Friday, July 11, 2025

Latest Posts

70 ಕೋಟಿ ರೂ ವೆಚ್ಚದಲ್ಲಿ ನೂತನ ಕಾಮಗಾರಿ ಚಾಲನೆ..!

- Advertisement -

www.karnatakatv.net : ತುಮಕೂರು: ನಗರದ  ಮಹಾನಗರ ಪಾಲಿಕೆಯ ಆವರಣದಲ್ಲಿರುವ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಕಛೇರಿಯಲ್ಲಿ ಇಂದು 70 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕಾಮಗಾರಿಗಳಿಗೆ ಚಾಲನೆ ನೀಡಲಾಯ್ತು.

ಅಪರಾಧ ಕೃತ್ಯಗಳು, ಟ್ರಾಫಿಕ್ ಸಮಸ್ಯೆಗಳು ಹಾಗೂ ಆರೋಗ್ಯದ ಸಮಸ್ಯೆಗಳಿಗೆ ತುರ್ತು ಸ್ಪಂದನೆ ಸಿಗುವ ನಿಟ್ಟಿನಲ್ಲಿ ಈ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಸಂಪೂರ್ಣ ಡಿಜಿಟಲಿಕರಣವನ್ನ ಬಳಸಿಕೊಂಡು ನೊಂದವರಿಗೆ ಧ್ವನಿಯಾಗೋ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಮುಂದಾಗಿದೆ. ಇದರ ಜೊತೆಗೆ ಸ್ಲಂ ನಿವಾಸಿಗಳಿಗೆ ಮನೆ ನಿರ್ಮಾಣ ಕಾರ್ಯ, ತುರ್ತು ಸಂದರ್ಭದಲ್ಲಿ ಆಸ್ಪತ್ರೆ ಸೌಲಭ್ಯಗಳಿಗೆ ದೂರವಾಣಿ ಸೇರಿದಂತೆ ಈ ಪ್ರಜೆಕ್ಟ್ ಮೂಲಕ ಅನುಷ್ಠಾನಗೊಳಿಸೋಕೆ ಸ್ಮಾರ್ಟ್ ಸಿಟಿ ಮುಂದಾಗಿದೆ.

ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಎಸ್ ಪಾಟೀಲ್, ಪಾಲಿಕೆ ಆಯುಕ್ತೆ ರೇಣುಕಾ, ಹಾಗೂ ನಗರ ಶಾಸಕ ಜ್ಯೋತಿಗಣೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ದರ್ಶನ್ ಕೆ.ಡಿ.ಆರ್,ಕರ್ನಾಟಕ ಟಿವಿ-  ತುಮಕೂರು

- Advertisement -

Latest Posts

Don't Miss