- Advertisement -
ಬೆಂಗಳೂರು : 2022ರ ಸಂಭ್ರಮಾಚರಣೆ ಮಾಡಲು ರೆಡಿಯಾಗಿರುವವರಿಗೆ ಮುಖ್ಯಮಂತ್ರಿ ಶಾಕ್ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ 50:50 ಜಾರಿಯಲ್ಲಿರುತ್ತದೆ ಎಂದು ಹೇಳುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಗೊಂದಲಕ್ಕೆ ದೂಡಿದ್ದಾರೆ. ಈ ನಡುವೆ ಹೋಟೆಲ್ ಮಾಲೀಕರ ಸಂಘ ಆಕ್ಷೇಪ ಮಾಡಿದ್ದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶೀ ಕೊಟ್ಟಿರುವ ಆದೇಶದ ಪ್ರಕಾರ 50:50 ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಸರ್ಕಾರದ ಅಧಿಕೃತ ಮಾರ್ಗಸೂಚಿಯಲ್ಲಿ ಸಿಎಂ ಹೇಳಿಂದಂತೆ ಯಾವುದೇ ಮಾಹಿತಿ ಇಲ್ಲ ಅನ್ನೋದು ಹೋಟೆಲ್, ರೆಸ್ಟೋರೆಂಟ್ ಮಾಲೀಕರ ವಾದ. ಯಾಕಂದ್ರೆ ಈಗಾಗಲೇ 100% ಸೀಟ್ ರಿಸರ್ವೇಷನ್ ಮಾಡಲಾಗಿದೆ. ಈಗ ಸಿಎಂ ಹೇಳಿಕೆ ಗೊಂದಲಕ್ಕೆ ಕಾರಣವಾಗಿದೆ.
ಕರ್ನಾಟಕ ಟಿವಿ, ಬೆಂಗಳೂರು ಬ್ಯೂರೋ
- Advertisement -