ಕರೊನಾ ಸಂಖ್ಯೆ ಹೆಚ್ಚಳ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 65 ಆಸ್ಪತ್ರೆಗಳನ್ನ ಆಯುಷ್ಮಾನ್ ವ್ಯಾಪ್ತಿಗೆ ತರಲಾಗಿದ್ದು ಈ ಮೂಲಕ ಜನರು ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ ಅಂತಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.
ಈಗಾಗಲೇ 8 ಮೆಡಿಕಲ್ ಕಾಲೇಜು ಸೇರಿದಂತೆ 9 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 24ಕ್ಕೂ ಹೆಚ್ಚು ಆಸ್ಪತ್ರೆಗಳು ಆಯುಷ್ಮಾನ್ಗೆ ನೋಂದಣಿಯಾಗಲಿವೆ. 50ಕ್ಕಿಂತ ಹೆಚ್ಚು ಬೆಡ್ಗಳನ್ನ ಹೊಂದಿರುವ ಆಸ್ಪತ್ರೆಗಳನ್ನ ಆಯುಷ್ಮಾನ್ ವ್ಯಾಪ್ತಿಗೆ ತರಲಿದ್ದೇವೆ ಅಂತಾ ಹೇಳಿದ್ರು.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಪೀಡಿತರ ಸಂಖ್ಯೆ ಜಾಸ್ತಿ ಇದೆ. ಹೀಗಾಗಿ ಆಯುಷ್ಮಾನ್ ಭಾರತ್ ಯೋಜನೆ ಹಾಗೂ ಆಂಟಿಜನ್ ಟೆಸ್ಟ್ಗಳ ಸಹಾಯದಿಂದ ಜಿಲ್ಲೆಯಲ್ಲಿ ಸೋಂಕು ತಡೆಗೆ ಯತ್ನಿಸಲಾಗ್ತಿದೆ. ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ವೆಂಟಿಲೇಟರ್ಗಳನ್ನೂ ತರಿಸಿಕೊಂಡಿದ್ದು ಪ್ರತಿ ಆಸ್ಪತ್ರೆಗೆ ಮೂರರಂತೆ ಹಂಚಿಕೆ ಮಾಡಿದ್ದೇವೆ ಅಂತಾ ಮಾಹಿತಿ ನೀಡಿದ್ರು.