Wednesday, October 23, 2024

Latest Posts

ರಾಜ್ಯಸರ್ಕಾರದಿಂದ ಹೊಸ ಯೋಜನೆ ಜಾರಿ: ಚಿಕಿತ್ಸೆಗಾಗಿ ಮನೆ ಬಾಗಿಲಿಗೆ ಬರಲಿದೆ ‘ಗೃಹ ಆರೋಗ್ಯ’

- Advertisement -

Political News: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಸದ್ಯಕ್ಕೆ ಗೃಹಲಕ್ಷ್ಮೀ, ಗೃಹ ಜ್ಯೋತಿ ಎನ್ನುವ ಯೋಜನೆ ಸೇರಿ ಹಲವು ಯೋಜನೆ ಜಾರಿಗೆ ತಂದಿದ್ದಾರೆ. ಅದರೊಂದಿಗೆ ಹೊಸ ಯೋಜನೆ ಕೂಡ ಅಕ್ಟೋಬರ್ 24ರಿಂದ ಜಾರಿಯಾಗುತ್ತಿದ್ದು, ಇದು ಗೃಹ ಆರೋಗ್ಯ ಯೋಜನೆಯಾಗಿದೆ.

ಇದು ಮನೆಗೆ ಬಂದು ಆರೋಗ್ಯ ಸೇವೆ ಒದಗಿಸುವ ವಿನೂತನ ಯೋಜನೆಯಾಗಿದೆ. ಮನೆ ಬಾಗಿಲಿಗೆ ಬರುವ ವೈದ್ಯರು, ಮನೆಜನರ ಆರೋಗ್ಯ ಸಮಸ್ಯೆಗೆ ಪರಿಹಾರ ಒದಗಿಸುತ್ತಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಆರ್ಥಿಕ ಹೊರೆಯಾಗುತ್ತದೆ ಎಂದು ಆರೋಗ್ಯವನ್ನು ನಿರ್ಲಕ್ಷಿಸುವುದು ಬೇಡ ಇದೇ ಅಕ್ಟೋಬರ್ 24 ರಿಂದ ನಿಮ್ಮ ಮನೆ ಬಾಗಿಲಿಗೆ “ಗೃಹ ಆರೋಗ್ಯ” ಬರಲಿದೆ.

ನಿಮ್ಮ ಆರೋಗ್ಯ ನಮ್ಮ ಕಾಳಜಿ.ಆರೋಗ್ಯ ತಪಾಸಣೆಗಾಗಿ ದೂರ ಪ್ರಯಾಣ ಮಾಡುವ ಅಗತ್ಯವಿಲ್ಲ ನಿಮ್ಮ ಮನೆ ಬಾಗಿಲಿಗೆ ಬರಲಿದೆ ‘ಗೃಹ ಆರೋಗ್ಯ’ ಬಾಯಿ ಕಾನ್ಸರ್, ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕಂಠ ಕಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಹೆಚ್ಚಿನ ಚಿಕಿತ್ಸೆಗಾಗಿ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಇದೇ ಅಕ್ಟೋಬರ್ 24 ರಿಂದ ನಿಮ್ಮ ಮನೆ ಬಾಗಿಲಗೆ ಬರಲಿದ್ದಾರೆ.ನಿಮ್ಮ ಮನೆ ಬಾಗಿಲಿಗೆ ಬರಲಿದೆ “ಗೃಹ ಆರೋಗ್ಯ” ಮಧುಮೇಹ, ರಕ್ತದೊತ್ತಡ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆಯೊಂದಿಗೆ ನಮ್ಮ ಆರೋಗ್ಯ ಇಲಾಖೆ ಇದೇ ಅಕ್ಟೋಬರ್ 24 ರಿಂದ ನಿಮ್ಮ ಬಾಗಿಲಗೆ ಬರಲಿದೆ. ನಿಮ್ಮ ಆರೋಗ್ಯದ ಕಾಳಜಿ ನಮ್ಮ ಆದ್ಯತೆ ಎಂದು ಟ್ವೀಟ್ ಮಾಡುವ ಮೂಲಕ ಯೋಜನೆ ಬಗ್ಗೆ ವಿವರಿಸಿದ್ದಾರೆ.

ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ, ಆ ಬಗ್ಗೆ ವೈದ್ಯರು ಜಾಗೃತಿ ಮೂಡಿಸುತ್ತಾರೆ. ಅಲ್ಲದೇ ಚಿಕಿತ್ಸೆಯ ಅಗತ್‌ಯವಿದ್ದಲ್ಲಿ, ಚಿಕಿತ್ಸೆ ಕೊಡಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಜಾರಿಗೆ ತಂದಿರುವ ಯೋಜನೆಗಳಲ್ಲಿ ಈ ಯೋಜನೆ ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗುವ ಸಾಧ್ಯತೆ ಇದೆ.

- Advertisement -

Latest Posts

Don't Miss