Sunday, July 6, 2025

Latest Posts

ಕಳ್ಳರ ಹಿಡಿಯೋಕೆ ರಾಜ್ಯಕ್ಕೆ ಬಂತು ಹೊಸ ಟೆಕ್ನಾಲಜಿ…!

- Advertisement -

www.karnatakatv.net :ಬೆಂಗಳೂರು: ಪೊಲೀಸರ ಕಾರ್ಯದಕ್ಷತೆ ಹೆಚ್ಚಿಸಲು ಇನ್ಮುಂದೆ ಫೇಶಿಯಲ್  ರೆಕಗ್ನಿಷನ್ ಸಿಸ್ಟಮ್ ಗೆ ಚಾಲನೆ ಸಿಕ್ಕಿದ್ದು, ಇದರಿಂದ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದವರನ್ನ ಪತ್ತೆ ಹಚ್ಚಲು ಪೊಲೀಸರಿಗೆ ಮತ್ತಷ್ಟು ಸುಲಭವಾಗಲಿದೆ.

ಬೆಂಗಳೂರಲ್ಲಿ ಇಂದು ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಕಿರು ಸಮಾವೇಶ ನಡೆಯಿತು. ಈ ವೇಳೆ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಮುಖ ಗುರುತಿಸುವ ವ್ಯವಸ್ಥೆಗೆ (ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್)ಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದ್ರು.

ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯ ಪೊಲೀಸರು ಅತ್ಯಂತ ದಕ್ಷ ಮತ್ತು ನಿಷ್ಪಕ್ಷಪಾತ ತನಿಖೆಯಿಂದಲೇ ಖ್ಯಾತಿ ಗಳಿಸಿದ್ದಾರೆ. ಈ ಪರಂಪರೆಯನ್ನು ಹೀಗೆ ಮುಂದುವರಿಸಬೇಕು, ತಮಗೆ ನೀಡಿರೋ ಅಧಿಕಾರವನ್ನ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳೋ ಮೂಲಕ ಜನಸಾಮಾನ್ಯರಿಗೆ ರಕ್ಷಣೆ ನೀಡಬೇಕು ಅಂತ ಬೊಮ್ಮಾಯಿ ಕರೆ ನೀಡಿದ್ರು.

ಕರ್ನಾಟಕ ಟಿವಿ- ಬೆಂಗಳೂರು

- Advertisement -

Latest Posts

Don't Miss