ಕಾಫಿನಾಡಿನಿಂದ ತಿಮ್ಮಪ್ಪನ ಸನ್ನಿಧಿಗೆ ಹೊಸ ರೈಲು!

ಚಿಕ್ಕಮಗಳೂರು-ತಿರುಪತಿ ನಡುವೆ, ಹೊಸ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸೇವೆಗೆ ಅನುಮೋದನೆ ಸಿಕ್ಕಿದೆ. ಇದು ಆಂಧ್ರಪ್ರದೇಶ ಮತ್ತು ಕರ್ನಾಟಕದ ಮಲೆನಾಡು ಪ್ರದೇಶದ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ.

ಜುಲೈ 11ರಂದು ಮಧ್ಯಾಹ್ನ 12 ಗಂಟೆಗೆ ಚಿಕ್ಕಮಗಳೂರಿನಿಂದ ಹೊರಡಲಿರುವ ಸಾಪ್ತಾಹಿಕ ಎಕ್ಸ್ ಪ್ರೆಸ್​ ಗೆ, ಕೇಂದ್ರ ಸಚಿವ ವಿ. ಸೋಮಣ್ಣ ಚಾಲನೆ ನೀಡಲಿದ್ದಾರೆ. ಮರುದಿನ ಬೆಳಗ್ಗೆ 2.30ಕ್ಕೆ ತಿರುಪತಿ ತಲುಪಲಿದೆ. ಅರಸೀಕೆರೆ-ತುಮಕೂರು-ಬೆಂಗಳೂರು ಮೂಲಕ ಬಂಗಾರಪೇಟೆ, ಚಿತ್ತೂರು ಮಾರ್ಗವಾಗಿ ತಿರುಪತಿ ತಲುಪಲಿದೆ. ಈ ರೈಲು ಒಟ್ಟು 18 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ಜುಲೈ 17, 18ರಿಂದ ನಿಯಮಿತ ಸೇವೆಗಳು ಪ್ರಾರಂಭವಾಗಲಿದ್ದು, ಈ ರೈಲುಗಳು 18 ಎಲ್​ ಹೆಚ್​ ಬಿ ಕೋಚ್​ ಗಳನ್ನು ಹೊಂದಿರುತ್ತವೆ. ಈ ಸೇವೆಯೂ ಎರಡೂ ಪ್ರದೇಶಗಳ ಪ್ರಯಾಣಿಕರಿಗೆ, ಅನುಕೂಲಕರ ಸಾರಿಗೆ ವ್ಯವಸ್ಥೆಯನ್ನು ಒದಗಿಸುತ್ತದೆ.

07423 ನಂಬರಿನ ರೈಲು ಪ್ರತಿ ಗುರುವಾರ ರಾತ್ರಿ 10 ಗಂಟೆಗೆ ತಿರುಪತಿಯಿಂದ ಹೊರಟು, ಮರುದಿನ ಶುಕ್ರವಾರ ಬೆಳಗ್ಗೆ 10.30ಕ್ಕೆ ಚಿಕ್ಕಮಗಳೂರು ತಲುಪಲಿದೆ. ಮತ್ತು 07424 ನಂಬರಿನ ರೈಲು ಪ್ರತಿ ಶುಕ್ರವಾರ ಬೆಳಗ್ಗೆ 7.40ಕ್ಕೆ ಚಿಕ್ಕಮಗಳೂರಿನಿಂದ ಹೊರಟು, ಮರುದಿನ ಶನಿವಾರ ಬೆಳಗ್ಗೆ 7.40ಕ್ಕೆ ತಿರುಪತಿ ತಲುಪಲಿದೆ.

About The Author