Sunday, June 1, 2025

Latest Posts

BJP :ಬಿಜೆಪಿಗೆ ಹೊಸ ಸಾರಥಿ! ನಡ್ಡಾಗೆ ಗೇಟ್ ಪಾಸ್?

- Advertisement -

ಹಾಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ‌.ಪಿ.ನಡ್ಡಾ ಬದಲಿಗೆ ಬಿಜೆಪಿಗೆ ಹೊಸ ಅಧ್ಯಕ್ಷರ ಆಯ್ಕೆ ಫೆಬ್ರವರಿ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ ಅಂತ ಪಕ್ಷದ ಹಿರಿಯ ನಾಯಕರೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಹೌದು 2020, ಫೆಬ್ರವರಿಯಲ್ಲಿ ಪಕ್ಷಾಧ್ಯಕ್ಷರಾಗಿ ಆಯ್ಕೆಯಾದ ಜಗತ್ ಪ್ರಕಾಶ್ ನಡ್ಡಾ ಪ್ರಸ್ತುತ ಕೇಂದ್ರ ಸಚಿವರೂ ಆಗಿದ್ದಾರೆ. ಆದ್ರೆ ಅವ್ರ ಅವಧಿ 3 ವರ್ಷವೇ ಆಗಿದ್ರೂ ,2024ರ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ 1 ವರ್ಷ ವಿಸ್ತರಿಸಲಾಗಿತ್ತು.

ಬಿಜೆಪಿ ಸಂವಿಧಾನದ ಪ್ರಕಾರ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೂ ಮುನ್ನ ಕನಿಷ್ಠ ಅರ್ಧದಷ್ಟು ರಾಜ್ಯ ಘಟಕಗಳ ಅಧ್ಯಕ್ಷರ ಆಯ್ಕೆಯಾಗಿರಬೇಕು. ರಾಜ್ಯ ಘ­ಟಕಗಳ ಪದಾಧಿಕಾರಿಗಳ ಆಯ್ಕೆ ಚುನಾವಣೆ ಜನವರಿ ಮಧ್ಯಭಾಗದ ಹೊತ್ತಿಗೆ ಮುಗಿಯುವ ಸಾಧ್ಯತೆಯಿದೆ. ಅದಾದ ಅನಂತರ ರಾಷ್ಟ್ರಾಧ್ಯಕ್ಷರ ಆಯ್ಕೆ ನಡೆಯಲಿದೆ.

ಅಧ್ಯಕ್ಷರ ಆಯ್ಕೆಯನ್ನು ಚುನಾವಣೆ ಮೂಲಕ ನಡೆಸಲಾಗುತ್ತದೆಯೋ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಅವಿ­ರೋಧವಾಗಿ ಆಯ್ಕೆ ಮಾಡಲಾ­ಗುತ್ತದೋ ಎಂದು ಮುಂದಷ್ಟೇ ಗೊತ್ತಾಗಬೇಕು. ಇಲ್ಲಿಯವರೆಗೆ ಬಹು­ತೇಕ ಅವಿರೋಧ ಆಯ್ಕೆಯೇ ನಡೆದಿದೆ. ಯಾರು ಅಧ್ಯಕ್ಷರಾಗಬಹುದೆನ್ನುವ ಸುಳಿವು ಇದುವರೆಗೆ ಲಭ್ಯವಾಗಿಲ್ಲ ಅಂತ ಮೂಲಗಳು ಹೇಳ್ತಿವೆ.

ಬಿಜೆಪಿಯ ಸುಮಾರು ಶೇ. 60 ರಷ್ಟು ರಾಜ್ಯ ಘಟಕದ ಅಧ್ಯಕ್ಷರ ಅಧಿಕಾರಾವಧಿ ಮುಗಿದಿದ್ದು, ಮುಂದಿನ ತಿಂಗಳು ರಾಜ್ಯ ಘಟಕಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಸಾಧ್ಯತೆಯಿದೆ ಅಂತ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.ಬಿಜೆಪಿಯ ಸಂವಿಧಾನವು ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗುವ ಮುನ್ನ, ಕನಿಷ್ಠ ಅರ್ಧದಷ್ಟು ರಾಜ್ಯ ಘಟಕಗಳಲ್ಲಿ ಸಾಂಸ್ಥಿಕ ಚುನಾವಣೆಗಳನ್ನು ಪೂರ್ಣಗೊಳಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.

“ಫೆಬ್ರವರಿ ಅಂತ್ಯದ ವೇಳೆಗೆ ಹೊಸ ಬಿಜೆಪಿ ಅಧ್ಯಕ್ಷರು ಅಧಿಕಾರ ವಹಿಸಿಕೊಳ್ಳುತ್ತಾರೆ ಅಂತ ನಾವು ನಿರೀಕ್ಷಿಸುತ್ತೇವೆ” ಅಂದಿದ್ದಾರೆ. ಬಿಜೆಪಿಯ ನೂತನ ಅಧ್ಯಕ್ಷರು ಪ್ರಸ್ತುತ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯಾಗಬಹುದೇ ಅನ್ನೋ ಪ್ರಶ್ನೆಗೆ, ಅದು ಸರ್ಕಾರದಿಂದ ಆಗಿರಬಹುದು ಅಥವಾ ಸಂಘಟನೆಯಿಂದ ಆಗಿರಬಹುದು, ಇನ್ನೂ ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ ಅಂತ ಅವರು ಹೇಳಿದ್ದಾರೆ.

- Advertisement -

Latest Posts

Don't Miss