Sunday, September 8, 2024

Latest Posts

ಹೊಸ ವೆಬ್‌ಸೈಟ್ ಶುರುಮಾಡಿದ ಚಕ್ರವರ್ತಿ & ಟೀಮ್: ಇಲ್ಲಿದೆ ಮಾಹಿತಿ

- Advertisement -

ಯುವಬ್ರೀಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಮ್ಮ ತಂಡದವರೊಂದಿಗೆ ಸೇರಿ ರೆಲ್ಲೊಪ್ಲೇಕ್ಸ್ ಎಂಬ ವೆಬ್‌ಸೈಟ್ ಶುರು ಮಾಡಿದ್ದು, ಈ ವೆಬ್‌ಸೈಟನ್ನ ಕರ್ನಾಟಕದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಉದ್ಘಾಟಿಸಿದ್ದಾರೆ. ರೆಲ್ಲೊಪ್ಲೇಕ್ಸ್ ವೆಬ್‌ಸೈಟ್ ಮೂಲಕ ಪೌರಾಣಿಕ ಮತ್ತು ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ ಪಡೆಯಬಹುದು.

ವೆಬ್‌ಸೈಟ್ ಉದ್ಘಾಟಿಸಿ ಮಾತನಾಡಿದ ಸಚಿವ ಸಿ.ಟಿ.ರವಿ, ಅಭಿನಂದನೆ ಸಲ್ಲಿಸಿದ್ದು, ಕರ್ನಾಟಕದ ಇತಿಹಾಸದಲ್ಲಿ ಇದೊಂದು ಚಾರಿತ್ರಿಕ ಮೈಲಿಗಲ್ಲು ಎಂದು ಸಿ.ಟಿ.ರವಿ ಹೇಳಿದರು. ರಾಜ್ಯದ ಬಗ್ಗೆ ತಿಳಿದುಕೊಳ್ಳಲು ರೆಲ್ಲೋ ಪ್ಲೇಕ್ಸ್ ಸಹಾಯ ಮಾಡಲಿದೆ. ಈ ಮೂಲಕ ನಾಡಿನ ಸಾಂಸ್ಕತಿಕ ಶ್ರೀಮಂತಿಕೆಯ ಪರಿಚಯ ಜಗತ್ತಿನ ಉದ್ದಗಲಕ್ಕೆ ಆಗಲಿ ಎಂದು ಹಾರೈಸಿದರು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಚಕ್ರವರ್ತಿ ಸೂಲಿಬೆಲೆ, ರೆಲ್ಲೊ_ಪ್ಲೇಕ್ಸ್ ಎಲ್ಲರ ಮನಸೂರೆಗೊಂಡಿದೆ. ಇಂತಹ ಪ್ರಯತ್ನವೊಂದಕ್ಕೆ ತುಂಬ ಜನ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇಂದು ರೆಲ್ಲೊ ಪ್ಲೇಕ್ಸ್‌ನ ವೆಬ್‌ಸೈಟನ್ನು ಮಿತ್ರರೂ, ಕರ್ನಾಟಕದ ಪ್ರವಾಸೋದ್ಯಮ ಇಲಾಖೆಯ ಮಂತ್ರಿಗಳೂ ಆಗಿರುವ ಶ್ರೀಯುತ ಸಿ.ಟಿ. ರವಿಯವರು ಉದ್ಘಾಟಿಸಿದರು. ಈ ಯೋಜನೆ ಸ್ಥಳೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡುವುದಲ್ಲದೇ ಕರ್ನಾಟಕದ ಇತಿಹಾಸ, ಪರಂಪರೆಯ ವೈಭವಗಳನ್ನು ಎತ್ತಿ ಹಿಡಿಯುವುದೆಂದು ಶ್ಲಾಘಿಸಿದರೂ ಕೂಡ.

ಕರ್ನಾಟಕದ ಪ್ರತಿ ಜಿಲ್ಲೆಯೂ, ಪ್ರತಿ ಹಳ್ಳಿಯೂ ತನ್ನದೇ ಆದ ಕೊಡುಗೆಯನ್ನು ರಾಜ್ಯ ನಿರ್ಮಾಣಕ್ಕೆ ಕೊಟ್ಟಿದೆ. ಅವೆಲ್ಲವನ್ನೂ ಗುರುತಿಸಿ ಜಾಗತಿಕ ಮಟ್ಟದಲ್ಲಿ ಪ್ರತಿಬಿಂಬಿಸುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಎಲ್ಲರೂ ಈ ಪ್ರಯತ್ನದಲ್ಲಿ ಜೊತೆಯಾಗೋಣ ಎಂದಿದ್ದಾರೆ.

- Advertisement -

Latest Posts

Don't Miss