Friday, June 20, 2025

Latest Posts

ನ್ಯೂ ಇಯರ್ ಗೆ ಬೆಂಗಳೂರಿನಲ್ಲಿ 500 ಸಿಸಿಟಿವಿ ಕಣ್ಗಾವಲು

- Advertisement -

ಬೆಂಗಳೂರು: ಹೊಸ ವರ್ಷಕ್ಕೆ ಇನ್ನೇನು ಎರಡೇ ದಿನ ಬಾಕಿ ಇದ್ದು, ಸಂಭ್ರಮಿಸಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ಗಳಲ್ಲಿ ಜನರು ಜಾಸ್ತಿ ಸೇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ನಾವು ನಮ್ಮ ಬೆಂಗಳೂರು ಸುರಕ್ಷಿತವಾಗಿಡಲು ಹೆಚ್ಚಿನ ಸಮಯ ಕೆಲಸ ಮಾಡುತ್ತೇವೆ. ನಮಗೆ ಕೈ ಕೊಡಿ – ನೀವು ಏನನ್ನಾದರೂ ಅಹಿತಕರ ಸಂದರ್ಭಗಳು, ವ್ಯಕ್ತಿಗಳನ್ನು ಗಮನಿಸಿದಾಗ, 112ಕ್ಕೆ ಕರೆ ಮಾಡಿ ಎಂದು ಪೊಲೀಸ್ ಕಮಿಷನರ್ ಸಿ.ಹೆಚ್ ಪ್ರತಾಪ್ ರೆಡ್ಡಿ ಅವರು ಟ್ವೀಟ್ ಮಾಡಿದ್ದಾರೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಟ್ವೀಟ್‌ ಮಾಡಿ ಅವರು ತಿಳಿಸಿದ್ದಾರೆ.

ನಾಳೆ ಮಂಡ್ಯಕ್ಕೆ ಅಮಿತ್ ಷಾ ಆಗಮನ : ಪೂರ್ವ ಸಿದ್ಧತೆ ಪರಿಶೀಲಿಸಿದ ಸಿ.ಪಿ ಯೋಗೇಶ್ವರ್

ಪ್ರತಿ 30 ಅಡಿ ಮತ್ತು ಪರ್ಯಾಯ ಲೈಟ್ ಕಂಬಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬ್ರಿಗೇಡ್ ರಸ್ತೆ, ಎಂಜಿ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ಗಳಲ್ಲಿ ಫುಟ್‌ಪಾತ್ ಮತ್ತು ರಸ್ತೆಗಳನ್ನು ಕವರ್ ಮಾಡಲು ಆರು ಡ್ರೋನ್‌ಗಳನ್ನು ನಿಯೋಜಿಸಲಾಗುವುದು ಎಂದು ಸ್ಟರ್ಲಿಂಗ್ ಸಿಸಿಟಿವಿ ಕ್ಯಾಮೆರಾಗಳ ಸೊಲ್ಯೂಷನ್ಸ್‌ನ ಎಚ್‌ಕೆ ವಿನೋದ್ ಕುಮಾರ್ ಹೇಳಿದ್ದಾರೆ. ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್‌ಗಳು ಮತ್ತು ಆಂಬ್ಯುಲೆನ್ಸ್ ಸೇವೆಯನ್ನು ಸಹ ಸಿದ್ಧವಾಗಿ ಇರಿಸಲಾಗುತ್ತದೆ ಎಂದರು.

2020 ರಿಂದ 113 ಬಾರಿ ಭದ್ರತಾ ಪ್ರೋಟೋಕಾಲ್‌ಗಳನ್ನು ಮುರಿದ ರಾಹುಲ್ ಗಾಂಧಿ

ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷತೆಯನ್ನು ಒದಗಿಸುವುದು ಪೊಲೀಸರ ಮೊದಲ ಆದ್ಯತೆಯಾಗಿದ್ದು ಯಾವುದೇ ದುಷ್ಕೃತ್ಯಗಳು ನಡೆಯದಂತೆ ಡ್ರೋನ್ ಕ್ಯಾಮರಗಳನ್ನು ನಿಯೋಜಿಸಲಾಗುವುದು, ನಾವು ಅದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ ಎಂದು ರೆಡ್ಡಿ ಹೇಳಿದರು. ಬಾರ್ ಮತ್ತು ರೆಸ್ಟೋರೆಂಟ್‌ಗಳು ಮತ್ತು ಪಬ್‌ಗಳು ತಮ್ಮ ಆವರಣದಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಪೊಲೀಸರು ಸೂಚಿಸಿದ್ದಾರೆ. ತಪಾಸಣೆಯ ನಂತರ ಟ್ವಿಟ್ ಮಾಡಿದ ಅವರು, ಹೊಸ ವರ್ಷವನ್ನು ಆಚರಿಸುವ ಜನರು ಧ್ವನಿವರ್ಧಕಗಳನ್ನು ಬಳಸಲು ಧ್ವನಿ ಮಾಲಿನ್ಯ ನಿಯಮಗಳ ಅಡಿಯಲ್ಲಿ ಕಡ್ಡಾಯ ಪರವಾನಗಿಯನ್ನು ಪಡೆದುಕೊಳ್ಳಲು ಮತ್ತು ಡೆಸಿಬಲ್ ಮಿತಿಗಳು ಮತ್ತು ಸಮಯವನ್ನು ಅನುಸರಿಸಲು ಸೂಚಿಸಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಡಾ.ರಾಜ್ ಕುಟುಂಬದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಟ್ರೋಲ್ : ಸಿಡಿದೆದ್ದ ಅಪ್ಪು ಫ್ಯಾನ್ಸ್

ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರ ಉಪನಗರ ರೈಲು ಯೋಜನೆ: 268 ಮರ ಕಡಿಯಲು ಬಿಬಿಎಂಪಿ

- Advertisement -

Latest Posts

Don't Miss