್ ಬಿಲ್‌ಗಳಂತಹ ಆನ್‌ಲೈನ್ ಡೇಟಾಬೇಸ್‌ಗಳೊಂದಿಗೆ ಮಾಹಿತಿಯನ್ನು ಪರಿಶೀಲನೆ ಮಾಡುತ್ತದೆ. ಈ ಹಂತಗಳು ಕೇಂದ್ರೀಕೃತ KYC ಅವಶ್ಯಕತೆಗಳೊಂದಿಗೆ ಹೊಂದಿಕೆಯಾಗುತ್ತವೆ ಮತ್ತು ಸ್ಥಿರ ಮತ್ತು ಪರಿಶೀಲಿಸಿದ ಗುರುತಿನ ವ್ಯವಸ್ಥೆಯನ್ನು ನಿರ್ವಹಿಸಲು ಸಹಾಯ ಮಾಡುತ್ತವೆ.
ಇನ್ನು UIDAI ಇತ್ತೀಚೆಗೆ ಅಂದ್ರೆ ಮಾರ್ಚ್ 2025ರೊಳಗೆ 2 ಲಕ್ಷ ಹೊಸ ಆಧಾರ್ ಸಂಖ್ಯೆಗಳನ್ನು ನೀಡಲಾಗಿದೆ. 1.91 ಕೋಟಿ ನವೀಕರಣ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ, ನಕಲಿ ಅಥವಾ ನಕಲು ನೋಂದಣಿಗಳು ಮತ್ತು ಕಾನೂನುಬಾಹಿರ ಉದ್ದೇಶಗಳಿಗಾಗಿ ಆಧಾರ್ ದುರುಪಯೋಗದ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ ಸರ್ಕಾರವು ಹೊಸ ವಯಸ್ಕರ ನೋಂದಣಿಗಳ ನಿಯಮಗಳನ್ನು ಬಿಗಿಗೊಳಿಸಿದೆ.